ETV Bharat / state

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ, ಹಲವು ಪ್ರಯಾಣಿಕರಿಗೆ ಗಾಯ

ಮಂಗಳೂರಿನ ಗುರುಪುರ ಕೈಕಂಬ ಪೊಳಲಿ ದ್ವಾರದ ಹತ್ತಿರ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಲ್ಟಿಯಾಗಿದ್ದು, ಈ ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

private bus overturned
ಮಂಗಳೂರು ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಖಾಸ ಬಸ್ ಪಲ್ಟಿಯಾಗಿರುವುದು.
author img

By ETV Bharat Karnataka Team

Published : Jan 2, 2024, 10:24 PM IST

ಮಂಗಳೂರು: ನಗರದ ಹೊರವಲಯದ ಗುರುಪುರ ಕೈಕಂಬ ಪೊಳಲಿ ದ್ವಾರದ ಹತ್ತಿರ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಲ್ಟಿಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ನೂರು ಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್​​ನಲ್ಲಿ ಅಂದಾಜು 40 ರಿಂದ 50 ಜನ ಪ್ರಯಾಣಿಕರಿದ್ದರು. ಈ ಬಸ್ ಗುರುಪುರ ಕೈಕಂಬದಿಂದ ಬಿ.ಸಿ‌. ರೋಡ್ ಕಡೆಗೆ ಹೊರಟಿತ್ತು ಎಂದು ತಿಳಿದು ಬಂದಿದೆ.

5 ಮಂದಿ ಗಾಯಾಳುಗಳು ಆಸ್ಪತ್ರೆಗೆ ದಾಖಲು: ಗಾಯಗೊಂಡಿರುವ ಐವರು ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ದುರ್ಘಟನೆ ಸಂಭವಿಸಿದ ತಕ್ಷಣ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದರು. ಅಪಘಾತದಿಂದ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಉಂಟಾಗಿತ್ತು, ಬಳಿಕ ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಆಗಮಿಸಿ ಅಪಘಾತ ಸ್ಥಳವನ್ನು ಪರಿಶೀಲಿಸಿದರು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅನುಕೂಲ ಮಾಡಿದರು. ಅಪಘಾತದಲ್ಲಿ ಸುಮಾರು 5 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ ಪರ್ಸ್​ ಮೊಬೈಲ್ ಕದ್ದು ಸಿಕ್ಕಬಿದ್ದ ಮಹಿಳೆ- ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜೇಬುಕಳ್ಳರನ್ನು ದೇವಾಲಯದ ಭದ್ರತಾ ಸಿಬ್ಬಂದಿಯೊಬ್ಬರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಪ್ರಕರಣ ವರದಿಯಾಗಿದೆ. ಭಕ್ತರೊಬ್ಬರು ತಮ್ಮ ಮೊಬೈಲ್ ಹಾಗೂ ಪರ್ಸ್ ಕಳೆದುಕೊಂಡಿರುವ ಬಗ್ಗೆ ದೇವಾಲಯದ ಕಚೇರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ದೇಗುಲದ ಕಚೇರಿ ಸಿಬ್ಬಂದಿ ಎಲ್ಲಾ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬಳು ಪರ್ಸ್ ಕಳ್ಳತನ ಮಾಡಿರುವ ದೃಶ್ಯ ಕಂಡು ಬಂದಿದೆ.

ಕೂಡಲೇ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ ಅವರಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ ಅವರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ಆಗಲೇ ಪರ್ಸ್ ಎಗರಿಸಿದ ಮಹಿಳೆಯು ಬಸ್​ ನಿಲ್ದಾಣಕ್ಕೆ ಆಗಮಿಸಿ ಬಸ್ ಹತ್ತಿ ಕುಳಿತಿದ್ದಳು.

ಆಕೆಯನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಕಳ್ಳತನ ಮಾಡಿದ್ದ ಮೊಬೈಲ್ ಹಾಗೂ ಪರ್ಸ್ ವಾಪಸ್​ ಪಡೆಯಲಾಯಿತು. ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಹಲವಾರು ಅಗತ್ಯ ದಾಖಲೆಗಳಿದ್ದ ಪರ್ಸ್ ಮರಳಿ ಸಿಕ್ಕ ಖುಷಿಯಲ್ಲಿ ಯಾತ್ರಾರ್ಥಿ ಅವರು ದೇಗುಲದ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ರಾತ್ರಿ ಹೊತ್ತು ಆಟೋ ರಿಕ್ಷಾಗಳ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.