ಮಂಗಳೂರು : ನಗರ ಪೊಲೀಸ್ ವತಿಯಿಂದ ಆಯೋಜಿಸಿರುವ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಡ್ರಗ್ಸ್ ಜಾಗೃತಿಗಾಗಿ ವಿಆರ್ ಸೈಕಲ್ ತಂಡದಿಂದ ಸೈಕಲ್ ಜಾಥಾವನ್ನು ನಡೆಸಲಾಯಿತು.
ನಗರದಲ್ಲಿ ನಡೆದ ಸೈಕಲ್ ಜಾಥಾಗೆ ಇಕನಾಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ ಬ್ರ್ಯಾಂಚ್ ಪೊಲೀಸ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಕೆಕೆನಗರದ ಲೇಡಿಹಿಲ್ ಬಳಿಯಲ್ಲಿರುವ ಮಂಗಳಾ ಸ್ಟೇಡಿಯಂ ಬಳಿ ಚಾಲನೆ ನೀಡಿದರು.
ಮಂಗಳಾ ಸ್ಟೇಡಿಯಂನಿಂದ ಪ್ರಾರಂಭವಾದ ಜಾಥಾ, ಲಾಲ್‌ಬಾಗ್-ಪಿವಿಎಸ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ತೆರಳಿ ಅಂಬೇಡ್ಕರ್ ವೃತ್ತವಾಗಿ ಬಲ್ಮಠ ಬಳಿಯಿಂದ ಮಲ್ಲಿಕಟ್ಟೆಗೆ ತೆರಳಿ ಅಲ್ಲಿಂದ ಮರಳಿ ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ ಪಿವಿಎಸ್ನಿಂದ ಮಂಗಳಾ ಸ್ಟೇಡಿಯಂಗೆ ಆಗಮಿಸಿತು.
ಓದಿ: ಅಮಿತ್ ಶಾ ಬಂಗಾಳ ಭೇಟಿ : ಬೋಲ್‌ಪುರದಲ್ಲಿಂದು ಭರ್ಜರಿ ರೋಡ್ ಶೋ
ಸೈಕಲ್ ಜಾಥಾದಲ್ಲಿ ಮಹಿಳೆಯರು, ಪುರುಷರು, ಸಣ್ಣ ಮಕ್ಕಳೂ ಸೇರಿ ಸುಮಾರು 60 ಮಂದಿ ಭಾಗವಹಿಸಿದ್ದರು. ಇದರಲ್ಲಿ ನಾಲ್ಕೂವರೆ ವರ್ಷದ ಪುಟ್ಟ ಬಾಲಕಿ ಭಾಗವಹಿಸಿದ್ದು ವಿಶೇಷವಾಗಿತ್ತು.