ETV Bharat / state

1 ವರ್ಷದಲ್ಲಿ ಜಿಪಂ ಕ್ಷೇತ್ರವೊಂದಕ್ಕೇ ₹100 ಕೋಟಿ ಅನುದಾನ - ಶಾಸಕ ರಾಜೇಶ್‌ ನಾಯ್ಕ್‌

ಕೊರೊನಾ ಮಹಾಮಾರಿ ಆವರಿಸಿರುವ ಸಂದರ್ಭದಲ್ಲಿಯೂ ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಯ ಕಾರ್ಯ ಮುಂಚೂಣಿಯಲ್ಲಿದೆ. ಇದಕ್ಕೆ ಪೂರಕವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಅನುದಾನ ಬಿಡುಗಡೆಗೊಳಿಸಿ ಸಹಕಾರ ನೀಡುತ್ತಿದೆ..

author img

By

Published : Sep 7, 2020, 9:18 PM IST

Bantvala
Bantvala

ಬಂಟ್ವಾಳ : ಕಳೆದೊಂದು ವರ್ಷದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ಜಿಪಂ ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಪ್ಠಾನಗೊಳಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.

ರಾಜ್ಯ ರಸ್ತೆ ನಿಧಿಯಿಂದ 13 ಕೋಟಿ‌ ರೂ.ವೆಚ್ಚದಲ್ಲಿ ತಾಲೂಕಿನ ಸೊರ್ನಾಡ್‌ನಿಂದ ಪುಚ್ಚಮೊಗರು ತನಕ ರಸ್ತೆ ಅಗಲೀಕರಣ ಸೇರಿ ಮರು ಡಾಂಬರೀಕರಣ 50 ಲಕ್ಷ ರೂ. ವೆಚ್ಚದಲ್ಲಿ ಸಿದ್ದಕಟ್ಟೆ-ಮಂಚಕಲ್ಲು ರಸ್ತೆ ಅಗಲೀಕರಣ ಮತ್ತು ಮರು ಡಾಂಬರೀಕರಣ ಹಾಗೂ 3 ಕೋಟಿ ರೂ.ವೆಚ್ಚದಲ್ಲಿ ಬಂಡಸಾಲೆಯಿಂದ-ಎಣಿಲಕೋಡಿ-ಪಂಜಿಕಲ್ಲುಪದವು-ಆಚಾರಿಪಲ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಸಿದ್ದಕಟ್ಟೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಕೊರೊನಾ ಮಹಾಮಾರಿ ಆವರಿಸಿರುವ ಸಂದರ್ಭದಲ್ಲಿಯೂ ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಯ ಕಾರ್ಯ ಮುಂಚೂಣಿಯಲ್ಲಿದೆ. ಇದಕ್ಕೆ ಪೂರಕವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಅನುದಾನ ಬಿಡುಗಡೆಗೊಳಿಸಿ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆ ರೂಪಿಸಲಾಗುವುದು ಎಂದರು.

ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ತಾಪಂ ಸದಸ್ಯ ಪ್ರಭಾಕರ ಪ್ರಭು ಮತ್ತಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.