ETV Bharat / state

ಪುತ್ತೂರಿನ ಇಂದಿರಾ ಕ್ಯಾಂಟೀನ್​ನಲ್ಲಿ ಆಹಾರದ ಲೆಕ್ಕಾಚಾರದಲ್ಲಿ ಗೋಲ್​ಮಾಲ್! - ಪುತ್ತೂರು ಶಾಸಕ ಸಂಜೀವ ಮಠಂದೂರು

ಕ್ಯಾಂಟೀನ್ ದಾಖಲೆ ಪುಸ್ತಕದಲ್ಲಿ ಗ್ರಾಹಕರಿಗಿಂದ ಪಾರ್ಸಲ್​ಗಳ ಸಂಖ್ಯೆಯೇ ಹೆಚ್ಚಾಗಿರುವುದು ಶಾಸಕರ ಗಮನಕ್ಕೆ ಬಂದಿದೆ. ಒಂದೊಂದು ಮೊಬೈಲ್ ನಂಬರ್​ನಲ್ಲಿ ಎಂಟರಿಂದ ಹತ್ತು ಪಾರ್ಸಲ್​ಗಳನ್ನು ಕೊಂಡೊಯ್ದಿರುವುದನ್ನು ದಾಖಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

indira_canteen
indira_canteen
author img

By

Published : May 26, 2021, 5:36 PM IST

ಪುತ್ತೂರು (ದಕ್ಷಿಣ ಕನ್ನಡ): ರಾಜ್ಯ ಸರಕಾರ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಎರಡು ಹೊತ್ತಿನ ಊಟೋಪಚಾರಕ್ಕಾಗಿ ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟೀನ್‌ ಆರಂಭಿಸಿದೆ. ಕೊರೊನಾ ಕಾರಣದಿಂದಾಗಿ ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಲ್ಲಿರುವ ಕಾರಣ ಎಲ್ಲ ಇಂದಿರಾ ಕ್ಯಾಂಟೀನ್​ನಲ್ಲಿ ಅಗತ್ಯವಿರುವ ಬಡವರಿಗೆ ಹಾಗೂ ಕಾರ್ಮಿಕರಿಗೆ ಉಚಿತವಾಗಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟವನ್ನು ನೀಡಲು ನಿರ್ಧಾರ ಕೈಗೊಂಡಿದೆ.

ಕೊರೊನಾ ಕಾರಣಕ್ಕಾಗಿ ಈ ಕ್ಯಾಂಟೀನ್​ಗಳಲ್ಲಿ ಆಹಾರವನ್ನು ಗ್ರಾಹಕರಿಗೆ ಪಾರ್ಸಲ್ ಮೂಲಕ ನೀಡಲಾಗುತ್ತಿದೆ. ಸರಕಾರ ಯಾವಾಗ ಉಚಿತ ಆಹಾರ ಪೂರೈಕೆಯ ನಿರ್ಧಾರ ಕೈಗೊಂಡಿದೆಯೋ, ಅಂದಿನಿಂದ ಇಂದಿರಾ ಕ್ಯಾಂಟೀನ್​ಗಳಲ್ಲಿ ನಿತ್ಯ 300 ಪಾರ್ಸಲ್​ಗಳ ಲೆಕ್ಕ ಕಾಣಲಾರಂಭಿಸಿದೆ‌.

ಇಂದಿರಾ ಕ್ಯಾಂಟೀನ್​ನಲ್ಲಿ ಗೋಲ್​ಮಾಲ್

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಇಂದಿರಾ ಕ್ಯಾಂಟೀನ್​ನಲ್ಲೂ ಇದೇ ರೀತಿ ಲೆಕ್ಕಾಚಾರ ಕಾಣಲಾರಂಭಿಸಿದ್ದು, ಈ ಬಗ್ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಕ್ಯಾಂಟೀನ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕ್ಯಾಂಟೀನ್ ಸಿಬ್ಬಂದಿ ನಡೆಸುತ್ತಿರುವ ಗೋಲ್ ಮಾಲ್ ಬೆಳಕಿಗೆ ಬಂದಿದೆ‌‌.

ಸರಕಾರದ ಆದೇಶದ ಪ್ರಕಾರ ಇಂದಿರಾ ಕ್ಯಾಂಟೀನ್​ನಲ್ಲಿ ನಿತ್ಯ 300 ಜನರಿಗೆ ಉಚಿತ ಆಹಾರ ನೀಡಲು ಅವಕಾಶ ನೀಡಲಾಗಿದೆ. ಆಹಾರವನ್ನು ಪಾರ್ಸಲ್ ಕೊಂಡೊಯ್ಯುವ ಗ್ರಾಹಕ ತನ್ನ ಮೊಬೈಲ್ ನಂಬರ್ ಅಥವಾ ಅಧಾರ್ ಕಾರ್ಡ್ ತೋರಿಸಿ ಆಹಾರವನ್ನು ಪಡೆದುಕೊಳ್ಳುವ ಅವಕಾಶವನ್ನೂ ನೀಡಲಾಗಿದೆ. ಪುತ್ತೂರು ಇಂದಿರಾ ಕ್ಯಾಂಟೀನ್​ನಲ್ಲೂ ಇದೇ ರೀತಿ ಪಾರ್ಸಲ್ ವ್ಯವಸ್ಥೆ ಮಾಡಲಾಗಿದ್ದರೂ, ಕ್ಯಾಂಟೀನ್ ದಾಖಲೆ ಪುಸ್ತಕದಲ್ಲಿ ಗ್ರಾಹಕರಿಗಿಂದ ಪಾರ್ಸಲ್​ಗಳ ಸಂಖ್ಯೆಯೇ ಹೆಚ್ಚಾಗಿರುವುದು ಶಾಸಕರ ಗಮನಕ್ಕೆ ಬಂದಿದೆ.

golmal in putthur indira canteen
ಇಂದಿರಾ ಕ್ಯಾಂಟೀನ್​ನಲ್ಲಿ ಗೋಲ್​ಮಾಲ್

ಒಂದೊಂದು ಮೊಬೈಲ್ ನಂಬರ್​ನಲ್ಲಿ ಎಂಟರಿಂದ ಹತ್ತು ಪಾರ್ಸಲ್​ಗಳನ್ನು ಕೊಂಡೊಯ್ದಿರುವುದನ್ನು ದಾಖಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕ್ಯಾಂಟೀನ್​ನಿಂದ ಪೂರೈಕೆಯಾದ ಆಹಾರಗಳ ಲೆಕ್ಕಾಚಾರದ ಮೇಲೆ ಸರಕಾರ ಕ್ಯಾಂಟೀನ್ ನಿರ್ವಹಣೆ ಹೊತ್ತವರಿಗೆ ಹಣವನ್ನು ನೀಡುತ್ತಿದ್ದು, ಇದನ್ನೇ ಬಂಡವಾಳವನ್ನಾಗಿಸಲು ಕ್ಯಾಂಟೀನ್ ಸಿಬ್ಬಂದಿ ಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳನ್ನೂ ಕೇಳಿ ಬಂದಿವೆ.

ಗ್ರಾಹಕರು ಬಾರದಿದ್ದರು, ಮೊಬೈಲ್ ನಂಬರ್​ಗಳನ್ನು ದಾಖಲೆ ಪುಸ್ತಕದಲ್ಲಿ ನಮೂದಿಸಿ ಸುಳ್ಳು ಲೆಕ್ಕಾಚಾರವನ್ನು ಸರಕಾರಕ್ಕೆ ನೀಡಲಾಗುತ್ತಿರುವುದು ಬೆಳಕಿಗೆ ಬಂದಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಇಂದಿರಾ ಕ್ಯಾಂಟೀನ್​ನಲ್ಲಿ ಕಂಡು ಬಂದ ಈ ಗೋಲ್​ಮಾಲ್ ಬಗ್ಗೆ ತನಿಖೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

golmal in putthur indira canteen
ಇಂದಿರಾ ಕ್ಯಾಂಟೀನ್​ನಲ್ಲಿ ಗೋಲ್​ಮಾಲ್

ಸರಕಾರ ಬಡ ವರ್ಗದ ಜನರು ಎರಡು ಹೊತ್ತಿನ ಊಟ ಮಾಡಲಿ ಎನ್ನುವ ಕಾರಣಕ್ಕಾಗಿ, ಉಚಿತ ಆಹಾರ ನೀಡುವ ಯೋಜನೆಯನ್ನು ಇಂದಿರಾ ಕ್ಯಾಂಟೀನ್ ಮೂಲಕ ಮಾಡಿದೆ. ಆದರೆ, ಬಡವರಿಗೆ ಸೇರಬೇಕಾದ ಆ ಯೋಜನೆಯಲ್ಲೂ ಅವ್ಯವಹಾರ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕ್ಯಾಂಟೀನ್​ನ ದಾಖಲೆ ಪುಸ್ತಕದಲ್ಲಿ ನಮೂದಿಸಲಾದ ಎಲ್ಲ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಕೇವಲ ಪುತ್ತೂರಿನ ಇಂದಿರಾ ಕ್ಯಾಂಟೀನಲ್ಲದೇ, ಇತರ ಕ್ಯಾಂಟೀನ್​ಗಳಲ್ಲೂ ಇದೇ ರೀತಿಯ ಅವ್ಯವಹಾರ ನಡೆಸುತ್ತಿರುವ ಸಾಧ್ಯತೆಯೂ ಇದ್ದು,ಈ ಬಗ್ಗೆ ಸರಕಾರ ಗಮನಹರಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.