ETV Bharat / state

ಹೆಂಡತಿ ಕೊಟ್ಟ ಒಂದೇ ಮಿಸ್​ ಕಾಲ್​ ಪತಿಯ ಕೊಲೆಗೆ ಕಾರಣವಾಯ್ತು... ಪಾಗಲ್​ ಪ್ರೇಮಿ ಮಾಡಿದ್ದೇನು?

ಹೆಂಡತಿಯ ಮಿಸ್ ಕಾಲ್, ಗಂಡನ ಪ್ರಾಣವನ್ನೆ ತೆಗೆಯುವಂತೆ ಮಾಡಿದ ಘಟನೆ ಕೋಟೆನಗರಿಯನ್ನೆ ಬೆಚ್ಚಿಬೀಳುವಂತೆ ಮಾಡಿದೆ.

ಪಾಗಲ್ ಪ್ರೇಮಿಯ ಮಿಸ್ ಕಾಲ್ ಪ್ರೀತಿ
author img

By

Published : Mar 29, 2019, 7:53 PM IST

ಚಿತ್ರದುರ್ಗ : ಮನಸಾರೆ ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳು, ಸುಂದರ ಸಂಸಾರ ನಡೆಸುತ್ತಿದ್ದರು. ಹೆಂಡತಿಯ ಕೈತಪ್ಪಿ ಮಾಡಿದ ಮಿಸ್ ಕಾಲ್ ಗಂಡನ ಪ್ರಾಣವನ್ನೆ ತೆಗೆದ ಘಟನೆ ನಗರದಲ್ಲಿ ನಡೆದಿದೆ.

ನಗರದಲ್ಲಿ ಕಳೆದ ವಾರ ದಿ, 22 ರಂದು ಜೈಲು ರಸ್ತೆಯಲ್ಲಿರೋ ಬಿ.ಎಸ್ ಗೌಡ ಲೇಔಟ್ ನ ಕಸದ ರಾಶಿಯ ಮಧ್ಯೆ ವ್ಯಕ್ತಿಯೊಬ್ಬನನ್ನ ಗುರುತು ಸಿಗದ ರೀತಿಯಲ್ಲಿ ಬರ್ಭರವಾಗಿ ಹತ್ಯೆ ಮಾಡಲಾಗಿತ್ತು, ಮೃತದೇಹವನ್ನ ಖಾಸಗಿ ವಾಹಿನಿಯ ಕ್ಯಾಮರಾ ಮ್ಯಾನ್ ಮಂಜುನಾಥ್ ಎಂಬುವವರು ಗುರುತಿಸಿದಾಗ ಹೇರ್ ಕಟಿಂಗ್ ಸೆಲ್ಯೂನ್ ನಲ್ಲಿ ಕೆಲಸ ಮಾಡ್ತಿರೋ ನವೀನ್ ಎಂಬಾತನ ದೇಹ ಎಂದು ಪೊಲೀಸರಿ ತಿಳಿದಿತ್ತು.

ಪಾಗಲ್ ಪ್ರೇಮಿಯ ಮಿಸ್ ಕಾಲ್ ಪ್ರೀತಿ. ಕೊಲೆಯಲ್ಲಿ ಅಂತ್ಯ

ಪ್ರಕರಣ ದಾಖಲಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರಿಗೆ ಮೊದಲಿಗೆ ಕೊಲೆಯ ಸುಳಿವು ನೀಡಿದ್ದು ನವೀನ್ ಬಳಸುತ್ತಿದ್ದ ಮೊಬೈಲ್, ಕೊನೆಯ ಸಲ ನವೀನನಿಗೆ ಬಂದಿದ್ದ ಕರೆಯನ್ನಾಧರಿಸಿ ಕಾರ್ಯಾಚರಣೆಗಿಳಿದ ಪೋಲಿಸರಿಗೆ ಮೊದಲು ಸಿಕ್ಕಿದ್ದು ಚಳ್ಳಕೆರೆ ಮೂಲದ ಟ್ಯಾಕ್ಸಿ ಚಾಲಕ ಅಕ್ಷಯ್ ಎಂಬಾತ. ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಹೋರಬಂದಿತ್ತೊಂದು ಪಾಗಲ್ ಪ್ರೇಮ ಕಥೆ.

Chitradurga
ಪಾಗಲ್ ಪ್ರೇಮಿ ಅಕ್ಷಯ್

ಕಳೆದ ಆರು ತಿಂಗಳ ಕೆಳಗೆ ನವೀನನ ಪತ್ನಿ ಯಾರಿಗೋ ಕರೆ ಮಾಡಲು ಹೋಗಿ ನಂಬರ್ ಮಿಸ್ ಆಗಿ ಅಕ್ಷಯ್ ಎಂಬುವವರಿಗೆ ಮಿಸ್ ಕಾಲ್ ಹೋಗಿತ್ತು, ಆದ್ರೆ ಮಿಸ್ ಕಾಲ್ ಕೊಟ್ಟಿರೋಳು ಹೆಣ್ಣು ಎಂಬುದನ್ನ ಅರಿತ ಅಕ್ಷಯ್ ಆಕೆಗೆ ಪ್ರತಿನಿತ್ಯ ಕಾಲ್, ಮೆಸೇಜ್ ಮಾಡೋ ಮೂಲಕ ಆಕೆಯ ಗೆಳೆತನ ಮಾಡಿದ್ದಾನೆ. ಒಳ್ಳೆಯ ವ್ಯಕ್ತಿ ಅಂದ್ಕೊಂಡ ನವೀನನ ಪತ್ನಿ ಮಿಸ್ ಕಾಲ್ ಗೆಳೆಯನನ್ನ ತನ್ನ ಗಂಡನಿಗೂ ಪರಿಚಯ ಮಾಡಿಸಿದ್ದಾಳೆ.

ಪೋನ್ ಗೆಳತಿ ಮೇಲೆ ಆಕರ್ಷಿತನಾದ ಅಕ್ಷಯ್ ಆಕೆಯ ಬಳಿ ಪ್ರೇಮಿಸುವಂತೆ ಪೀಡಿಸಿದ್ದಾನಂತೆ. ನಿರಾಕರಿಸಿ ಗಂಡನಿಗೆ ಹೇಳಿದ್ದಾಳೆ. ಹೀಗಾಗಿ ನವೀನ್, ಇನ್ನುಮುಂದೆ ನನ್ನ ಹೆಂಡತಿಗೆ ಕಾಲ್ ಮಾಡಬೇಡ ಅಂತ ಅಕ್ಷಯ್ ಗೆ ವಾರ್ನ್ ಮಾಡಿದ್ದಾನೆ. ಇದನ್ನೆ ಮನಸ್ಸಿನಲ್ಲಿಟ್ಟುಕೊಂಡ ಪಾಗಲ್ ಪ್ರೇಮಿ, ತನ್ನ ಗೆಳೆಯರ ಜೊತೆ ಸೇರಿ ನವೀನನ್ನ ಬರ್ಭರವಾಗಿ ಕೊಲೆ ಮಾಡಿರೋದಾಗಿ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

Chitradurga
ಆರೋಪಿಗಳು

ಮಿಸ್ ಕಾಲ್ ಕೊಟ್ಟವಳ ಮೇಲಿನ ಮೋಹಕ್ಕೆ, ಪಾಗಲ್ ಪ್ರೇಮಿ ಹಾಗೂ ಕೊಲೆ ಮಾಡಲು ಸಹಕರಿಸಿದ್ದ ಕಿರಣ್ ಮತ್ತು ಕೃಷ್ಣ ಎಂಬುವವರುಈಗಾಗಲೇ ಜೈಲು ಸೇರಿದ್ರೆ, ಸುಖವಾಗಿ ಸಂಸಾರ ಮಾಡಿಕೊಂಡಿದ್ದ ನವೀನ್ ಹೆಂಡತಿಯ ಕೈತಪ್ಪಿನಿಂದಾದ ಮಿಸ್ ಕಾಲ್ ಗೆಳೆತನ, ಗಂಡನನ್ನೆ ಬಲಿ ಪಡೆದಿದೆ. ಸದ್ಯ ಪೊಲೀಸರು ಪರಾರಿಯಾಗಿರುವ ಇನ್ನುಳಿದ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Intro:ಮಿಸ್ಡ್ ಕಾಲ್ ಮರ್ಡರ್ ಮಿಸ್ಟ್ರೀ ಭೇಧಿಸಿದ ಕೋಟೆನಾಡಿನ ಪೋಲಿಸರು…
ಚಿತ್ರದುರ್ಗ:- ಅವರಿಬ್ಬರು ಒಬ್ಬೊರಬ್ಬರು ಮನಸಾರೇ ಪ್ರೀತಿಸಿ ಮದುವೆಯಾಗಿದ್ದರು. ಅ ಪ್ರೀಯತಮೆಯ ಕೈತಪ್ಪಿನಿಂದಾಗಿ ಮಾಡಿದ ಮಿಸ್ ಕಾಲ್ ಒಬ್ಬನ ಗೆಳೆಯನನ್ನು ಹುಟ್ಟುಹಾಕಿತ್ತು. ಆದ್ರೆ ಒಲ್ಲದ ನಾರಿಯ ಹಿಂದೆ ಬಿದ್ದ ಅ ಸ್ನೇಹಿತ ಆಕೆಯ ಗಂಡನನ್ನ ಬಲಿಪಡೆದು ಕಂಬಿ ಎಣಿಸುತ್ತಿದ್ದಾನೆ.
ಹೀಗೆ ಗಡ್ಡ ಬಿಟ್ಟು ಫೋಸ್ ಕೊಡ್ತಿರೋ ಈತನ ಹೆಸರು ಎಸ್.ಕೆ.ನವೀನ್, 26ರ ಹರಯದ ಈತ ಕೋಟೆನಗರಿ ಚಿತ್ರದುರ್ಗದ ಚಿಕ್ಕಪೇಟೆಯಲ್ಲಿ ತನ್ನ ಮಡದಿಯ ಜೊತೆ ವಾಸವಾಗಿದ್ದವನು ಕಳೆದ ವಾರ 22ರ ಬೆಳಗ್ಗೆ ಜೈಲು ರಸ್ತೆಯಲ್ಲಿರೋ ಬಿಎಸ್ ಗೌಡ ಲೇಔಟ್ ನ ಕಸದ ರಾಶಿಯ ಮಧ್ಯೆ ಹೆಣವಾಗಿದ್ದ, ಗುರುತು ಸಿಗದ ರೀತಿಯಲ್ಲಿ ಬರ್ಭರವಾಗಿ ಹತ್ಯೆಯಾಗಿದ್ದ ನವೀನ್ ನ ಮೃತದೇಹವನ್ನ ಖಾಸಗಿ ವಾಹಿನಿಯ ಕ್ಯಾಮರಾ ಮ್ಯಾನ್ ಮಂಜುನಾಥ್ ಚಹರೆ ಗುರುತು ಹಿಡಿದಿದ್ದು. ಆ ನಂತರವಷ್ಟೇ ಇದು ಹೇರ್ ಕಟಿಂಗ್ ಸೆಲ್ಯೂನ್ ನಲ್ಲಿ ಕೆಲಸ ಮಾಡ್ತಿರೋ ನವೀನ್ ಎಂಬಾತನ ದೇಹ ಎಂಬುದು ಪೊಲೀಸರಿಗೆ ಕನ್ಪರ್ಮ್ ಆಗಿತ್ತು, ಆದ್ರೆ ಈತನನ್ನ ಆ ಮಟ್ಟಕ್ಕೆ ಭೀಕರವಾಗಿ ಕೊಲೆ ಮಾಡಿದವರು ಯಾರು ಎಂಬುದನ್ನ ಪತ್ತೆ ಮಾಡೋಕೆ ಬಡಾವಣೆ ಪೊಲೀಸರು ಮುಂದಾದ್ರು. ಆ ನಂತರ ಮೃತ ಸಂಬಂಧೀಕರು ಮತ್ತು ಸ್ನೇಹಿತರು ಸ್ಥಳಕ್ಕೆ ಬಂದು ನವೀನನ ಸ್ಥಿತಿ ನೋಡಿ ಅವರ ಅಕ್ರಂದನ ಮುಗಿಲು ಮುಟ್ಟಿತು.
ಇನ್ನೂ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಮೊದಲಿಗೆ ಕೊಲೆಯ ಸುಳಿವು ನೀಡಿದ್ದು ನವೀನ್ ಬಳಸುತ್ತಿದ್ದ ಮೊಬೈಲ್, ಕೊನೆಯ ಸಲ ನವೀನನಿಗೆ ಬಂದಿದ್ದ ಕರೆಯನ್ನಾಧರಿಸಿ ಕಾರ್ಯಾಚರಣೆಗಿಳಿದಿದ್ದಾರೆ. ನಂತರ ಮೊಟ್ಟ ಮೊದಲಿಗೆ ಪೊಲೀಸರು ಚಳ್ಳಕೆರೆ ಮೂಲದ ಟ್ಯಾಕ್ಸಿ ಚಾಲಕ ಅಕ್ಷಯ್ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತನ ಪಾಗಲ್ ಪ್ರೇಮದ ಕಥೆ ತಿಳಿದು ಬಂದಿದೆ. ಕಳೆದ ಆರು ತಿಂಗಳ ಕೆಳಗೆ ನವೀನನ ಪತ್ನಿ ಯಾರಿಗೋ ಕರೆ ಮಾಡಲು ಹೋಗಿ ಆಕೆಯ ಕೈತಪ್ಪಿನಿಂದ ನಂಬರ್ ಮಿಸ್ ಆಗಿ ಅಕ್ಷಯ್ ಗೆ ಮಿಸ್ ಕಾಲ್ ಹೋಗಿಬಿಟ್ಟಿರತ್ತೆ, ಆದ್ರೆ ಮಿಸ್ ಕಾಲ್ ಕೊಟ್ಟಿರೋಳು ಹೆಣ್ಣು ಎಂಬುದನ್ನ ಅರಿತ ಅಕ್ಷಯ್ ನಯ ನಾಜೂಕಿನಿಂದ ಆಕೆಗೆ ಪ್ರತಿನಿತ್ಯ ಕಾಲ್, ಮೆಸೇಜ್ ಮಾಡೋ ಮೂಲಕ ಆಕೆಯ ಗೆಳೆತನ ಮಾಡಿದ್ದಾನೆ. ಒಳ್ಳೆಯ ವ್ಯಕ್ತಿ ಅಂದ್ಕೊಂಡ ನವೀನನ ಪತ್ನಿ ಮಿಸ್ ಕಾಲ್ ಗೆಳೆಯನನ್ನ ತನ್ನ ಗಂಡನಿಗೂ ಪರಿಚಯ ಮಾಡಿಸಿರ್ತಾಳೆ. ನವೀನನ ಹೆಂಡತಿ ಮೇಲೆ ಆಕರ್ಷಿತನಾದ ಅಕ್ಷಯ್ ಆಕೆಯ ಬಳಿ ಪ್ರೇಮಿಸುವಂತೆ ಪೀಡಿಸಿದ್ದಾನೆ. ಆದ್ರೆ ಇದನ್ನ ನಿರಾಕರಿಸಿದ ನವೀನನ ಪತ್ನಿ ಮಿಸ್ ಕಾಲ್ ಗೆಳೆಯನ ವರ್ತನೆ ವಗ್ಗೆ ದೂರು ಹೇಳ್ತಾರೆ. ಹೀಗಾಗಿ ಅಕ್ಷಯ್ ಬಳಿ ಮಾತನಾಡಿದ ನವೀನ್, ಇನ್ನುಮುಂದೆ ನನ್ನ ಹೆಂಡತಿಗೆ ಕಾಲ್ ಮಾಡಬೇಡ ಅಂತ ವಾರ್ನ್ ಮಾಡಿರ್ತಾನೆ. ಇದನ್ನೆ ಮನಸ್ಸಿನಲ್ಲಿಟ್ಟುಕೊಂಡು ಅಕ್ಷಯ್ ತನ್ನ ಗೆಳೆಯರ ಜೊತೆ ಸೇರಿ ನವೀನನ್ನ ಬರ್ಭರವಾಗಿ ಕೊಲೆ ಮಾಡಿರೋದಾಗಿ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಒಟ್ಟಾರೆ ಮಿಸ್ ಕಾಲ್ ಕೊಟ್ಟವಳ ಮೇಲಿನ ಮೋಹಕ್ಕೆ ಒಲ್ಲದ ಹೆಣ್ಣಿನ ಹಿಂದೆ ಬಿದ್ದ ಪಾಗಲ್ ಪ್ರೇಮಿ ಹಾಗೂ ಕೊಲೆ ಮಾಡಲು ಸಹಕರಿಸಿದ್ದ ಕಿರಣ್ ಮತ್ತು ಕೃಷ್ಣ ಈಗಾಗಲೇ ಜೈಲು ಸೇರಿದ್ರೆ, ಸುಖವಾಗಿ ಸಂಸಾರ ಮಾಡಿಕೊಂಡಿದ್ದ ನವೀನ್ ಹೆಂಡತಿಯ ಕೈತಪ್ಪಿನಿಂದಾದ ಮಿಸ್ ಕಾಲ್ ಗೆಳೆತನಕ್ಕೆ ಬಲಿಯಾಗಿದ್ದು, ಪರಾರಿಯಾಗಿರುವ ಇನ್ನುಳಿದ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ

Body:murderConclusion:pkg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.