PM E-Drive scheme: ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಉತ್ತೇಜಿಸುವ ಪ್ರಮುಖ ಉಪಕ್ರಮವಾಗಿ 10,900 ಕೋಟಿ ರೂ ($1.3 ಬಿಲಿಯನ್) ಪ್ರೋತ್ಸಾಹಕ (ಪಿಎಂ ಇ-ಡ್ರೈವ್) ಯೋಜನೆ ಪ್ರಾರಂಭಿಸಿದೆ. ಮಾಲಿನ್ಯ ಕಡಿಮೆ ಮಾಡಲು ಮತ್ತು ಶುದ್ಧ ಇಂಧನ ಪರಿವರ್ತನೆಯತ್ತ ಸಾಗುವ ಉದ್ದೇಶಕ್ಕಾಗಿ ನಡೆಯುತ್ತಿರುವ ದೇಶದ ಪ್ರಯತ್ನಗಳಿಗೆ ಈ ಕ್ರಮ ಪ್ರಮುಖ ಕೊಡುಗೆಯಾಗಿದೆ ಎಂದು ಸರ್ಕಾರ ಹೇಳಿದೆ. ಇದರಿಂದ ಯಾರಿಗೆ ಲಾಭ?, ಯಾವ ವಾಹನಗಳಿಗೆ ಪ್ರೋತ್ಸಾಹಕ ಯೋಜನೆ ಅನ್ವಯಿಸುತ್ತದೆ?.
1. PM ಇ-ಡ್ರೈವ್ ಯೋಜನೆ ಎಂದರೇನು?:
- ಈ ಯೋಜನೆಯನ್ನು ಪ್ರಧಾನ ಮಂತ್ರಿ ಇ-ಡ್ರೈವ್ ಮಾಡರ್ನ್ ವೆಹಿಕಲ್ ಡೆವಲಪ್ಮೆಂಟ್ ಪ್ರಾಜೆಕ್ಟ್ (PM E-DRIVE) ಎಂದು ಕರೆಯಲಾಗುತ್ತದೆ.
- ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಪ್ರೋತ್ಸಾಹ ಮತ್ತು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶ.
2. ವಿವಿಧ ರೀತಿಯ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ:
- ವಿವಿಧ ಎಲೆಕ್ಟ್ರಿಕ್ ವಾಹನಗಳಿಗೆ 3,679 ಕೋಟಿ ಕೂ ($36.79 ಬಿಲಿಯನ್) ಸಬ್ಸಿಡಿ ಒದಗಿಸುತ್ತದೆ.
- ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು
- ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು
- ಎಲೆಕ್ಟ್ರಿಕ್ ಆಂಬ್ಯುಲೆನ್ಸ್
- ಎಲೆಕ್ಟ್ರಿಕ್ ಭಾರಿ ವಾಹನಗಳು
ವಿದ್ಯುತ್ ತುರ್ತು ವಾಹನಗಳಿಗೆ ಮಾತ್ರ ಸುಮಾರು 500 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಅದೇ ರೀತಿ ಹಳೆಯ ಭಾರಿ ವಾಹನಗಳನ್ನು (ಲಾರಿ) ಸ್ಕ್ರಾಪಿಂಗ್ ಮಾಡಲು 500 ಕೋಟಿ ರೂ. ಮೀಸಲಿಡಲಾಗಿದೆ.
3. ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳು: ಜನರು ಬಳಸುವ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳನ್ನು ಸೇರಿಸಲು 4,391 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ. ಈ ಮೂಲಕ 14,028 ಹೊಸ ಎಲೆಕ್ಟ್ರಿಕ್ ಬಸ್‌ಗಳು ಭಾರತೀಯ ರಸ್ತೆಗಳಿಗಿಳಿಯಲಿವೆ.
4. ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸಲು ಕೊಡುಗೆ: ಪ್ರಸ್ತುತ ಮಾರಾಟವಾಗುವ 4.2 ಲಕ್ಷ ವಾಹನಗಳಲ್ಲಿ ಶೇ 2ರಷ್ಟಕ್ಕಿಂತ ಕಡಿಮೆ ಎಲೆಕ್ಟ್ರಿಕ್ ವಾಹನಗಳ ಕೊಡುಗೆ ಇದೆ ಎಂದು ಸರ್ಕಾರ ಮಾಹಿತಿ ನೀಡಿದೆ. 2030ರ ವೇಳೆಗೆ ಇದನ್ನು ಶೇ.30ಕ್ಕೆ ಹೆಚ್ಚಿಸುವುದು ಸರ್ಕಾರದ ಗುರಿ. ಇದನ್ನು ಸಾಧ್ಯವಾಗಿಸಲು ಹೊಸ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನಗಳನ್ನು ಉತ್ತೇಜಿಸಲು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳು (ಇವಿ ಚಾರ್ಜಿಂಗ್ ಸ್ಟೇಷನ್‌ಗಳು) ಮತ್ತು ರಚನೆಗಳನ್ನು ನಿರ್ಮಿಸಲು ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
5. ವಾಹನ ತ್ಯಾಜ್ಯ ನಿರ್ವಹಣೆ: ರಸ್ತೆಗಳಿಂದ ಮಾಲಿನ್ಯಕಾರಕ ವಾಹನಗಳನ್ನು ತೆಗೆದುಹಾಕಲು ಮತ್ತು ಹೊಸ ವಾಹನಗಳ ಮಾರಾಟವನ್ನು ಶೇ 18ರಿಂದ 20ರಷ್ಟು ಹೆಚ್ಚಿಸಲು ವಾಹನ ತ್ಯಾಜ್ಯ ಕೇಂದ್ರಗಳನ್ನು ಸ್ಥಾಪಿಸಲು ವಾಹನ ತಯಾರಕರನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರೋತ್ಸಾಹಿಸಿದ್ದಾರೆ. ಇದಕ್ಕೆ ಬೇಕಾದ ಅಗತ್ಯತೆಗಳನ್ನು ಸರ್ಕಾರ ಗುರುತಿಸಿ ಈಡೇರಿಸಲಿದೆ ಎಂದು ತಿಳಿಸಿದ್ದಾರೆ.
PM E-DRIVE ಯೋಜನೆಯು ಹಸಿರು ಇಂಧನ ಮತ್ತು ಸುಸ್ಥಿರ ಸಾರಿಗೆಗೆ ಭಾರತದ ಪರಿವರ್ತನೆಯಲ್ಲಿ ಪ್ರಮುಖ ಹೆಜ್ಜೆ. ಸಾರ್ವಜನಿಕ ಸಾರಿಗೆ ಮತ್ತು ಚಾರ್ಜಿಂಗ್ ಕೇಂದ್ರಗಳಿಗೆ ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯವನ್ನು ಸುಧಾರಿಸಲು ಪ್ರಸ್ತುತ ಘೋಷಿಸಲಾದ ಪ್ರೋತ್ಸಾಹಕಗಳು ಸರ್ಕಾರದ ಗಂಭೀರ ಪ್ರಯತ್ನವಾಗಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಿ ಅದರ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.