ETV Bharat / state

22 ಪೊಲೀಸ್ ಠಾಣೆಗಳಿಗೆ 'ದುರ್ಗಾ ಫೆಸಿಲಿಟೀಸ್' ಸಂಸ್ಥೆಯಿಂದ ಸ್ಯಾನಿಟೈಸೇಷನ್

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 22 ಪೊಲೀಸ್ ಠಾಣೆಗಳಿಗೆ 'ದುರ್ಗಾ ಫೆಸಿಲಿಟೀಸ್' ಸಂಸ್ಥೆಯಿಂದ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ.

author img

By

Published : May 9, 2021, 8:32 AM IST

Sanitation of 22 police station
22 ಪೊಲೀಸ್ ಠಾಣೆಗಳಿಗೆ 'ದುರ್ಗಾ ಫೆಸಿಲಿಟೀಸ್' ಸಂಸ್ಥೆಯಿಂದ ಸ್ಯಾನಿಟೈಸೇಷನ್

ಮಂಗಳೂರು: ನಗರದ ಪೊಲೀಸ್ ಕಮಿಷನರ್ ಕಚೇರಿ ಸೇರಿದಂತೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿರುವ 22 ಪೊಲೀಸ್ ಠಾಣೆಗಳಿಗೆ ಹೆಸರಾಂತ ಹೌಸ್ ಕೀಪಿಂಗ್ ಸಂಸ್ಥೆ 'ದುರ್ಗಾ ಫೆಸಿಲಿಟೀಸ್' ಉಚಿತವಾಗಿ ಸ್ಯಾನಿಟೈಸೇಷನ್ ಮಾಡಲು ಮುಂದಾಗಿದೆ.

ಪೊಲೀಸ್ ಕಮಿಷನರ್ ಶಶಿಕುಮಾರ್.ಎನ್ ಪರವಾನಿಗೆ ಮೇರೆಗೆ ಶನಿವಾರ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಕೊರೊನಾ ವಾರಿಯರ್ಸ್​ಗಳಾಗಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಪೊಲೀಸರು ಮತ್ತು ಪೊಲೀಸ್ ಇಲಾಖೆಯ ಮೇಲಿನ ಗೌರವ ಸೂಚಕವಾಗಿ ಈ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ ಎಂದು 'ದುರ್ಗಾ ಫೆಸಿಲಿಟೀಸ್' ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಬಿ.ಸಚ್ಚಿದಾನಂದ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.