ETV Bharat / state

ಕ್ರೈಸ್ತ ಕೊಂಕಣಿಗರನ್ನು ಸರ್ಕಾರ ಮೂಲೆ ಗುಂಪು ಮಾಡಿದೆ: ಐವನ್ ಡಿಸೋಜಾ ಆರೋಪ - konkani letrature academy news

ಕೊಂಕಣಿ ಅಕಾಡೆಮಿಯಿಂದ ಒಂದೇ ಒಂದು ಅಕಾಡೆಮಿ, ಪ್ರಾಧಿಕಾರಕ್ಕೆ ಕೊಂಕಣಿ ಕ್ರೈಸ್ತರನ್ನು ನೇಮಕ ಮಾಡದೆ ರಾಜ್ಯ ಸರ್ಕಾರ ಅನ್ಯಾಯವೆಸಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ
author img

By

Published : Oct 17, 2019, 3:12 PM IST

ಮಂಗಳೂರು: ರಾಜ್ಯ ಸರ್ಕಾರ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ

ಕೊಂಕಣಿ ಅಕಾಡೆಮಿಯಿಂದ ಒಂದೇ ಒಂದು ಅಕಾಡೆಮಿ, ಪ್ರಾಧಿಕಾರಕ್ಕೆ ಕೊಂಕಣಿ ಕ್ರೈಸ್ತರನ್ನು ನೇಮಕ ಮಾಡದೆ ರಾಜ್ಯ ಸರ್ಕಾರ ಅನ್ಯಾಯವೆಸಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.

ಕ್ರೈಸ್ತ ಕೊಂಕಣಿಗರನ್ನು ಮೂಲೆಗುಂಪು ಮಾಡಿ ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ. ನನ್ನ ಸಮುದಾಯಕ್ಕೆ ಇದರಿಂದ ನೋವಾಗಿದೆ. ಇದನ್ನು ಕೂಡಲೇ ಸರಿಪಡಿಸದಿದ್ದಲ್ಲಿ ನಾನು ಓರ್ವ ಶಾಸಕನಾಗಿ ವಿಧಾನಸಭೆಯ ಮುಂದೆ ಧರಣಿ ಕೂರುತ್ತೇನೆ ಎಂದು ಎಚ್ಚರಿಕೆ ರವಾನಿಸಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರಿನಲ್ಲಿದ್ದು, ಈವರೆಗೆ 9 ಅಧ್ಯಕ್ಷರು ಆಗಿದ್ದು, ಅದರಲ್ಲಿ ನಾಲ್ವರು ಕೊಂಕಣಿ ಕ್ರೈಸ್ತರೇ ಆಗಿದ್ದಾರೆ. ಕರ್ನಾಟಕದಲ್ಲಿ ಹನ್ನೊಂದು ಧರ್ಮಪ್ರಾಂತ್ಯಗಳಲ್ಲಿ ನಾಲ್ಕು ಧರ್ಮ ಪ್ರಾಂತ್ಯಗಳಲ್ಲಿ ಕೊಂಕಣಿಯೇ ಅಧಿಕೃತ ಭಾಷೆ. ಇಲ್ಲಿ ಎಲ್ಲವೂ ಕೊಂಕಣಿ ಭಾಷೆಯ ಮೂಲಕ ನೆರವೇರುತ್ತದೆ. ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ 200 ಪುಸ್ತಕಗಳಲ್ಲಿ ಕೊಂಕಣಿ ಕ್ರೈಸ್ತ ಸಾಹಿತಿಗಳ 150ರಷ್ಟು ಪುಸ್ತಕಗಳು ಪ್ರಕಟವಾಗಿವೆ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿಯವರು ಇದನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ, ಕೊಂಕಣಿ ಕ್ರೈಸ್ತರ ಭಾವನೆಗಳಿಗೆ ಸ್ಪಂದಿಸಬೇಕು. ಇಲ್ಲಿ ನನಗೆ ಸರ್ಕಾರದ ವ್ಯವಸ್ಥೆಯ ಬಗ್ಗೆ ನೋವಾಗಿದ್ದು, ನನ್ನ ಪ್ರತಿಭಟನೆ ಸರ್ಕಾರದ ವಿರುದ್ಧವೇ ಹೊರತು, ನೇಮಕವಾದವರ ವಿರುದ್ಧವಲ್ಲ ಎಂದು ಐವನ್​ ಡಿಸೋಜ ಹೇಳಿದ್ರು.

Intro:ಮಂಗಳೂರು: ರಾಜ್ಯಸರಕಾರ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ. ಕೊಂಕಣಿ ಅಕಾಡೆಮಿಯಿಂದ ಹಿಡಿದು ಒಂದೇ ಒಂದು ಅಕಾಡೆಮಿ, ಪ್ರಾಧಿಕಾರಗಳಿಗೆ ಕೊಂಕಣಿ ಕ್ರೈಸರನ್ನು ನೇಮಕ ಮಾಡದೆ ರಾಜ್ಯಸರಕಾರ ಅನ್ಯಾಯವೆಸಗಿದೆ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ರೈಸ್ತ ಕೊಂಕಣಿಗರನ್ನು ಮೂಲೆಗುಂಪು ಮಾಡಿ ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ. ನನ್ನ ಸಮುದಾಯಕ್ಕೆ ಇದರಿಂದ ನೋವಾಗಿದೆ. ಇದನ್ನು ಕೂಡಲೇ ಸರಿಪಡಿಸದಿದ್ದಲ್ಲಿ ನಾನು ಓರ್ವ ಶಾಸಕನಾಗಿ ವಿಧಾನಸಭೆಯ ಮುಂದೆ ಧರಣಿ ಮಾಡುತ್ತೇನೆ ಎಂದು ಹೇಳಿದರು.

Body:ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರಿನಲ್ಲಿದ್ದು, ಈವರೆಗೆ 9 ಅಧ್ಯಕ್ಷರು ಆಗಿದ್ದು, ಅದರಲ್ಲಿ ನಾಲ್ವರು ಕೊಂಕಣಿ ಕ್ರೈಸ್ತರೇ ಆಗಿದ್ದಾರೆ. ಕರ್ನಾಟಕದಲ್ಲಿ ಹನ್ನೊಂದು ಧರ್ಮಪ್ರಾಂತ್ಯಗಳಲ್ಲಿ ನಾಲ್ಕು ಧರ್ಮ ಪ್ರಾಂತ್ಯಗಳಲ್ಲಿ ಕೊಂಕಣಿಯೇ ಅಧಿಕೃತ ಭಾಷೆ. ಇಲ್ಲಿ ಎಲ್ಲವೂ ಕೊಂಕಣಿ ಭಾಷೆಯ ಮೂಲಕ ನೆರವೇರುತ್ತದೆ. ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ 200 ಪುಸ್ತಕಗಳಲ್ಲಿ ಕೊಂಕಣಿ ಕ್ರೈಸ್ತ ಸಾಹಿತಿಗಳ 150ರಷ್ಟು ಪುಸ್ತಕಗಳು ಪ್ರಕಟವಾಗಿದೆ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಸಿ.ಟಿ.ರವಿಯವರು ಇದನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ, ಕೊಂಕಣಿ ಕ್ರೈಸ್ತರ ಭಾವನೆಗಳಿಗೆ ಸ್ಪಂದಿಸಬೇಕು. ಇಲ್ಲಿ ನನಗೆ ಸರಕಾರದ ವ್ಯವಸ್ಥೆಯ ಬಗ್ಗೆ ನೋವಾಗಿದ್ದು, ನನ್ನ ಪ್ರತಿಭಟನೆ ಸರಕಾರದ ವಿರುದ್ಧ ನೇಮಕವಾದವರ ವಿರುದ್ಧವಲ್ಲ ಎಂದು ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.