ETV Bharat / state

ಜೊಮ್ಯಾಟೊ ಡೆಲಿವರಿ ಬಾಯ್ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ.. ಅಷ್ಟಕ್ಕೂ ಆತ ಮಾಡಿದ್ದೇನು....?

ಆಗಾಗ ಸುದ್ದಿಯಲ್ಲಿರುವ ಜೊಮ್ಯಾಟೊ ಫುಡ್ ಡೆಲಿವರಿ ಕಂಪನಿ ಮತ್ತೆ ಸುದ್ದಿಯಲ್ಲಿದೆ. ಸಂಸ್ಥೆಯ ಡೆಲಿವರಿ ಬಾಯ್ ಒಬ್ಬನ ಸಾಮಾಜಿಕ ಕಳಿಕಳಿ ಕಾರ್ಯ ಸಾರ್ವಜನಿಕರ ಪ್ರಶಂಶೆಗೆ ಪಾತ್ರವಾಗಿದೆ.

ಸತ್ತಾರ್ ಬಂಟ್ವಾಳ, ಜೊಮ್ಯಾಟೊ ಡೆಲಿವರಿ ಬಾಯ್
author img

By

Published : Sep 3, 2019, 9:29 PM IST

ಮಂಗಳೂರು: ವಿವಿಧ ವಿಚಾರಗಳಿಗೆ ಆಗಾಗ ಸುದ್ದಿಯಾಗುವ ಜೊಮ್ಯಾಟೊ ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ, ಈಗ ಮತ್ತೆ ಸುದ್ದಿಯಲ್ಲಿದೆ. ಸಂಸ್ಥೆಯ ಡೆಲಿವರಿ ಬಾಯ್​ ಒಬ್ಬ ತನ್ನ ಸಾಮಾಜಿಕ ಕಳಕಳಿಯಿಂದ ಎಲ್ಲರ ಶ್ಲಾಘನೆಗೆ ಪಾತ್ರನಾಗಿದ್ದು, ತನ್ನ ಉದ್ಯೋಗಿಯ ಕಾರ್ಯವನ್ನು ಸ್ವತಃ ಜೊಮ್ಯಾಟೊ ಸಂಸ್ಥೆಯೇ ಮುಕ್ತ ಕಂಠದಿಂದ ಹೊಗಳಿ ಬೆನ್ನು ತಟ್ಟಿದೆ.

ಕಳೆದ ಭಾನುವಾರ ಮಧ್ಯಾಹ್ನ, ಸತ್ತಾರ್ ಬಂಟ್ವಾಳ ಎಂಬ ಜೊಮ್ಯಾಟೊ ಡೆಲಿವರಿ ಬಾಯ್​ಗೆ ಹೋಟೆಲೊಂದರಿಂದ 350 ರೂ. ಬೆಲೆಯ ಚಿಕನ್ ಬಿರಿಯಾನಿ ಹಾಗೂ ಕಬಾಬ್ ಗೆ ಕ್ಯಾಶ್ ಅಂಡ್​ ಡೆಲಿವರಿ ಆರ್ಡರ್ ಬಂದಿತ್ತು. ಆದರೆ, ಡೆಲಿವರಿ ಹೊತ್ತಿಗೆ ಗ್ರಾಹಕನು ನಿಶ್ಚಿತ ಸ್ಥಳದಲ್ಲಿ ಇರದೇ ನಗರದ ಹೊರವಲಯದ ನೀರು ಮಾರ್ಗದಲ್ಲಿದ್ದ.‌ ಅಂದರೆ ಸುಮಾರು 13 ಕಿ.ಮೀ. ದೂರದಲ್ಲಿದ್ದ. ಈ ಬಗ್ಗೆ ಮಾಹಿತಿ ತಿಳಿದ ಸತ್ತಾರ್, ಜೊಮ್ಯಾಟೊ ಕಂಪನಿಗೆ ವಿಷಯ ತಿಳಿಸಿದ್ದರು. ಇದರಿಂದ ಕಂಪನಿ ಆರ್ಡರ್ ರದ್ದು ಮಾಡಿದೆ. ಈ ವೇಳೆ ತನ್ನಲ್ಲಿ ಉಳಿದ ಆಹಾರವನ್ನು ಸತ್ತಾರ್, ರಸ್ತೆ ಬದಿ ಭಿಕ್ಷುಕನೋರ್ವನಿಗೆ ನೀಡಿದ್ದು, ಡೆಲಿವರಿ ಬಾಯ್​ಯ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಸತ್ತಾರ್ ಬಂಟ್ವಾಳ, ಜೊಮ್ಯಾಟೊ ಡೆಲಿವರಿ ಬಾಯ್

ಈ ಬಗ್ಗೆ ಸತ್ತಾರ್ ಬಂಟ್ವಾಳ ಮಾತನಾಡಿ, ನನ್ನಲ್ಲಿ ಉಳಿದ ಬಿರಿಯಾನಿಯನ್ನು‌ ಏನು ಮಾಡಬೇಕೆಂದು ತಿಳಿಯದೇ, ನನಗೆ ಮತ್ತೊಂದು ಫುಡ್ ಡೆಲಿವರಿ ಇದ್ದ ವೆಲೆನ್ಸಿಯಾಕ್ಕೆ ತೆರಳಿದ್ದ. ಈ ಸಂದರ್ಭ ಮಿತ್ರ ಅನೀಸ್ ಎಂಬುವವರ ಸಲಹೆ ಮೇರೆಗೆ ಯಾರಿಗಾದರೂ ಭಿಕ್ಷುಕರಿಗೆ ಬಿರಿಯಾನಿ ಪ್ಯಾಕೆಟ್ ಕೊಡುವ ಆಲೋಚನೆಯಲ್ಲಿದ್ದೆ. ಆಗ ಅಲ್ಲೇ ರಸ್ತೆ ಬದಿಯಲ್ಲಿ ಒಬ್ಬ ಭಿಕ್ಷುಕ ಇದ್ದ. ನನ್ನಲ್ಲಿದ್ದ ಆರ್ಡರ್ ರದ್ದುಗೊಂಡ ಬಿರಿಯಾನಿ ಹಾಗೂ ಕಬಾಬ್​ನ್ನು ಆತನಿಗೆ ಕೊಟ್ಟೆ. ಜೊಮ್ಯಾಟೊ ಕಂಪನಿಯ ಸಾಕ್ಷಿಗಾಗಿ ಸೆಲ್ಫಿಯೊಂದನ್ನು ಕ್ಲಿಕ್ಕಿಸಿದೆ. ನನ್ನ ಈ ಕಾರ್ಯದ ಬಗ್ಗೆ ಸ್ವತಃ ಜೊಮ್ಯಾಟೊ ಕಂಪನಿಯಿಂದಲೇ ಪ್ರಶಂಸೆಗೊಳಗಾದೆ. ಅಲ್ಲದೇ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ಕೇಳಿ ಬರುತ್ತಿದೆ. ನನ್ನ ಈ ಕಾರ್ಯದ ಬಗ್ಗೆ ಆತ್ಮ ತೃಪ್ತಿ ಇದೆ. ಈ ರೀತಿಯ ಸ್ಪಂದನೆ ಬರುತ್ತದೆ ಎಂದು ಗೊತ್ತೇ ಇರಲಿಲ್ಲ. ಈ ಹಿಂದೆಯೂ ಇದೇ ತರಹ ಆರ್ಡರ್ ರದ್ದಾದ ಆಹಾರಗಳನ್ನು ಹಸಿದವರಿಗೆ ನೀಡಿದ್ದೆ, ಆದರೆ, ಫೋಟೋ ಕ್ಲಿಕ್ಕಿಸಿರಲಿಲ್ಲ. ಈಗ ಸಾರ್ವಜನಿಕರು ನೀಡುತ್ತಿರುವ ಸ್ಪಂದನೆಯಿಂದ ಬಹಳ ಸಂತೋಷವಾಗುತ್ತಿದೆ ಎಂದರು.

Intro:ಮಂಗಳೂರು: ಝೊಮ್ಯಾಟೊ ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆಯ ಬಗ್ಗೆ ಈಗ ಎಲ್ಲರಿಗೂ ತಿಳಿದಿದೆ. ಈ ಸಂಸ್ಥೆಯ ಡೆಲಿವರಿ ಬಾಯ್ ಸತ್ತರ್ ಬಂಟ್ವಾಳ ತಮ್ಮ ಸಾಮಾಜಿಕ ಕಳಕಳಿಯಿಂದ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಇವರ ಈ ಕಾರ್ಯದ ಬಗ್ಗೆ ಸ್ವತಃ ಝೊಮ್ಯಾಟೊ ಸಂಸ್ಥೆಯೇ ಮುಕ್ತ ಕಂಠದಿಂದ ಹೊಗಳಿ ಬೆನ್ನು ತಟ್ಟಿದೆಯಂತೆ...ಹಾಗಾದರೆ ಇವರು ಮಾಡಿದ ಆ ಕಾರ್ಯವೇನು....? ಈ ಬಗ್ಗೆ ವರದಿ ಇಲ್ಲಿದೆ.

ಮೊನ್ನೆ ಆದಿತ್ಯವಾರ ಮಧ್ಯಾಹ್ನ ಸತ್ತರ್ ಬಂಟ್ವಾಳ ಅವರಿಗೆ ಹೊಟೇಲೊಂದರಿಂದ 350 ರೂ. ಬೆಲೆಯ ಚಿಕನ್ ಬಿರಿಯಾನಿ ಹಾಗೂ ಕಬಾಬ್ ಗೆ ಕ್ಯಾಶ್ ಆ್ಯಂಡ್ ಡೆಲಿವರಿ ಆರ್ಡರ್ ಬಂದಿತ್ತು. ಆದರೆ ಡೆಲಿವರಿ ಹೊತ್ತಿಗೆ ಗ್ರಾಹಕನು ನಿಶ್ಚಿತ ಸ್ಥಳದಲ್ಲಿ ಇರದೆ ನಗರದ ಹೊರವಲಯದ ನೀರುಮಾರ್ಗದಲ್ಲಿದ್ದ.‌ ಅಂದರೆ ಸುಮಾರು 13 ಕಿ.ಮೀ. ದೂರದಲ್ಲಿದ್ದ. ಈ ಬಗ್ಗೆ ಮಾಹಿತಿ ತಿಳಿದ ಸತ್ತರ್ ಅವರು ಝೊಮ್ಯಾಟೊ ಕಂಪೆನಿಗೆ ವಿಷಯ ತಿಳಿಸಿದ್ದರು. ಇದರಿಂದ ಕಂಪೆನಿ ಆರ್ಡರ್ ಅನ್ನು ರದ್ದು ಮಾಡಿತು. ಇದರಿಂದ ಆಹಾರ ಸತ್ತರ್ ಬಳಿಯೇ ಉಳಿಯಿತು.

Body:ಈ ಬಗ್ಗೆ ಸತ್ತರ್ ಬಂಟ್ವಾಳ ಮಾತನಾಡಿ, ನನ್ನಲ್ಲಿಯೇ ಉಳಿದ ಬಿರಿಯಾನಿಯನ್ನು‌ ನಾನೇನು ಮಾಡಬೇಕೆಂದು ತಿಳಿಯದೆ ನನಗೆ ಮತ್ತೊಂದು ಫುಡ್ ಡೆಲಿವರಿ ಇದ್ದ ವೆಲೆನ್ಸಿಯಾಕ್ಕೆ ತೆರಳಿದೆ. ಈ ಸಂದರ್ಭ ನನ್ನ ಮಿತ್ರ ಅನೀಸ್ ಎಂಬವರ ಸಲಹೆಯ ಮೇರೆಗೆ ಯಾರಿಗಾದರೂ ಭಿಕ್ಷುಕರಿಗೆ ಈ ಫುಡನ್ನು ಕೊಡುವ ಆಲೋಚನೆಯಲ್ಲಿದ್ದೆ. ಅದೇ ಸಂದರ್ಭ ಅಲ್ಲಿ ಒಬ್ಬರು ಬೆಳಗ್ಗಿನಿಂದ ಏನೂ ತಿಂದಿಲ್ಲ, ಏನಾದರೂ ಕೊಡಿ ಎಂದು ಅಂಗಲಾಚಿದರು. ಆಗ ನನ್ನಲ್ಲಿ ಆರ್ಡರ್ ರದ್ದುಗೊಂಡ ಬಿರಿಯಾನಿ ಹಾಗೂ ಕಬಾಬ್ ಅನ್ನು ಆತನಿಗೆ ಕೊಟ್ಟೆ. ಈ ಆಹಾರವನ್ನು ರಸ್ತೆ ಬದಿಯ ವ್ಯಕ್ತಿಗೆ ನೀಡಿರುವ ಸಾಕ್ಷಿಗಾಗಿ ನಾನು ಝೊಮ್ಯಾಟೊ ಕಂಪೆನಿಯವರಿಗಾಗಿ ಸೆಲ್ಫಿಯೊಂದನ್ನು ಕ್ಲಿಕ್ಕಿಸಿದೆ. ನನ್ನ ಈ ಕಾರ್ಯದ ಬಗ್ಗೆ ಸ್ವತಃ ಝೊಮ್ಯಾಟೊ ಕಂಪೆನಿಯಿಂದಲೇ ಪ್ರಶಂಸೆಗೊಳಗಾದೆ. ಅಲ್ಲದೆ ಈ ಸಾಮಾಜಿಕ ಕಳಕಳಿಗೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ಕೇಳಿ ಬರುತ್ತಿದೆ ಎಂದು ಹೇಳಿದರು.

ನನ್ನ ಈ ಕಾರ್ಯದ ಬಗ್ಗೆ ನನಗೆ ಆತ್ಮತೃಪ್ತಿ ಇದೆ. ಆದರೆ ನಾನು ಈ ರೀತಿಯ ಸ್ಪಂದನೆ ಬರುತ್ತದೆ ಎಂದು ಆಗ ಗೊತ್ತೇ ಆಗಲಿಲ್ಲ. ಹಿಂದೆಯೂ ಈ ತರಹ ರದ್ದಾದ ಆಹಾರಗಳನ್ನು ಹಸಿದವರಿಗೆ ನೀಡಿದ್ದೆ, ಆದರೆ ಫೋಟೋ ಕ್ಲಿಕ್ಕಿಸಿರಲಿಲ್ಲ. ಈಗ ಈ ಸ್ಪಂದನೆಯಿಂದ ಬಹಳ ಸಂತೋಷವಾಗುತ್ತಿದೆ ಎಂದು ಸತ್ತರ್ ಬಂಟ್ವಾಳ ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.