ಮಂಗಳೂರು: ಕೆನಡಾದಿಂದ ಸರ್ವೆಲೊ ಪಿ ಎಕ್ಸ್- 2020 ಸೈಕಲ್ ಮಂಗಳೂರಿಗೆ ಬಂದಿದೆ. ಭಾರತಕ್ಕೆ ಮೊದಲು ಬಂದ ಈ ಸೈಕಲ್‌ನ ಬೆಲೆ ಹುಬ್ಬೇರಿಸುವಂಥದ್ದು. 12 ಲಕ್ಷ ರೂ. ಬೆಲೆಯ ಈ ಸೈಕಲ್ ಸೈಕ್ಲಿಷ್ಟ್‌ಗಳ ಆಕರ್ಷಣೆಯಾಗಿದೆ.
ಮಂಗಳೂರಿನ ಪ್ರಖ್ಯಾತ ಸೈಕಲ್ ಮಳಿಗೆ ತಾಜ್ ಸೈಕಲ್ ಮಳಿಗೆಯಲ್ಲಿ ಈ ಸೈಕಲ್ ಇದೆ. ವೃತ್ತಿಪರ ಸೈಕ್ಲಿಸ್ಟ್‌ಗಳಿಗೆ ಟ್ರಯಥ್ಲಾನ್‌ಗಾಗಿ ಈ ಸೈಕಲ್ ನಿರ್ಮಾಣವಾಗಿದೆ. ಸರ್ವೆಲೊ ಪಿ ಎಕ್ಸ್ ಸಿರೀಸ್‌ನಲ್ಲಿ ಇದು ಅಗ್ರಸ್ಥಾನದಲ್ಲಿದ್ದು, ಅತ್ಯಾಧುನಿಕ ತಂತ್ರಜ್ಞಾನದಿಂದ ಆವಿಷ್ಕಾರಗೊಂಡಿದೆ. ಮೈಸೂರಿನ ಸೈಕ್ಲಿಷ್ಟ್ ಒಬ್ಬರು ಈ ಸೈಕಲ್‌ನ್ನು ಬುಕ್ ಮಾಡಿದ್ದಾರೆ.
ವಿಶೇಷತೆಗಳಿವು:
ಸರ್ವೆಲೊ ಪಿ ಎಕ್ಸ್ ಸೈಕಲ್ ಬಲಿಷ್ಠವಾದ ಮತ್ತು ಹಗುರವಾಗಿದೆ. ಸುಧಾರಿತ ಏರೋ ಪರೀಕ್ಷೆ ಬಳಿಕ ಇದನ್ನು ತಯಾರಿಸಿದ್ದು, ಸುಧಾರಿತ ಏರೋ ಡೈನಾಮಿಕ್ಸ್, ಕಾಕ್ ಪಿಟ್ ಒಳಗೊಂಡಿದೆ. ಮಾತ್ರವಲ್ಲದೆ, ಅತ್ಯಾಧುನಿಕ ಶಿಮಾನೊ ಡ್ಯುರಾ ಎಸ್‌ಡಿಐ 2 ಸಾಫ್ಟ್ ವೇರ್ ಡ್ರೈವ್ ಹೊಂದಿದೆ. ಇಲೆಕ್ಟ್ರಾನಿಕ್ ಗಿಯರ್ ಶಿಫ್ಟರ್‌ಅನ್ನು ಇದು ಒಳಗೊಂಡಿದೆ. ಸಾಮಾನ್ಯವಾಗಿ ಸೈಕಲ್‌ಗಳು ಸ್ಟೀಲ್ ನಿಂದ ತಯಾರಿಸಲಾಗುತ್ತದೆ. ಆದ್ರೆ ಈ ಸೈಕಲನ್ನು ಕಾರ್ಬನ್ ಫೈಬರ್ ನಿಂದ ತಯಾರಿಸಲಾಗಿದೆ. ನಿರ್ದಿಷ್ಟ ರೈಡರ್‌ಗೆ ತಕ್ಕಂತೆ ಸೆಟ್ ಅಪ್ ಮಾಡಬಹುದಾಗಿದೆ.
ಈ ಸೈಕಲ್‌ಅನ್ನು ಟ್ರಯಾಥ್ಲಾನ್ ಸ್ಪರ್ಧೆಗೆ ಮಾತ್ರ ಬಳಸಬಹುದಾಗಿದೆ. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ, ಇದನ್ನು ರಸ್ತೆಯಲ್ಲಿ ಓಡಿಸುವಂತಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಈ ಸೈಕಲ್ ಸದ್ಯ ಎಲ್ಲರ ಕುತೂಹಲದ ಕೇಂದ್ರಬಿಂದು.