ETV Bharat / state

ಚಿತ್ರದುರ್ಗ ಸೇಫ್: ಜಿಲ್ಲೆಯಲ್ಲಿ ಕಂಡು ಬಂದಿಲ್ಲ ಕೊರೊನಾ ಪಾಸಿಟಿವ್

author img

By

Published : Apr 12, 2020, 7:47 AM IST

ಚಿತ್ರದುರ್ಗದಲ್ಲಿ ಇಲ್ಲಿಯವರೆಗೆ ಯಾವುದೇ ಕೊರೊನಾ ಸೋಂಕಿತರು ಕಂಡುಬಂದಿಲ್ಲ.

Chitradurga Safe
ಕಂಡು ಬಂದಿಲ್ಲ ಕೊರೊನಾ ಪಾಸಿಟಿವ್ ಪ್ರಕರಣ

ಚಿತ್ರದುರ್ಗ: ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಕೊರೊನಾ ಸೋಂಕಿತರು ಕಂಡುಬಂದಿಲ್ಲ, ಇಲ್ಲಿಯವರೆಗೆ ವಿದೇಶಗಳಿಂದ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಜಿಲ್ಲೆಗೆ ವಾಪಸಾಗಿದ್ದ 331 ಜನರ ಬಗ್ಗೆ ನಿಗಾವಹಿಸಲಾಗಿತ್ತು, ಅವರಲ್ಲಿ 277 ಜನರು 14ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದು, 147 ಜನರು 28ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿ ಸುರಕ್ಷಿತರಾಗಿದ್ದಾರೆ.

ಜಿಲ್ಲೆಯ ವಿಳಾಸದ ಪಾಸ್ ಪೋರ್ಟ್ ಹೊಂದಿದ್ದರೂ ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದ 21 ಜನರನ್ನು ಅವರ ನಿವಾಸದ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದ್ದು, 03 ಜನ ಶಂಕಿತರು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್​ನಲ್ಲಿ ನಿಗಾದಲ್ಲಿದ್ದಾರೆ. ಇನ್ನುಳಿದಂತೆ 29 ಮಂದಿ ಹೋಂ ಕ್ವಾರಂಟೈನ್​​ನಲ್ಲಿದ್ದು, 28 ಜನರನ್ನು ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ.

full details
ಚಿತ್ರದುರ್ಗ

ಇನ್ನು 81 ಜನರಿಗೆ ವಾರದಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ಕೊರೊನಾ ತಪಾಸಣೆ ಮಾಡಲಾಗುತ್ತಿದ್ದು, 270 ಜನರ ಕೌನ್ಸೆಲಿಂಗ್ ಪೂರ್ಣಗೊಂಡಿದೆ. ಇಂದು ಕೂಡ ಹೊಸದಾಗಿ 16 ಮಂದಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ಒಟ್ಟು 205 ಜನರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ 174 ಜನರ ವರದಿ ನೆಗೆಟಿವ್ ಬಂದಿದ್ದು, 12ಜನರ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿಲ್ಲ.

ಇನ್ನುಳಿದ 16 ಜನರ ಪ್ರಯೋಗಾಲಯದ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಜ್ವರ ತಪಾಸಣ ಕೇಂದ್ರದಲ್ಲಿ ಇಂದು 346 ಜನರ ಜ್ವರದ ತಪಾಸಣೆ ನಡೆಸಲಾಗಿದ್ದು, ಒಟ್ಟಾರೆ 5232 ಜನರನ್ನು ಸಾಮಾನ್ಯ ಜ್ವರದ ತಪಾಸಣೆಗೆ ಒಳಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.