ETV Bharat / state

ಬಿಜೆಪಿ ಅತೃಪ್ತರ ಸಭೆ: 'ಹೊಸದೇನಲ್ಲ, ಸವಾಲು ನೋಡಿ ಬೆಳೆದಿದ್ದೇನೆ'- ವಿಜಯೇಂದ್ರ - B Y Vijayendra - B Y VIJAYENDRA

ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಗೆ ನಡೆಸಿರುವ ಪ್ರತ್ಯೇಕ ಸಭೆಯ ಕುರಿತು ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (ETV Bharat)
author img

By ETV Bharat Karnataka Team

Published : Sep 30, 2024, 9:54 AM IST

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಗಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತ್ಯೇಕ ಸಭೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, "ಈ ಸಭೆ ಹೊಸದೇನಲ್ಲ. ನಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಎದುರಿಸಿದ ಅನೇಕ ಸವಾಲು ನೋಡಿ ಬೆಳೆದಿದ್ದೇನೆ. ಎಲ್ಲ ಸವಾಲುಗಳನ್ನೂ ಯಶಸ್ವಿಯಾಗಿ ಎದುರಿಸುತ್ತೇನೆ. ಜೀವನದಲ್ಲಿ ಸಮಸ್ಯೆ ಇದ್ದಾಗ ವಿಶ್ವಾಸ ಹೆಚ್ಚಾಗುತ್ತದೆ. ಸಮಸ್ಯೆಗೆ ಓಡಿ ಹೋಗುವುದಿಲ್ಲ. ಬಿಜೆಪಿಯನ್ನು ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರುತ್ತೇನೆ" ಎಂದರು.

ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ (ETV Bharat)

ಭಾನುವಾರ ನೆಲಮಂಗಲ ತಾಲೂಕಿನ ಸೊಂಪುರ ಸಮೀಪದ ಸಮಾಧಾನ ಮಠದ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯೇಂದ್ರ ಮಾಧ್ಯಮದೊಂದಿಗೆ ಮಾತನಾಡಿದರು. ಈ ವೇಳೆ, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಮೇಲೆ ಎಫ್.ಎ.ಆರ್​ ಕುರಿತು ಪ್ರತಿಕ್ರಿಯಿಸಿ,
"ರಾಜ್ಯ ಸರಕಾರ ತರಾತುರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ಮೇಲೆ ಎಫ್.ಎ.ಆರ್ ದಾಖಲಿಸಿದೆ. ಚುನಾವಣಾ ಬಾಂಡ್ ಬಗ್ಗೆ ಕೆಳ ನ್ಯಾಯಾಲಯ ಆದೇಶ ಮಾಡಿದೆ. ರಾಜ್ಯ ಸರಕಾರ ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ" ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ಹಗರಣಗಳಿಗೆ ಸಂಬಂಧಿಸಿದಂತೆ ಎರಡನೇ ಪಾದಯಾತ್ರೆ ಕುರಿತು ಮಾತನಾಡಿದ ಅವರು, "ಮೈಸೂರಿಗೆ ಎರಡನೇ ಪಾದಯಾತ್ರೆ ಬಗ್ಗೆ ಚರ್ಚೆಯಾಗಿಲ್ಲ. ಮೊದಲನೇ ಪಾದಯಾತ್ರೆ ಯಶಸ್ವಿಯಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣಗಳಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅನಿವಾರ್ಯತೆ ಬಂದಾಗಿದೆ. ಮುಡಾ ಹಗರಣದಿಂದ ಮುಖ್ಯಮಂತ್ರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಎರಡು ಹಗರಣಗಳು ಸಿ.ಬಿ.ಐ.ಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್​ ವರಿಷ್ಠ ಮಲ್ಲಿಕಾರ್ಜುನ ಖರ್ಗೆಯವರೇ ಈ ಹಗರಣದ ಬಗ್ಗೆ ಮಾತಾಡಿದ್ದಾರೆ. ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಅನಿವಾರ್ಯ" ಎಂದರು.

ಇದನ್ನೂ ಓದಿ: ಒಂದೆರಡು ತಿಂಗಳು ರಾಜಕೀಯವಾಗಿ ತೊಂದರೆ ಕೊಡಬಹುದು, ಇದಕ್ಕೆಲ್ಲಾ ಹೆದರಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah

ETV Bharat Logo

Copyright © 2025 Ushodaya Enterprises Pvt. Ltd., All Rights Reserved.