ETV Bharat / state

ಮಂಗಳೂರು: ಜನರ ಸಹಕಾರದಿಂದ 15ನೇ ದಿನಕ್ಕೆ ಕಾಲಿಟ್ಟ ಲಾಕ್​ಡೌನ್​

author img

By

Published : Apr 6, 2020, 12:05 PM IST

ಮಂಗಳೂರಿನಲ್ಲಿ ಲಾಕ್​ಡೌನ್ ಯಶಸ್ವಿಯಾಗಿದ್ದು, ಜನರು ಜಿಲ್ಲಾಡಳಿತದ ಆದೇಶಕ್ಕೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

mng

ಮಂಗಳೂರು: ನಗರ ಲಾಕ್​ಡೌನ್ ಆಗಿ ಇಂದಿಗೆ ಹದಿನೈದು ದಿನವಾದರೂ ಜನತೆಯ ಸಂಪೂರ್ಣ ಸಹಕಾರದಿಂದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಮಂಗಳೂರಿನಲ್ಲಿ ಲಾಕ್​ಡೌನ್ ಯಶಸ್ವಿ

ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ದ.ಕ‌. ಜಿಲ್ಲೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮನೆಯ ಓರ್ವ ಸದಸ್ಯ ಬಂದು, ಅಗತ್ಯ ವಸ್ತುವಿನ ಖರೀದಿ ಮಾಡುವಂತೆ ಜಿಲ್ಲಾಡಳಿತ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಸಾಮಾಗ್ರಿಗಳಾದ ಹಾಲು, ದಿನಸಿ, ತರಕಾರಿ ಖರೀದಿ ಮಾಡುವಲ್ಲಿಯೂ ಸಾಕಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡೇ ಜನರು‌ ವ್ಯವಹರಿಸುತ್ತಿದ್ದಾರೆ.

lockdown successful in mangaluru
ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಸಾಮಾಗ್ರಿಗಳ ಖರೀದಿ

ಬಸ್, ಆಟೋರಿಕ್ಷಾಗಳ ಓಡಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ವಿರಳ ಸಂಖ್ಯೆಯಲ್ಲಿ ಖಾಸಗಿ ವಾಹನಗಳಾದ ಕಾರು, ಬೈಕ್​ಗಳ ಓಡಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಜನಸಂಚಾರವೂ ಕಡಿಮೆಯಾಗಿದ್ದು, ಅನಗತ್ಯ ವಾಹನ ಓಡಾಟ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.

lockdown successful in mangaluru
ಮಂಗಳೂರಿನಲ್ಲಿ ಲಾಕ್​ಡೌನ್ ಯಶಸ್ವಿ

ಪೊಲೀಸರು ನಾಕಾಬಂದಿ ಮಾಡಿ ಅನಗತ್ಯ ವಾಹನಗಳ ಮೇಲೆ ಹದ್ದಿನ‌ ಕಣ್ಣಿರಿಸಿ ಜಪ್ತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅಗತ್ಯ ಸೇವೆಗಳಾದ ದಿನಸಿ ಸಾಮಾಗ್ರಿ, ವೈದ್ಯಕೀಯ ಸೇವೆ, ತರಕಾರಿ, ಹಣ್ಣು, ಹಾಲು ಸರಬರಾಜು ವಾಹನಗಳಿಗೆ ವಿನಾಯಿತಿ ಇದೆ. ಒಟ್ಟಿನಲ್ಲಿ ಮಂಗಳೂರಿನಲ್ಲಿ ಬಂದ್ ಯಶಸ್ವಿಯಾಗಿದ್ದು, ಜನರು ಜಿಲ್ಲಾಡಳಿತದ ಆದೇಶಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.