ETV Bharat / technology

ಮಕ್ಕಳೆದುರು ಕುಳಿತು ಜೋರಾಗಿ ಪುಸ್ತಕ ಓದಿ: ಪೋಷಕರಿಗೆ ಸಂಶೋಧಕರ ಸಲಹೆ - Read Aloud With Young Kids - READ ALOUD WITH YOUNG KIDS

Read Aloud With Newborns: ಮಕ್ಕಳೊಂದಿಗೆ ಸಮಯ ಕಳೆಯುವುದು ಪೋಷಕರು ಒಳ್ಳೆಯ ಅನುಭವವೇ. ಆದರೆ ಈ ಸಮಯದಲ್ಲಿ ಪೋಷಕರು ಪುಸ್ತಕ ಓದುವುದರಿಂದ ಮಕ್ಕಳೂ ಸಹ ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಇದರಿಂದ ಮುಂದೆ ಅವರ ಜೀವನದಲ್ಲಿ ಉತ್ತಮ ಬದಲಾವಣೆಗಳಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

YOUNG KIDS FOR LIFELONG BENEFITS  RESEARCHERS  PARENTS AND CAREGIVERS  BOOK READS BENEFITS
ಸಾಂದರ್ಭಿಕ ಚಿತ್ರ (IANS)
author img

By ETV Bharat Tech Team

Published : Sep 30, 2024, 10:50 AM IST

Read Aloud With Newborns: ಮಕ್ಕಳ ಜೀವನದ ಆರಂಭಿಕ ವರ್ಷಗಳಲ್ಲಿ ಪೋಷಕರು ಪುಸ್ತಕಗಳನ್ನು ಹಿಡಿದು ಚಿಕ್ಕ ಮಕ್ಕಳೊಂದಿಗೆ ಗಟ್ಟಿಯಾಗಿ ಓದಬೇಕು. ಇದು ಮಕ್ಕಳ ಬದುಕಿನ ಮೇಲೆ ಒಳ್ಳೆಯ ಪರಿಣಾಮಗಳನ್ನು ಬೀರುತ್ತದೆ ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಮಗುವಿನ ಜನನದ ಮೊದಲ ವರ್ಷಗಳು ಪೋಷಕರಿಗೆ ಬಹಳ ಮುಖ್ಯ. ಈ ಸಮಯದಲ್ಲಿ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ. ಏಕೆಂದರೆ ಇದು ಮಕ್ಕಳ ಮೆದುಳು ಬೆಳೆಯುವ ಸಮಯ ಎಂದು ತಿಳಿಸಿದ್ದಾರೆ.

ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ವೈದ್ಯರು, ಮಕ್ಕಳ ಜನನ ಕಾಲದಿಂದಲೇ ಪೋಷಕರು ಓದುವುದನ್ನು ಪ್ರಾರಂಭಿಸಿ ಎಂದು ಸಲಹೆ ಮಾಡಿದ್ದಾರೆ. ಸಂಶೋಧನೆಯ ಪ್ರಮುಖ ಲೇಖಕ ಪೆರ್ರಿ ಕ್ಲಾಸ್, ಚಿಕ್ಕ ಮಕ್ಕಳೊಂದಿಗೆ ಓದುವುದು ಸಂತೋಷದಾಯಕ. ಭಾಷೆ ಮತ್ತು ಸಂಭಾಷಣೆಯ ಕ್ಷಣಗಳು ದೈನಂದಿನ ಜೀವನವನ್ನು ಬಲಪಡಿಸುತ್ತವೆ. ಇದು ನಿಮ್ಮ ನಡುವೆ ಒಳ್ಳೆಯ ಬಂಧಗಳನ್ನು ಬೆಸೆಯುತ್ತದೆ. ಮಕ್ಕಳ ಮೆದುಳಿನ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಸಂಶೋಧನೆಯ ಸಹ ಲೇಖಕ ಮತ್ತು ಕೌನ್ಸಿಲ್ ಆನ್ ಅರ್ಲಿ ಚೈಲ್ಡ್‌ಹುಡ್‌ನ ಅಧ್ಯಕ್ಷ ದೀಪೇಶ್ ನವಸಾರಿಯಾ ಅವರ ಪ್ರಕಾರ, ವರ್ಣರಂಜಿತ ಚಿತ್ರಗಳು ಮತ್ತು ಶ್ರೀಮಂತ ಭಾಷೆಯಿಂದ ಕೂಡಿದ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಓದುವುದರಿಂದ ಮಕ್ಕಳಲ್ಲಿ ಆರೋಗ್ಯದಾಯಕ ಬೆಳವಣಿಗೆ ರೂಪುಗೊಳ್ಳುತ್ತದೆ. ಟಚ್‌ಸ್ಕ್ರೀನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳು ಜನಪ್ರಿಯವಾಗಿರಬಹುದು. ಆದರೆ ಅವು ಮಕ್ಕಳನ್ನು ಪ್ರತ್ಯೇಕಿಸುತ್ತವೆ. ಆ ಸಾಧನಗಳು ಸಂಬಂಧ ಬಲಪಡಿಸುವ ಪ್ರಯೋಜನಗಳನ್ನು ಒದಗಿಸುವುದಿಲ್ಲ.

ಪೋಷಕರಷ್ಟೇ ಅಲ್ಲದೇ, ಯಾರೇ ಆಗಲಿ ಮಲಗುವ ಸಮಯದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಲು ನಾನು ಸಲಹೆ ನೀಡುತ್ತೇನೆ. ಬಿಡುವಿದ್ದಾಗ ಪುಸ್ತಕಗಳನ್ನು ಚಿಕ್ಕ ಮಕ್ಕಳೊಂದಿಗೆ ಓದುವುದರಿಂದ ಅವರ ಜೀವನವನ್ನು ಉತ್ತಮವಾಗಿ ನಿರ್ಮಿಸಲು ಸಹಾಯವಾಗುತ್ತದೆ. ಇದು ನಿಮ್ಮಬ್ಬರ ಮಧ್ಯೆ ಅವಿನಾಭಾವ ಸಂಬಂಧ ಬೆಳೆಯಲು ಕಾರಣವಾಗುತ್ತದೆ ಎಂದು ಕ್ಲಾಸ್ ಪೀಡಿಯಾಟ್ರಿಕ್ಸ್ ಆನ್‌ಲೈನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಪರಸ್ಪರ ಓದುವ ಚಟುವಟಿಕೆಗಳೊಂದಿಗೆ ಪೋಷಕರು ಮಕ್ಕಳೊಂದಿಗೆ ಚರ್ಚಿಸುತ್ತಾ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬೇಕು. ಪರಸ್ಪರ ಸ್ಪಂದಿಸುವ, ಸಕಾರಾತ್ಮಕ ಅನುಭವಗಳನ್ನು ಪ್ರೇರೇಪಿಸಲು ಪುಸ್ತಕಗಳು, ಚಿತ್ರಗಳು ಮತ್ತು ಮಾದರಿ ತಂತ್ರಗಳೊಂದಿಗೆ ಅರ್ಥಪೂರ್ಣ, ಭಾಷಾ-ಸಮೃದ್ಧ ಬಾಂಧವ್ಯವನ್ನು ಪ್ರೋತ್ಸಾಹಿಸಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್‌ ಬಸ್‌ ಅನಾವರಣ; ಆಯ್ದ ಮಕ್ಕಳಿಗೆ ನಾಸಾ ಭೇಟಿಯ ಅವಕಾಶ - Science Bus unveiled

ETV Bharat Logo

Copyright © 2024 Ushodaya Enterprises Pvt. Ltd., All Rights Reserved.