ETV Bharat / state

ಉಪ್ಪಿನಂಗಡಿಯಲ್ಲಿ ಕಾಡಾನೆ ದಾಳಿ: ತಂದೆ ಸಾವು, ಮಗ ಗಂಭೀರ - ಕಾಡಾನೆ ದಾಳಿಗೆ ಮಹಿಳೆ ಸಾವು

ಕಾಡಾನೆ ದಾಳಿಗೆ ವ್ಯಕ್ತಿಯೋರ್ವರು ಬಲಿಯಾಗಿದ್ದು, ಆತನ ಮಗನಿಗೆ ಗಂಭೀರ ಗಾಯಗಳಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

elephant attack
ಕಾಡಾನೆ ದಾಳಿ
author img

By

Published : Jan 1, 2023, 10:02 AM IST

Updated : Jan 1, 2023, 10:34 AM IST

ನೆಲ್ಯಾಡಿ(ದ.ಕನ್ನಡ): ಕಾಡಾನೆ ದಾಳಿಯಿಂದ ತಂದೆ ಮೃತಪಟ್ಟು ಮಗ ತೀವ್ರವಾಗಿ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಇರುವ ಶಿರಾಡಿಯ ಕೊಟ್ಟಿಕ್ಕಲ್ ಎಂಬಲ್ಲಿ ನಡೆದಿದೆ. ತಿಮ್ಮಪ್ಪ (45) ಮೃತರು. ಇವರ ಮಗ ಶರಣ್ (18) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಿಮ್ಮಪ್ಪ ಅವರು ಶಿರಾಡಿ ಜನತಾ ಕಾಲೋನಿಯ ನಿವಾಸಿ ಎಂದು ತಿಳಿದುಬಂದಿದೆ. ಕಾರ್ಯದ ನಿಮಿತ್ತ ಕೊಟ್ಟಿಕ್ಕಲ್ ಸಮೀಪ ಮಗನ ಜೊತೆ ಹೋಗುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಶಿರಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಫೋಟಕ ಬಳಸಿ ಬಂಡೆ ಹೊಡೆಯುವ ಶಬ್ದಕ್ಕೆ ಬೆದರಿದ ಒಂಟಿ ಸಲಗ ಇವರ ಮೇಲೆ ದಾಳಿ ಮಾಡಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗಿನ ಕಾಡಾನೆ ದಾಳಿ ಪ್ರಕರಣಗಳಿವು..: ಕಳೆದ 2 ದಿನಗಳ ಹಿಂದಷ್ಟೇ ಕಾಡಿನಿಂದ ಆಹಾರ ಅರಸಿ ಬಂದಿದ್ದ ಕಾಡಾನೆಯೊಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕ ಬೀಚನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿತ್ತು. ಕಣದಲ್ಲಿ ಹುರುಳಿ ಒಕ್ಕಲು ಮಾಡುತ್ತಿದ್ದ ಚಿಕ್ಕಮ್ಮ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು.

ರೈತನ ಬಲಿ ಪಡೆದಿತ್ತು ಒಂಟಿ ಸಲಗ: ಕಳೆದ ತಿಂಗಳು (ಡಿಸೆಂಬರ್‌) ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮ ಸಮೀಪದ ರಾಗಿ ಬಸವನಹಳ್ಳಿಯಲ್ಲಿ ಒಂಟಿ ಸಲಗವೊಂದು ರೈತನನ್ನು ಬಲಿ ಪಡೆದಿತ್ತು. ಈರಪ್ಪ (60) ಎಂಬುವರು ಹೊಲದಲ್ಲಿ ರಾಗಿ ಬೆಳೆದ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲೆಂದು ಕಾವಲು ಕಾಯಲು ಹೋಗಿದ್ದರು. ರಾತ್ರಿಯಿಡೀ ಜಮೀನಿನಲ್ಲಿದ್ದು, ಗುಡಿಸಲಿನಲ್ಲೇ ಮಲಗಿದ್ದರು. ಈ ವೇಳೆ ಗುಡಿಸಲಿನ‌ ಮೇಲೆ ದಿಢೀರ್​ ದಾಳಿ‌ ನಡೆಸಿದ ಕಾಡಾನೆ, ಗುಡಿಸಲು ಧ್ವಂಸ ಮಾಡಿ, ರೈತನನ್ನು‌ ಅಡಿಕೆ ಗಿಡಗಳ ಮಧ್ಯೆ ಎಳೆದು ತಂದಿದ್ದು, ಅವರು ಸಾವಿಗೀಡಾಗಿದ್ದರು.

ಇದನ್ನೂ ಓದಿ: ಮೈಸೂರು: ದಂಪತಿ ಮೇಲೆ ಏಕಾಏಕಿ ಕಾಡಾನೆ ದಾಳಿ.. ಸ್ಥಳದಲ್ಲೇ ಮಹಿಳೆ ಸಾವು!

ಕಾಡಾನೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ ಪರಿಹಾರ: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಚಳಿಗಾಲದ ಅಧಿವೇಶನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟವರಿಗೆ ಪರಿಹಾರವನ್ನು 7.5 ಲಕ್ಷ ರೂ.ಯಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದರು. ಕಾಡಾನೆ ಹಾವಳಿ ತಡೆಗಟ್ಟಲು ರಚಿಸಲಾಗಿರುವ ಟಾಸ್ಕ್ ಫೋರ್ಸ್​ಗೆ ಅಗತ್ಯ ಸಿಬ್ಬಂದಿ ನೇಮಕ ಮಾಡುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿಯೂ ತಿಳಿಸಿದ್ದಾರೆ.

ಇನ್ನು ಮಲೆನಾಡು ಭಾಗದಲ್ಲಿಯೂ ಕಾಡಾನೆ ಹಾವಳಿ ಹೆಚ್ಚಾಗಿದೆ. ಆಹಾರಕ್ಕಾಗಿ ಕಾಡು ಬಿಟ್ಟು ನಾಡಿನತ್ತ ಮುಖಮಾಡುತ್ತಿರುವ ಆನೆಗಳು ರಸ್ತೆಗಳಲ್ಲೇ ರಾಜಾರೋಷವಾಗಿ ಓಡಾಡುತ್ತಿವೆ. ಹಲವು ಜನರು ಬಲಿಯಾಗಿದ್ದಾರೆ. ಆನೆ ಹಾವಳಿ ತಡೆಗೆ ಟಾಸ್ಕ್ ಫೋರ್ಸ್ ರಚಿಸಿದ ಸರ್ಕಾರ 47 ಸಿಬ್ಬಂದಿಯನ್ನು ನೇಮಿಸಿದೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಚಿಕ್ಕಮಗಳೂರಲ್ಲಿ ರೈತ ಬಲಿ.. ಭೈರನ ಸೆರೆಯಿಂದ ನಿಟ್ಟುಸಿರು ಬಿಟ್ಟ ಜನರಿಗೆ ಮತ್ತೆ ಆತಂಕ

Last Updated : Jan 1, 2023, 10:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.