ETV Bharat / state

ಸಾಹಿತ್ಯದ ಅಧ್ಯಯನದಿಂದ ಭೂಮಿಯನ್ನೇ ಸ್ವರ್ಗವನ್ನಾಗಿ ಮಾಡಬಹುದು: ವಿದ್ವಾಂಸ ಎಸ್. ರಂಗನಾಥ್

ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆಯವರು ಯುವಜನತೆಯಲ್ಲಿ ಮತ್ತು ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವ ಸ್ವಶಕ್ತಿ ದಾನವನ್ನು ಅಳವಡಿಸಿಕೊಂಡು ಕ್ರಾಂತಿಕಾರಿ ಸುಧಾರಣೆ ಮಾಡಿದ್ದಾರೆ. ಧರ್ಮದ ನಡಿಗೆಯನ್ನು ಸಮಾಜದ ಕಡೆಗೆ ತಿರುಗಿಸಿದ್ದಾರೆ. ಇಂದು ಎಲ್ಲಡೆ ಸತ್ಯ ಕಣ್ಮರೆಯಾಗುತ್ತಿದ್ದು ಸುಳ್ಳು ಮತ್ತು ಅವ್ಯವಹಾರಗಳೇ ವಿಜೃಂಭಿಸುತ್ತವೆ. ಆದರೆ ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ನೆಲೆ ನಿಂತಿದೆ ಎಂದು ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

author img

By

Published : Dec 15, 2020, 7:03 AM IST

lakshadeepostav in dharmastala
ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನದ 88ನೇ ಅಧಿವೇಶನ

ಬೆಳ್ತಂಗಡಿ: ಸಾಹಿತ್ಯ ಸಮಾಜದ ಕನ್ನಡಿಯಂತಿದ್ದು, ಸಮಾಜದ ರಕ್ಷಣೆ ಮತ್ತು ಪೋಷಣೆಗೆ ಸಾಹಿತ್ಯ ಅಗತ್ಯ ಎಂದು ಬೆಂಗಳೂರಿನ ಹಿರಿಯ ವಿದ್ವಾಂಸ ಡಾ. ಎಸ್. ರಂಗನಾಥ್ ಹೇಳಿದರು.

ಸೋಮವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ 88ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯಕ್ಕೆ ಔಷಧೀಯ ಗುಣವೂ ಇದ್ದು, ಜೀವನ ಮೌಲ್ಯಗಳ ಆಕರವಾಗಿದೆ. ಸಾಹಿತ್ಯ, ಸಂಗೀತ ಮತ್ತು ಕಲೆಯ ಸ್ಪರ್ಶ ಇಲ್ಲದ ಮನುಷ್ಯ ಕೋಡು, ಬಾಲವಿಲ್ಲದ ಪ್ರಾಣಿಯಂತೆ ಆಗುತ್ತಾನೆ. ಸಾಹಿತ್ಯದಿಂದ ಸಮಾಜ ಸುಧಾರಣೆಯೊಂದಿಗೆ ಮಾನವೀಯ ಮೌಲ್ಯಗಳ ಉದ್ದೀಪನ ಹಾಗೂ ವೈಜ್ಞಾನಿಕ ದೃಷ್ಟಿಕೋನ ಬೆಳೆಸಲು ಸಾಧ್ಯವಾಗುತ್ತದೆ ಎಂದ್ರು.

ಕೊರೊನಾದಿಂದ ಮುಕ್ತಿ ಪಡೆಯಲು ಕೂಡಾ ಸಾಹಿತ್ಯ ಪ್ರಮುಖ ಮಾಧ್ಯಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಾಹಿತ್ಯದ ಅಧ್ಯಯನದಿಂದ ಭೂಮಿಯನ್ನೇ ಸ್ವರ್ಗವನ್ನಾಗಿ ಮಾಡಬಹುದು ಎಂದು ಹೇಳಿದ್ರು.

ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಕಾಲಕ್ಕೆ ತಕ್ಕಂತೆ ಪರಂಪರೆ ಬಗ್ಗೆ ಗೌರವ ಉಳಿಸಿಕೊಂಡು ಆಧುನಿಕತೆಯ ಸ್ಪರ್ಶ ನೀಡಿದಾಗ ಅದು ಹೆಚ್ಚು ಮೌಲ್ಯಯುತವಾಗಿ ವಿಶ್ವಾಸಾರ್ಹತೆಯನ್ನು ಪಡೆಯುತ್ತದೆ ಎಂದ್ರು.

ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನ ಪರಂಪರೆಯೊಂದಿಗೆ ಡಿ. ವೀರೇಂದ್ರ ಹೆಗ್ಗಡೆಯವರು ಯುವಜನತೆಯಲ್ಲಿ ಮತ್ತು ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವ ಸ್ವಶಕ್ತಿ ದಾನವನ್ನು ಅಳವಡಿಸಿಕೊಂಡು ಕ್ರಾಂತಿಕಾರಿ ಸುಧಾರಣೆ ಮಾಡಿದ್ದಾರೆ. ಧರ್ಮದ ನಡಿಗೆಯನ್ನು ಸಮಾಜದ ಕಡೆಗೆ ತಿರುಗಿಸಿದ್ದಾರೆ. ಇಂದು ಎಲ್ಲಡೆ ಸತ್ಯ ಕಣ್ಮರೆಯಾಗುತ್ತಿದ್ದು ಸುಳ್ಳು ಮತ್ತು ಅವ್ಯವಹಾರಗಳೇ ವಿಜೃಂಭಿಸುತ್ತವೆ. ಆದರೆ ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ನೆಲೆ ನಿಂತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿತವನ್ನುಂಟುಮಾಡುವುದೇ ಸಾಹಿತ್ಯದ ಉದ್ದೇಶ:ಡಾ.ಡಿ. ವೀರೇಂದ್ರ ಹೆಗ್ಗಡೆ:
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಮಾನವ ಜೀವನಕ್ಕೆ ಹಿತವನ್ನುಂಟುಮಾಡುವುದೇ ಸಾಹಿತ್ಯದ ಉದ್ದೇಶವಾಗಿದೆ. ಪಂಚಭೂತಗಳು ಹಾಗೂ ನಮ್ಮ ಪಂಚೇಂದ್ರೀಯಗಳು ಮಲಿನವಾಗದಂತೆ ಎಚ್ಚರಿಸುವ ಕಾರ್ಯ ಸಾಹಿತ್ಯದಿಂದಲೇ ಆಗುತ್ತದೆ. ಪುಸ್ತಕಗಳನ್ನು ಮಸ್ತಕಗಳಿಗೆ ತುಂಬಿದಾಗಲೇ ನಮಗೆ ಜ್ಞಾನದ ಅರಿವು ಗೋಚರವಾಗುತ್ತದೆ. ನಮಗೆ ಆಸಕ್ತಿಯ ವಿಷಯದ ಪುಸ್ತಕಗಳನ್ನು ಖರೀದಿಸಿ ಓದಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಕೊರೊನಾ ಸಮಯದಲ್ಲಿ ತಾನು ಅತಿ ಹೆಚ್ಚು ಪುಸ್ತಕಗಳನ್ನು ಸ್ವೀಕರಿಸಿದ್ದೇನೆ ಹಾಗೂ ಓದಿದ್ದೇನೆ ಎಂದು ಅವರು ಹೇಳಿದರು. ಧರ್ಮಸ್ಥಳದಿಂದ “ಮಂಜುವಾಣಿ” ಮತ್ತು “ನಿರಂತರ” ಎಂಬ ಎರಡು ಮಾಸ ಪತ್ರಿಕೆಗಳನ್ನು ಪ್ರಕಟಿಸಿ ಜ್ಞಾನ ಪ್ರಸಾರ ಮಾಡಲಾಗುತ್ತದೆ. “ಸುಜ್ಞಾನ ನಿಧಿ” ಯೋಜನೆಯಡಿ 34,897 ವಿದ್ಯಾರ್ಥಿಗಳಿಗೆ 48.91 ಕೋಟಿ ರೂ. ಶಿಷ್ಯವೇತನ ನೀಡಲಾಗಿದೆ ಎಂದು ತಿಳಿಸಿದರು.

ಲಕ್ಷದೀಪೋತ್ಸವ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಹರಕೆ ರೂಪದಲ್ಲಿ ಬಂದ ವಸ್ತುಗಳು:
ಅಕ್ಕಿ : 1200 ಕ್ವಿಂಟಾಲ್
ತರಕಾರಿ : 800 ಕ್ವಿಂಟಾಲ್
ಬೆಲ್ಲ : 5 ಕ್ವಿಂಟಾಲ್
ರಾಗಿ : 5 ಕ್ವಿಂಟಾಲ್

ಸಿಹಿ ತಿಂಡಿಗಳು : 1,20,000
ಬಾದ್‍ಷಾ : 25,000
ಮೈಸೂರು ಪಾಕ್ : 10,000
ಹೋಳಿಗೆ : 10,000

ದೀಪೋತ್ಸವದ ಐದು ದಿನಗಳಲ್ಲಿ 150 ತಂಡಗಳ 850 ಸದಸ್ಯರಿಂದ ವಾದ್ಯ ಸೇವೆ:

ವಾಲಗ : 80 ಜನ
ಬ್ಯಾಂಡ್ ಸೆಟ್ : 220 ಜನ
ಶಂಖ : 70
ಡೊಳ್ಳುಕುಣಿತ : 100 ಜನ
ಕರಡಿ ಮೇಳ : 150 ಜನ
ವೀರಗಾಸೆ : 230ಜನ

ಇದನ್ನೂ ಓದಿ:ಇಂದು ವಿಶೇಷ ಪರಿಷತ್ ಕಲಾಪ: ಸಭಾಪತಿ ಮೇಲಿನ ಅವಿಶ್ವಾಸ ನಿರ್ಣಯ ಪ್ರಸ್ತಾಪ ಇಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.