ETV Bharat / state

ಶ್ರೀಮಂತ ವಿವಾಹಿತ ಮಹಿಳೆ ಜೊತೆ ಪ್ರೇಮದ ನಾಟಕ: ಎಲ್ಲವನ್ನೂ ಮುಗಿಸಿ ಕೈ ಕೊಟ್ಟಿದ್ದ ಆರೋಪಿ ಅಂದರ್​

ಮಹಿಳೆ ಜೊತೆಗೆ ಲೈಂಗಿಕ ಸಂಪರ್ಕ ಬಳಸಿಕೊಂಡಿದ್ದ ಆರೋಪಿ ಆಕೆಯಿಂದ 1.50 ಕೋಟಿ ರೂ. ನಷ್ಟು ಹಣವನ್ನು ಹಂತ ಹಂತವಾಗಿ ಪಡೆದುಕೊಂಡಿದ್ದ. ಬಳಿಕ ಆತ ಬೇರೊಂದು ಯುವತಿಯನ್ನು ಮದುವೆಯಾಗಲು ತಯಾರಾಗಿದ್ದ. ಇದು ಮಹಿಳೆಯ ಗಮನಕ್ಕೆ ಬಂದು, ಆಕೆ ತಕ್ಷಣ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶ್ರೀಮಂತ ವಿವಾಹಿತ ಮಹಿಳೆ ಜೊತೆ ಪ್ರೇಮದ ನಾಟಕ
ಶ್ರೀಮಂತ ವಿವಾಹಿತ ಮಹಿಳೆ ಜೊತೆ ಪ್ರೇಮದ ನಾಟಕ
author img

By

Published : May 20, 2022, 3:06 PM IST

ಮಂಗಳೂರು: ಶ್ರೀಮಂತ ವಿವಾಹಿತ ಮಹಿಳೆಯೊಂದಿಗೆ ಪ್ರೇಮದ ನಾಟಕವಾಡಿ ಲೈಂಗಿಕ ಸಂಪರ್ಕ ಬೆಳೆಸಿ 1.5 ಕೋಟಿ ವಂಚನೆ ಮಾಡಿದ್ದ ಆರೋಪಿಯನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಬೈರಿಕಟ್ಟೆಯ ನಿವಾಸಿ ಫಯಾಜ್​​(30) ಬಂಧಿತ ಆರೋಪಿ.

ಆರೋಪಿ ಫಯಾಜ್​ ಸಂತ್ರಸ್ತ ಮಹಿಳೆ ಜೊತೆಗೆ 2012ರಲ್ಲಿಯೇ ಪರಿಚಿತನಾಗಿದ್ದು, ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಮಹಿಳೆಯ ಮೂವರು ಮಕ್ಕಳಲ್ಲಿ, ಇಬ್ಬರು ವಿಶೇಷ ಚೇತನರಾಗಿದ್ದರು. ಆರೋಪಿ ಫಯಾಜ್ ಅವರ ಮೇಲೆ ಕರುಣೆ ತೋರಿಸುವಂತೆ, ಮಕ್ಕಳನ್ನು ಶಾಲೆಗೆ ಕರೆದೊಯ್ಯವಂತೆ, ಇನ್ನಿತರ ಸಹಕಾರ ನೀಡುವಂತೆ ನಾಟಕವಾಡುತ್ತಿದ್ದ. ಮಹಿಳೆಯ ಗಂಡ ಉದ್ಯಮಿಯಾಗಿದ್ದು, ಶ್ರೀಮಂತರಾಗಿದ್ದರು‌.

ಮಹಿಳೆ ಜೊತೆಗೆ ಲೈಂಗಿಕ ಸಂಪರ್ಕ ಬಳಸಿಕೊಂಡಿದ್ದ ಆರೋಪಿ ಆಕೆಯಿಂದ 1.50 ಕೋಟಿ ರೂ. ನಷ್ಟು ಹಣವನ್ನು ಹಂತಹಂತವಾಗಿ ಪಡೆದುಕೊಂಡಿದ್ದ. ಬಳಿಕ ಆತ ಬೇರೊಂದು ಯುವತಿಯನ್ನು ಮದುವೆಯಾಗಲು ತಯಾರಾಗಿದ್ದ. ಇದು ಮಹಿಳೆಯ ಗಮನಕ್ಕೆ ಬಂದು, ಆಕೆ ತಕ್ಷಣ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಹೊಡೆತ, ಪ್ರೇಕ್ಷಕರ ಕೊರತೆ.. ಇತಿಹಾಸದ ಪುಟ ಸೇರಿದ ಮೈಸೂರಿನ 'ಒಲಂಪಿಯಾ'!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.