ETV Bharat / state

ಚಿತ್ರದುರ್ಗದ ಮಾಜಿ‌ ಸಂಸದ ಬಿ.ಎನ್.ಚಂದ್ರಪ್ಪಗೆ ಕೊರೊನಾ ಪಾಸಿಟಿವ್

ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್​.ಚಂದ್ರಪ್ಪ ಕಳೆದೊಂದು ತಿಂಗಳಿಂದ ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಪರ ಬಿರುಸಿನ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ಇದೀಗ ಕೊರೊನಾ ಪಾಸಿಟಿವ್​ ಇರುವುದಾಗಿ ವರದಿಯಾಗಿದೆ.

author img

By

Published : Nov 5, 2020, 5:28 PM IST

Chandrappa
ಬಿ.ಎನ್.ಚಂದ್ರಪ್ಪ

ಚಿತ್ರದುರ್ಗ: ಶಿರಾ ಉಪಚುನಾವಣೆಯಲ್ಲಿ ನಿರಂತವಾಗಿ ಪಾಲ್ಗೊಂಡು ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಪ್ರಚಾರದಲ್ಲಿ ಭಾಗಿಯಾಗಿದ್ದ ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.‌

ಈಗಾಗಲೇ ಶಿರಾದಲ್ಲಿ 50 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದ್ದು, ಸಾಕಷ್ಟು ಜನರ ವರದಿ ಪಾಸಿಟಿವ್ ಎಂದು ಬರತೊಡಗಿದೆ‌. ಕಳೆದ ಒಂದು ತಿಂಗಳಿಂದ ಸತತವಾಗಿ ಮಾಜಿ ಸಂಸದ ಚಂದ್ರಪ್ಪ ಕೂಡ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದು, ಇದೀಗ ಕೊರೊನಾ ಪಾಸಿಟಿವ್ ಎಂಬ ವರದಿ ಬಂದಿದೆ.

ಸೋಂಕು ದೃಢಪಟ್ಟ ಬಳಿಕ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಚಂದ್ರಪ್ಪ, ಪ್ರಸ್ತುತವಾಗಿ ಆರೋಗ್ಯ ಸ್ಥಿರವಾಗಿದೆ, ಜನತೆಯ ಶುಭಹಾರೈಕೆಯಿಂದ ಶೀಘ್ರವೇ ಗುಣಮುಖನಾಗಿ ಬರುತ್ತೇನೆ. ನನ್ನ ಸಂಪರ್ಕಕ್ಕೆ ಬಂದಿರುವವರು ತಕ್ಷಣ ಕೋವಿಡ್ ಪರೀಕ್ಷೆಗೆ ಒಳಗಾಗಬೇಕೆಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.