ETV Bharat / international

ಅಮೆರಿಕದಲ್ಲಿ ಹೆಲೆನ್​​ ಚಂಡಮಾರುತ ಅಬ್ಬರ; 93 ಸಾವು, 600 ಮಂದಿ ನಾಪತ್ತೆ - US Hurricane Helene

author img

By ANI

Published : 3 hours ago

ಫ್ಲೋರಿಡಾದಲ್ಲಿ ಹೆಲೆನ್​ ಚಂಡಮಾರುತದಿಂದಾಗಿ 93 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವವರ ನೆರವಿಗೆ ನಾನು ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತೇನೆ ಎಂದು ಅಧ್ಯಕ್ಷ ಜೋ ಬೈಡನ್​​ ತಿಳಿಸಿದ್ದಾರೆ.

ಹೆಲೆನ್​​ ಚಂಡಮಾರುತದ ಪರಿಣಾಮ
ಹೆಲೆನ್​​ ಚಂಡಮಾರುತದ ಪರಿಣಾಮ (ANI)

ಫ್ಲೋರಿಡಾ(ಅಮೆರಿಕ): ಅಮೆರಿಕದ ಆಗ್ನೇಯ ದಿಕ್ಕಿನಲ್ಲಿ ಹೆಲೆನ್​ ಚಂಡಮಾರುತದಿಂದಾಗಿ ಒಟ್ಟು 93 ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಹಲವು ಕುಟುಂಬಗಳು ಪ್ರವಾಹದಲ್ಲಿ ಸಿಲುಕಿವೆ ಎಂದು ವರದಿಯಾಗಿದೆ.

ದಕ್ಷಿಣ ಕೆರೊಲಿನಾ, ಜಾರ್ಜಿಯಾ, ಫ್ಲೋರಿಡಾ, ಉತ್ತರ ಕೆರೊಲಿನಾ, ವರ್ಜೀನಿಯಾ ಮತ್ತು ಟೆನ್ನೆಸ್ಸಿಯಲ್ಲಿ ಸಾವುಗಳು ಸಂಭವಿಸಿವೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಉತ್ತರ ಕೆರೊಲಿನಾದಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ. ಸಲೂಡಾ ಕೌಂಟಿಯ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ದಕ್ಷಿಣ ಕೆರೊಲಿನಾದಲ್ಲಿ ಕನಿಷ್ಠ 25 ಮಂದಿ ಅಸುನೀಗಿದ್ದಾರೆ.

ಜಾರ್ಜಿಯಾದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಅಲಾಮೊದಲ್ಲಿ ಸುಂಟರಗಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಬ್ರಿಯಾನ್ ಕೆಂಪ್ ಅವರ ವಕ್ತಾರರು ತಿಳಿಸಿದ್ದಾರೆ. ಉತ್ತರ ಕೆರೊಲಿನಾದ ಬಂಕೊಂಬ್ ಕೌಂಟಿಯು ಆನ್‌ಲೈನ್ ಫಾರ್ಮ್ ಮೂಲಕ ಸುಮಾರು 600 ಕಾಣೆಯಾದ ಜನರ ಮಾಹಿತಿ ಪಡೆದಿದೆ ಎಂದು ಕೌಂಟಿ ಮ್ಯಾನೇಜರ್ ಅವ್ರಿಲ್ ಪಿಂಡರ್ ಭಾನುವಾರ ಹೇಳಿದರು.

ಚಂಡಮಾರುತ ಪೀಡಿತ ಸಮುದಾಯಗಳಿಗೆ ಅಗತ್ಯ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಆಡಳಿತ ವ್ಯವಸ್ಥೆ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್​ ಭರವಸೆ ನೀಡಿದ್ದಾರೆ.

'ಎಕ್ಸ್'​​ ಪೋಸ್ಟ್​ನಲ್ಲಿ ಅವರು​, 'ಹೆಲೆನ್​ ಚಂಡಮಾರುತದಿಂದ ನಲುಗಿರುವ ಜನರ ರಕ್ಷಣೆ ಹಾಗೂ ಕಾರ್ಯಾಚರಣೆಯ ಪ್ರಯತ್ನಗಳ ಕುರಿತು ಮಾಹಿತಿ ನೀಡುತ್ತಿರುತ್ತೇನೆ. ನಿರಾಶ್ರಿತರಿಗೆ ಅಗತ್ಯವಿರುವ ಬೆಂಬಲ ಮತ್ತು ಸಂಪನ್ಮೂಲಗಳನ್ನು ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ನನ್ನ ಆಡಳಿತ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರು ಮತ್ತು ಮನೆಗಳನ್ನು ಕಳೆದುಕೊಂಡವರಿಗಾಗಿ ಜಿಲ್ (ಬೈಡನ್​ ಪತ್ನಿ) ಮತ್ತು ನಾನು ಪ್ರಾರ್ಥಿಸುತ್ತಿದ್ದೇವೆ' ಎಂದು ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: ಪ್ರವಾಹ, ಭೂಕುಸಿತಕ್ಕೆ ನೇಪಾಳ ತತ್ತರ: 100ರ ಗಡಿ ದಾಟಿದ ಸಾವಿನ ಸಂಖ್ಯೆ - Nepal Floods

ETV Bharat Logo

Copyright © 2024 Ushodaya Enterprises Pvt. Ltd., All Rights Reserved.