ETV Bharat / state

"ನಾನು ಸತ್ತಾಗ ಬೆಂಕಿ ಇಡಬೇಕಾದ ಮಗನಿಗೆ ನಾನೇ ಬೆಂಕಿ ಇಡಬೇಕಾಯಿತಲ್ಲಾ", ಪೋಷಕರ ಆಕ್ರಂದನ - ಮೆರವಣಿಗೆಗೆ ಅವಕಾಶ ಕೊಡದ ಪೊಲೀಸರು

Akshay Kallega murder case: ಅಕ್ಷಯ್​ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Akshay Kallega murder case: Last rites held at home
ಅಕ್ಷಯ್​ ಕಲ್ಲೇಗ ಕೊಲೆ ಪ್ರಕರಣ: ಮುಗಿಲು ಮುಟ್ಟಿದ ಪೋಷಕರ ರೋದನೆ
author img

By ETV Bharat Karnataka Team

Published : Nov 8, 2023, 2:45 PM IST

Updated : Nov 8, 2023, 4:35 PM IST

ಅಕ್ಷಯ್​ ಕಲ್ಲೇಗ ಕೊಲೆ ಪ್ರಕರಣ: ಮುಗಿಲು ಮುಟ್ಟಿದ ಪೋಷಕರ ರೋದನೆ

ಪುತ್ತೂರು (ದಕ್ಷಿಣ ಕನ್ನಡ): ಸೋಮವಾರ ತಡರಾತ್ರಿ ಪುತ್ತೂರು ನೆಹರೂ ನಗರ ಜಂಕ್ಷನ್​ನಲ್ಲಿ ನಡೆದ ಕಲ್ಲೇಗ ಟೈಗರ್ಸ್​ ತಂಡದ ಮುಖ್ಯಸ್ಥ ಅಕ್ಷಯ್​ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಶರಣಾಗಿದ್ದು, ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ. ಒಟ್ಟು ನಾಲ್ವರು ಆರೋಪಿಗಳನ್ನು ನ.22ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಕ್ಷಯ್​ ಕಲ್ಲೇಗ ಅವರ ಸ್ನೇಹಿತ ಚಿಕ್ಕಮುಡ್ನೂರು ಗ್ರಾಮದ ನಿವಾಸಿ ವಿಖ್ಯಾತ್​ ಬಿ ಎಂಬವರು ನೀಡಿದ ದೂರಿನಂತೆ ಕೊಲೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಖ್ಯಾತ್​ ನೀಡಿದ ದೂರಿನಲ್ಲಿ ಅಕ್ಷಯ್​ ಕಲ್ಲೇಗ ಅವರ ಕೊಲೆ ಹಿಂದಿನ ಕಾರಣ ಬಯಲಾಗಿದೆ. ದೂರಿನ ಪ್ರಕಾರ, ನ. 6ರಂದು ರಾತ್ರಿ ಗೆಳೆಯ ಅಕ್ಷಯ್​ ಕಲ್ಲೇಗ ಹಾಗೂ ಪ್ರಕರಣದ ಆರೋಪಿಗಳಾದ ಮನೀಶ್​, ಚೇತನ್​ ಅವರೊಂದಿಗೆ ದೂರವಾಣಿಯಲ್ಲಿ ಮಾತಿನ ಚಕಮಕಿಯಾಗಿತ್ತು. ಅದಾದ ನಂತರ ನಾನು ಹಾಗೂ ಅಕ್ಷಯ್​ ಕಲ್ಲೇಗ ನೆಹರು ನಗರದ ಬಳಿಯಿರುವ ಎಟಿಎಂ ಪಕ್ಕದಲ್ಲಿ ನಿಂತುಕೊಂಡಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳಾದ ಚೇತನ್​, ಮನೀಶ್​, ಮಂಜ ಹಾಗೂ ಕೇಶವ ಫೋನ್​ನಲ್ಲಿ ನಡೆದಿದ್ದ ಮಾತಿನ ಚಕಮಕಿ ಬಗ್ಗೆ ಮತ್ತೆ ತಕರಾರು ತೆಗೆದಿದ್ದರು. ಅಷ್ಟೇ ಅಲ್ಲದೆ ಅವಾಚ್ಯ ಪದಗಳಿಂದ ಬೈದು, ತಾವು ತಂದಿದ್ದ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾನು ಓಡಿ ತಪ್ಪಿಸಿಕೊಂಡೆ. ಆದ್ರೆ, ಅಕ್ಷಯ್​ ಕಲ್ಲೇಗನನ್ನು ಆರೋಪಿಗಳು ಸೇರಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿ ಹೋಗಿದ್ದಾರೆ ಎಂದು ವಿಖ್ಯಾತ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು 341, 504, 506, 307, 302 ಜೊತೆಗೆ 34 ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

akshay-kallega-murder-case-last-rites-held-at-home
ಆರೋಪಿಗಳ ಬಂಧನ

ಇಬ್ಬರು ಆರೋಪಿಗಳು ಶರಣು: ಅಕ್ಷಯ್ ಕಲ್ಲೇಗ ಹತ್ಯೆ ಮಾಡಿದ್ದ ಸ್ವಲ್ಪ ಹೊತ್ತಲ್ಲೇ ಇಬ್ಬರು ಆರೋಪಿಗಳಾದ ದಾರಂದಕುಕ್ಕು ನಿವಾಸಿ ಮನೀಶ್ ಮತ್ತು ಖಾಸಗಿ ಬಸ್ ಚಾಲಕ ಬನ್ನೂರು ಕೃಷ್ಣನಗರ ನಿವಾಸಿ ಚೇತನ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಅವರನ್ನು ವಿಚಾರಣೆಗೊಳಪಡಿಸಿದ ಪೊಲೀಸರು ಕೃತ್ಯದಲ್ಲಿ ಇನ್ನಿಬ್ಬರು ಭಾಗಿಯಾಗಿರುವುದರ ಬಗ್ಗೆ ಮಾಹಿತಿ ಪಡೆದಿದ್ದರು. ಕೂಡಲೇ ಆ ಇಬ್ಬರು ಆರೋಪಿಗಳಾದ ಮಂಜುನಾಥ್ ಯಾನೆ ಹರಿ ಮತ್ತು ಕೇಶವ ಪಡೀಲ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.

ದೇರಳಕಟ್ಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ: ಗಂಭೀರವಾಗಿ ಗಾಯಗೊಂಡು ಅಕ್ಷಯ್​ ಕಲ್ಲೇಗ ಸ್ಥಳದಲ್ಲೇ ಸಾವನ್ನಪ್ಪಿದ್ದರು. ರಾತ್ರಿ ಸುಮಾರು 1.30ರ ಸಮಯಕ್ಕೆ ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಡಾ. ಗಾನ ಪಿ ಕುಮಾರ್ ಸಹಿತ ಪೊಲೀಸರ ತಂಡ ಭೇಟಿ ನೀಡಿ, ಮಹಜರು ನಡೆಸಿತ್ತು. ನಂತರ ಮೃತದೇಹವನ್ನು ಪೊಲೀಸರ ಸೂಚನೆಯಂತೆ ಅಕ್ಷಯ್​ ಕುಟುಂಬದ ಗೋವರ್ಧನ್​ ಕಲ್ಲೇಗ ಹಾಗೂ ಲೋಕೇಶ್​ ಎಂಬವರು ಆಂಬ್ಯುಲೆನ್ಸ್​ನಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದರು.

ಮೆರವಣಿಗೆಗೆ ಅವಕಾಶ ಕೊಡದ ಪೊಲೀಸರು: ಅಕ್ಷಯ್ ಅವರ ಪಾರ್ಥಿವ ಶರೀರರವನ್ನು ಪುತ್ತೂರಿಗೆ ತರುವ ವೇಳೆ ಕಬಕದಿಂದ ಮೆರವಣಿಗೆ ಮಾಡಲು ಸ್ನೇಹಿತ ಬಳಗದವರು ತೆರೆದ ಆಂಬ್ಯುಲೆನ್ಸ್​ ಶೃಂಗಾರಗೊಳಿಸಿ ಸಿದ್ಧಪಡಿಸಿದ್ದರು. ಆದರೆ ಮೆರವಣಿಗೆಗೆ ಪೊಲೀಸರು ಅವಕಾಶ ನೀಡಿಲ್ಲ. ಈ ಬಗ್ಗೆ ಕಬಕದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮೆರವಣಿಗೆಗೆ ಅವಕಾಶ ಕೊಡದ ಕಾರಣ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ನೇರವಾಗಿ ಅವರ ಶೇವಿರೆ ಮನೆಗೆ ತಂದರು. ಹೀಗಾಗಿ ಅಕ್ಷಯ್ ಅಭಿಮಾನಿ ಹಾಗೂ ಸ್ನೇಹಿತರ ಬಳಗ ಅಂತಿಮ ದರ್ಶನಕ್ಕಾಗಿ ಅಕ್ಷಯ್ ಅವರ ಮನೆಯಲ್ಲೇ ಜಮಾಯಿಸಿದ್ದರು.

"ನನ್ನ ಮಗನನ್ನು ಚುಚ್ಚಿ ಚುಚ್ಚಿ ಕೊಂದರು": ಅಕ್ಷಯ್ ಅವರ ಸಾವಿನ ಸುದ್ದಿ ತಿಳಿದು ತಂದೆ ಚಂದ್ರಶೇಖರ್ ಮತ್ತು ತಾಯಿ ಕಮಲ ಅವರ ಆಕ್ರೋಶ ಮತ್ತು ಆಕ್ರಂದನ ಮುಗಿಲು ಮುಟ್ಟಿತ್ತು. ಪಾರ್ಥಿವ ಶರೀರ ಮನೆಗೆ ತಂದ ವೇಳೆ ಮನೆ ಮಂದಿ ಅಕ್ಷಯ್ ಅವರನ್ನು ಕಂಡು ಕಣ್ಣೀರು ಹಾಕುತ್ತಿದ್ದರು. ತಂದೆ ಚಂದ್ರಶೇಖರ್ ಅವರು "ನನ್ನ ಮಗನನ್ನು ಚುಚ್ಚಿ ಚುಚ್ಚಿ ಕೊಂದರು. ನಾನು ಸತ್ತಾಗ ನನಗೆ ಬೆಂಕಿ ಇಡಬೇಕಾದ ಮಗನಿಗೆ ನಾನೇ ಬೆಂಕಿ ಇಡಬೇಕಾಯಿತಲ್ಲಾ" ಎಂದು ಪದೇ ಪದೆ ಹೇಳಿ ರೋದಿಸುತ್ತಿದ್ದ ದೃಶ್ಯ ಕರಳು ಹಿಂಡುವಂತಿತ್ತು.

ಸಾವಿರಾರು ಮಂದಿಯ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ: ಅಕ್ಷಯ್ ಕಲ್ಲೇಗ ಅವರ ಅಂತ್ಯಸಂಸ್ಕಾರ ಅವರ ಮನೆಯ ಸಮೀಪದ ತೋಟದ ಬದಿಯಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಅಶ್ರಫ್ ಕಲ್ಲೇಗ, ಶಿವರಾಮ ಆಳ್ವ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಕಬಕ ಗ್ರಾ.ಪಂ ಮಾಜಿ ಅಧ್ಯಕ್ಷ ವಿನಯ ಕಲ್ಲೇಗ ಸಹಿತ ಸಾವಿರಾರು ಮಂದಿ ಆಗಮಿಸಿ ಅಕ್ಷಯ್ ಕಲ್ಲೇಗ ಅವರ ಅಂತಿಮ ದರ್ಶನ ಪಡೆದರು.

ಹಿಟಾಚಿ ಖರೀದಿಗೆ ಸಿದ್ಧತೆ: ಅಕ್ಷಯ್ ಕಲ್ಲೇಗ ಹುಲಿ ವೇಷದ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ಇತ್ತೀಚೆಗೆ ಸ್ನೇಹಿತರೊಂದಿಗೆ ದೆಹಲಿಗೆ ಪ್ರವಾಸ ಮಾಡಿದ್ದರು. ನ.6ರಂದು ಬೆಳಗ್ಗೆ ದೆಹಲಿಯಿಂದ ಬಂದವರು ಸ್ನೇಹಿರೊಂದಿಗೆ ಹಿಟಾಚಿ ಖರೀದಿಸುವ ವಿಚಾರದ ಬಗ್ಗೆ ಮಾತನಾಡಿದ್ದರು. ಜೊತೆಗೆ ನ.7ರಂದು ಹಿಟಾಚಿ ವಿಚಾರವಾಗಿ ಮಾತನಾಡಲು ಪಾಸ್‌ಪೋರ್ಟ್ ಅಳತೆಯ ಫೋಟೋ ಕೂಡ ಮಾಡಿಸಿಕೊಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.

ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆತಂದು ಮಹಜರು: ಕೊಲೆಗೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ಅಕ್ಷಯ್ ಕೊಲೆಯಾಗಿದ್ದ ಸ್ಥಳಕ್ಕೆ ನ. 7ರ ಸಂಜೆ ಕರೆತಂದು ಮಹಜರು ನಡೆಸಿದರು. ಈ ವೇಳೆ ಆರೋಪಿಗಳ ಚಹರೆ ಕಾಣದಂತೆ ಮುಖಗವಸು ಹಾಕಲಾಗಿತ್ತು.

‘ಗೆಳೆಯರಿಂದಲೇ ಕೊಲೆ ಆಗಿರುವುದಕ್ಕೆ ಖೇದಕರ’: ಅಕ್ಷಯ್ ಕಲ್ಲೇಗ ಶೇವಿರೆ ಮನೆಗೆ ಬಂದು ಅಂತಿಮ ದರ್ಶನ ಪಡೆದ ಪುತ್ತೂರು ಶಾಸಕ ಅಶೋಕ್​ ರೈ ಮನೆ ಮಂದಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು. ''ಅಕ್ಷಯ್ ಕಲ್ಲೇಗ ಕೊಲೆ ನಿರೀಕ್ಷೆ ಮಾಡದಂತಹದ್ದು. ಆ ಯುವಕ ತನ್ನ ಗೆಳೆಯರಿಂದಲೇ ಕೊಲೆಗೀಡಾಗಿರುವುದು ಖೇದಕರ. ಕಾನೂನು ಪ್ರಕಾರ ಯಾವ ರೀತಿ ಶಿಕ್ಷೆ ಆಗಬೇಕೋ ಅದು ಆಗಲೇಬೇಕು. ಜನತೆ ಭಯ ಪಡುವ ಅಗತ್ಯವಿಲ್ಲ. ವೈಮನಸ್ಸಿನಿಂದ ಮಾತಿಗೆ ಮಾತು ಬೆಳೆದು ಈ ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಆರೋಪಿಗಳಿಗೆ ಶಿಕ್ಷೆ ಆದ ಬಳಿಕ ಅವರು ಜಾಮೀನು ಪಡೆದು ಹೊರ ಬರುವಾಗ ಅವರನ್ನು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ. ಇವತ್ತು ನಮ್ಮ ಕಾನೂನಿನಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ. ಇವತ್ತು ಬಂಧನವಾದವರು 3 ತಿಂಗಳ ಬಳಿಕ ಹೊರಗೆ ಬರುತ್ತಾರೆ. ಹಾಗಾಗಬಾರದು, ವಿದೇಶಗಳಂತೆ ಮೂರು ತಿಂಗಳ ಒಳಗೆ ಶಿಕ್ಷೆ ವಿಧಿಸಬೇಕು. ಅಂತಹ ಕಾನೂನು ನಮ್ಮಲ್ಲಿ ಬರಬೇಕು'' ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದೇನು?: ಅಕ್ಷಯ್ ಕಲ್ಲೇಗ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮಾಜಿ ಶಾಸಕ ಸಂಜೀವ ಮಠಂದೂರು ಮಾಧ್ಯಮದ ಜೊತೆ ಮಾತನಾಡಿ, ಹುಲಿ ಕುಣಿತಕ್ಕೆ ತನ್ನದೇ ಆದ ಛಾಪನ್ನು ಕೊಟ್ಟು ಎಲ್ಲಾ ಯುವಕರಿಗೆ ನಾಯಕತ್ವ ಕೊಟ್ಟು, ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ಕೊಟ್ಟ ಅಕ್ಷಯ್​ ಕಲ್ಲೇಗ ಅವರ ಹತ್ಯೆಯಾಗಿದೆ. ಈ ಹತ್ಯೆಯ ಹಿಂದೆ ಯಾರಿದ್ದಾರೋ ಅದನ್ನು ಪತ್ತೆ ಹಚ್ಚುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು. ಕಲಾವಿದ ಅಕ್ಷಯ್​ ಕುಟುಂಬಕ್ಕೆ ರೂ. 1 ಕೋಟಿ ಪರಿಹಾರ ಕೊಡಬೇಕು. ದ.ಕ ಜಿಲ್ಲೆಯಲ್ಲಿ ಲಾ ಆ್ಯಂಡ್ ಆರ್ಡರ್ ಕುಸಿದಿದೆ. ಎರಡು ತಿಂಗಳಲ್ಲಿ ಎರಡು ಮರ್ಡರ್ ಆಗಿವೆ. ಇದಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಲ್ಲಿ, ರಾತ್ರಿ ಪೊಲೀಸ್ ಬೀಟ್ ಹೆಚ್ಚು ಪರಿಣಾಮಕಾರಿಯಾಗಿ ಮಾಡುವಲ್ಲಿ ಪರೋಕ್ಷವಾಗಿ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"ಮಾವ ಮಾವ ಎಂದು ನನ್ನನ್ನು ಕರೆಯುತ್ತಿದ್ದ": ''ಖ್ಯಾತ ಹುಲಿವೇಷಧಾರಿ ರಾಧಾಕೃಷ್ಣ ಶೆಟ್ಟಿ ಮಾಧ್ಯಮದ ಜೊತೆ ಮಾತನಾಡಿ, ತುಂಬಾ ಒಳ್ಳೆಯ ಹುಡುಗ. ನನ್ನನ್ನು ಯಾವಾಗಲು ಮಾವ ಮಾವ ಎಂದು ಕರೆಯುತ್ತಿದ್ದ. ಹುಡುಗ ತುಂಬಾ ಒಳ್ಳೆಯ ಕಲಾವಿದನಾಗಿದ್ದ'' ಎಂದು ಹೇಳಿದರು.

ಪಿಲಿರಂಗ್, ಪಿಲಿಗೊಬ್ಬುವಿನಲ್ಲಿ ತಂಡಕ್ಕೆ ಪ್ರಶಸ್ತಿ: ಅಕ್ಷಯ್ ಕಲ್ಲೇಗ ಅವರು ಕಳೆದ ಆರು ವರ್ಷಗಳ ಹಿಂದೆ ಕಲ್ಲೇಗ ಟೈಗರ್ಸ್​ ಎಂಬ ಹೆಸರಿನ ಹುಲಿವೇಷ ತಂಡ ರಚಸಿದ್ದರು. ನೆಹರೂ ನಗರದ ಪ್ರಸಿದ್ಧ ಕಲ್ಕುಡ ದೈವಸ್ಥಾನದ ಕ್ಷೇತ್ರದಲ್ಲಿ ಹುಲಿವೇಷ ಕಟ್ಟಿದ್ದರು. ಈ ವರ್ಷದ ನವರಾತ್ರಿಯಲ್ಲೂ ಅ.18 ರಿಂದ ಊದು ಪೂಜೆಯೊಂದಿಗೆ ಪುತ್ತೂರಿನ ನಾನಾ ಕಡೆ ಇವರ ತಂಡ ಪ್ರದರ್ಶನ ನೀಡಿತ್ತು. ಪುತ್ತೂರಿನಲ್ಲಿ ಅ.22ರಂದು ನಡೆದ ಪಿಲಿರಂಗ್ ಮತ್ತು ಪಿಲಿಗೊಬ್ಬು ಎಂಬ ಎರಡು ಹುಲಿ ವೇಷ ಸ್ಪರ್ಧೆಯಲ್ಲಿ ಇವರ ತಂಡ ಪ್ರಶಸ್ತಿ ಗಳಿಸಿತ್ತು.

ಇದನ್ನೂ ಓದಿ: ಪುತ್ತೂರು: ಟೈಗರ್ಸ್‌ ಕಲ್ಲೇಗ ಹುಲಿವೇಷ ತಂಡದ ಅಕ್ಷಯ್‌ ಕಲ್ಲೇಗ ಬರ್ಬರ ಹತ್ಯೆ; ಮೂವರ ಬಂಧನ

Last Updated : Nov 8, 2023, 4:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.