ETV Bharat / state

ಕೊರೊನಾ ಭೀತಿ:ಉಳ್ಳಾಲದ ಹರೇಕಳ ಗ್ರಾಮ 10 ದಿನ ಲಾಕ್​ಡೌನ್​ಗೆ ತೀರ್ಮಾನ ​

ಉತ್ತರ ಕನ್ನಡ ಜಿಲ್ಲೆಯ ಉಳ್ಳಾಲ ಬಳಿಯ ಹರೇಕಳ ಗ್ರಾಮದಲ್ಲಿ ಐದು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಗ್ರಾಮವನ್ನು ಹತ್ತು ದಿನ ಲಾಕ್​ಡೌನ್ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ..

sddd
ಉಳ್ಳಾಲದ ಹರೇಕಳ ಗ್ರಾಮ 10 ದಿನ ಲಾಕ್​ಡೌನ್​ಗೆ ತೀರ್ಮಾನ ​
author img

By

Published : Jul 3, 2020, 7:04 PM IST

ಮಂಗಳೂರು : ಹರೇಕಳ ಗ್ರಾಮದಲ್ಲಿ ಐದು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಪಂಚಾಯತ್‌ ಕಠಿಣ ಕ್ರಮಕೈಗೊಂಡಿದೆ. ಸೋಮವಾರದಿಂದ 10 ದಿನ ಗ್ರಾಮವನ್ನು ಸಂಪೂರ್ಣ ಲಾಕ್​ಡೌನ್ ಮಾಡಲು ಸ್ಥಳೀಯರೆಲ್ಲ ತೀರ್ಮಾನಿಸಿದ್ದಾರೆ.

ಉಳ್ಳಾಲದ ಹರೇಕಳ ಗ್ರಾಮ 10 ದಿನ ಲಾಕ್​ಡೌನ್​ಗೆ ತೀರ್ಮಾನ..​

ಈ ಬಗ್ಗೆ ಶುಕ್ರವಾರ ಪಂಚಾಯತ್‌ನಲ್ಲಿ ನಡೆದ ಸಭೆಯಲ್ಲಿ ಮುಖಂಡ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಲಮಾರ್ಗದ ಜೊತೆ ಬಸ್​ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಹೊರಗಿನ ಖಾಸಗಿ ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅಗತ್ಯ ಕಾರ್ಯಗಳಿಗೆ ಹೊರಗೆ ಹೋಗುವವರು ಕಾರಣ ನೀಡಬೇಕು ಎಂದರು.

ಪಂಚಾಯತ್‌ ಅಧ್ಯಕ್ಷೆ ಅನಿತಾ ಡಿಸೋಜ ಮಾತನಾಡಿ, ಗ್ರಾಮದಲ್ಲಿರುವ ಎಲ್ಲ ಅಂಗಡಿಗಳನ್ನು 12 ಗಂಟೆಗೆ ಬಂದ್ ಮಾಡಲಾಗುತ್ತಿದೆ. ಹೋಟೆಲ್​ಗಳೆಲ್ಲ ಸಂಪೂರ್ಣ ಬಂದ್ ಇವೆ. ಮಕ್ಕಳು ಮನೆಯಿಂದ ಹೊರಬರಬಾರದು.‌ ಶನಿವಾರದಿಂದ ಎಲ್ಲಾ ಮನೆಗಳಿಗೆ ಸ್ಯಾನಿಟೈಸರ್ ಸಿಂಪಡಿಕೆ ಮಾಡಲಾಗುವುದು. ಈ ನಿರ್ಣಯ ಧಾರ್ಮಿಕ, ರಾಜಕೀಯ, ಸರ್ವಪಕ್ಷ ಮುಖಂಡರ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.