ಸುರತ್ಕಲ್: ಭಾರತ ಮತ್ತು ಚೀನಾ ಗಡಿಯ ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ರಾಷ್ಟ್ರ ಭಕ್ತ ನಾಗರಿಕ ವೇದಿಕೆ ಸುರತ್ಕಲ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಇದೇ ವೇಳೆ ಸೈನಿಕರ ಜೊತೆಗೆ ಇಡೀ ದೇಶ ನಿಂತಿದೆ ಎಂಬ ಸಂದೇಶ ಸಾರಲಾಯಿತು. ಈ ಸಂದರ್ಭದಲ್ಲಿ ಪೂರ್ವ ಸೇನಾನಿಗಳಾದ ಜಿ.ಕೆ. ಸುಂದರ್, ಶ್ರೀಕಾಂತ್ ಶೆಟ್ಟಿ ಬಾಳ, ಭಾಸ್ಕರ ರೈ, ಮೋಹನ್ ದಾಸ್ ಶೆಟ್ಟಿ , ಜಯರಾಮ್ ಭಾಗವತ್, ಸದಾಶಿವ ಮುಂಚೂರು, ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಗೌರವಾಧ್ಯಕ್ಷ ಕಡಂಬೋಡಿ ಮಹಾಬಲ ಪೂಜಾರಿ , ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಮಹೇಶ ಮುರ್ತಿ ಸುರತ್ಕಲ್ ಹಾಗೂ ಭಾಸ್ಕರ್ ರಾವ್ ಬಾಳ, ಪುಷ್ಪರಾಜ್ ಕುಳಾಯಿ, ಲೋಕೇಶ್ ಕೋಡಿಕೆರೆ, ಕಾರ್ತೇಶ್ ಇಡ್ಯಾ ಉಪಸ್ಥಿತರಿದ್ದರು.