ತ್ರಿಶೂರ್, ಕೇರಳ: ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ತ್ರಿಶೂರ್ನ ಮೆಕಾನಿಕಲ್ ಇಂಜಿನಿಯರ್ ಆಗಿರುವ ಕೆವಿ ವರುಣ್ಣಿ. ಈಗಾಗಲೇ ಹಲವುಗಳ ಪೆಟೆಂಟ್ ಹೊಂದಿರುವ ವರುಣ್ಣಿ ಇದೀಗ ಆಟೋಮೊಬೈಲ್ ಉದ್ಯಮದಲ್ಲಿ 17ನೇ ಪೇಟೆಂಟ್ ದಾಖಲಿಸಿದ್ದಾರೆ. ಇದೀಗ ಇನ್ಫೈನೈಟ್ಲಿ ವೇರಿಯಬಲ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಸಿಸ್ಟಂನಲ್ಲೂ ಕೂಡಾ ಇವರು ಪೇಟೆಂಟ್ ಪಡೆದಿದ್ದಾರೆ.
ಹಲವು ಪೇಟೆಂಟ್ಗಳ ಒಡೆಯ: ವರುಣ್ಣಿ ಈಗಾಗಲೇ ಆಟೋಮೊಬೈಲ್ ತಂತ್ರಜ್ಞಾನದಲ್ಲಿ ಹಲವು ಪೇಟೆಂಟ್ ಹೊಂದಿದ್ದಾರೆ. ಭಾರತದಲ್ಲಿ 15 ಮತ್ತು ಎರಡು ಅಮೆರಿಕ ಪೆಟೇಂಟ್ ಇವರ ಬಳಿ ಇದೆ. ಇದೀಗ ಪಡೆದಿರುವ ಪೇಟೆಂಟ್ ವಿದ್ಯುತ್ ನಷ್ಟವಿಲ್ಲದೆಯೇ ಮೃದುವಾದ ವೇಗವರ್ಧನೆಯನ್ನು ನೀಡುವ ಮೂಲಕ ಸಾಂಪ್ರದಾಯಿಕ ಸ್ವಯಂಚಾಲಿತ ಗೇರ್ ವ್ಯವಸ್ಥೆ ಸಂಪೂರ್ಣವಾಗಿ ಬದಲಾಯಿಸುತ್ತದೆ. ಇದು ಇಂಧನ ದಕ್ಷತೆಯನ್ನು ಶಕ್ತಗೊಳಿಸುವ ಜೊತೆಗೆ ವಾಯು ಮಾಲಿನ್ಯವನ್ನೂ ಕಡಿಮೆ ಮಾಡುತ್ತದೆ. ಕಡಿಮೆ ಆರಂಭಿಕ ವೇಗವನ್ನು ಒದಗಿಸುತ್ತದೆ. ಈ ಆವಿಷ್ಕಾರಕ್ಕೆ ತಮಗೆ ಪ್ರೇರಣೆ ಮೊದಲ ವರ್ಷದ ಇಂಜಿನಿಯರಿಂಗ್ ಅಧ್ಯಯನದಲ್ಲಿ ಆದ ವೈಫಲ್ಯ. ಈ ವೈಫಲ್ಯವೇ ಜೀವನದ ರೂಪಾಂತರದ ಮೇಲೆ ಹೆಚ್ಚಿನ ಪರಿಣಾಮ ಬೀರಿತು ಎಂದಿದ್ದಾರೆ.
ಮದ್ರಾಸ್ ಯುನಿವರ್ಸಿಟಿಯಲ್ಲಿ ಓದುವಾಗ, ನನ್ನ ತಂದೆ ಕಾರು ಕೊಡಿಸಿದ್ದರು. ಆದರೆ, ಓದಿನ ವೈಫಲ್ಯದಿಂದಾಗಿ ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆಯಲು ನಿರ್ಧರಿಸಿದರು. ಆದರೆ, ಬಿಲ್ಡರ್ ಆಗಿದ್ದ ತಂದೆಯ ಒತ್ತಾಯದ ಮೇರೆಗೆ ಶಿಕ್ಷಣ ಪೂರೈಸಿದೆ ಎಂದಿದ್ದಾರೆ.
ಮೊದಲ ಫೇಲ್ಯೂವರ್, ನಂತರ ಯಶಸ್ಸಿನ ಮೆಟ್ಟಿಲು: ಇದಾದ ಬಳಿಕ ವರುಣ್ಣಿ ಅವರು ಎರಡು ಬಾರಿ 1972 ಮತ್ತು 1990ರಲ್ಲಿ ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಎನ್ಆರ್ಸಿಸಿ) ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೊತೆಗೆ ಹಲವಾರು ಪ್ರತಿಷ್ಟಿತ ಸಂಸ್ಥೆ ಮತ್ತು ನ್ಯಾಷನಲ್ ಇಂಟಲೆಕ್ಚಯುಲ್ ಪ್ರಾಪರ್ಟಿ ಅವಾರ್ಡ್ ಪ್ರಶಸ್ತಿಯನ್ನು 2013ರಲ್ಲಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2006ರಲ್ಲಿ ಭಾರತ್ ಜ್ಯೋತಿ ಪ್ರಶಸ್ತಿ ಮತ್ತು 2015ರಲ್ಲಿ ಮಥರ್ ತೆರೇಸಾ ಪ್ರಶಸ್ತಿ ಕೂಡಾ ಇವರನ್ನು ಅರಸಿ ಬಂದಿವೆ. 2008, 2011, 2014 ಮತ್ತು 2016ರಲ್ಲಿ ಇವರ ಸಾಧನೆಗಳು ಲಿಮ್ಕಾ ಬುಕ್ಗೆ ಸೇರ್ಪಡೆಗೊಂಡಿರುವುದು ವಿಶೇಷ.
ಹೈಬ್ರಿಡ್ ಬೈಕ್ ಮತ್ತು ಕಾರುಗಳನ್ನೂ ವಿನ್ಯಾಸ ಮಾಡಿರುವ ವರುಣ್ಣಿ: ವರುಣ್ಣಿ ಅವರು ಎಲೆಕ್ಟ್ರಿಕ್ ಮತ್ತು ಇಂಧನದ ಹೈಬ್ರಿಡ್ ಬೈಕ್ ಮತ್ತು ಕಾರುನ್ನು ಕೂಡ ವಿನ್ಯಾಸ ಮಾಡಿದ್ದಾರೆ. ತಮ್ಮ ಈ ಸಾಧನೆ ಕುರಿತು ಮಾತನಾಡಿರುವ ಅವರು ಜೀವನದಲ್ಲಿ ಗುರಿ ಇರಬೇಕು. ವಿಶೇಷವಾಗಿ ನೀವು ಬೆಳೆಯುತ್ತಿರುವಾಗ ಜೀವನ ಗುರಿ ಹೊಂದಿರಬೇಕು. ಇಲ್ಲ ಜೀವನವೂ ಗೊಂದಲಮಯವಾಗುತ್ತದೆ ಎನ್ನುತ್ತಾರೆ ಅವರು. ನಿರಂತರ ಸಮರ್ಪಣೆಯಿಂದಾಗಿ ವರುಣ್ಣಿ ಇಂಜಿನಿಯರಿಂಗ್ನಲ್ಲಿ ಪ್ರೇರಣಾದಾಯಕ ವ್ಯಕ್ತಿಯಾಗಿ ರೂಪುಗೊಂಡಿದ್ದು, ಇಳಿ ವಯಸ್ಸಿನಲ್ಲಿಯೂ ತಮ್ಮ ಆವಿಷ್ಕಾರ ಮತ್ತು ಆಸಕ್ತಿ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಚೀನಿ ತಂತ್ರಜ್ಞಾನದಿಂದ ಪ್ರೇರಣೆ; ಮನುಷ್ಯರನ್ನೇ ಹೊತ್ತೊಯ್ಯುವ ಡ್ರೋನ್ ಆವಿಷ್ಕರಿಸಿದ 12ನೇ ತರಗತಿ ವಿದ್ಯಾರ್ಥಿ