ETV Bharat / state

'ಇಂಡಿಯಾಸ್ ಫ್ಯೂಚರ್ ಟೈಕೂನ್ಸ್' ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕೋಟೆನಾಡಿನ ಮಕ್ಕಳು

ನಗರದ ವಿದ್ಯಾ ವಿಕಾಸ ಖಾಸಗಿ ಶಾಲೆಯ ವಿದ್ಯಾರ್ಥಿಗಳಾದ ಅಮೃತ್ ಜಿ.ವಿ, ಮಾನ್ಯಾ ಜೈನ್ ಹಾಗೂ ತೇಜಸ್.ಎಸ್ ಸೇರಿದಂತೆ ಮೂವರು ವಿದ್ಯಾರ್ಥಿಗಳ ತಂಡ ಮುಂಬೈನಲ್ಲಿ ನಡೆದ “ಇಂಡಿಯಾಸ್ ಫ್ಯೂಚರ್ ಟೈಕೂನ್ಸ್” ಎಂಬ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

indias-future-tycoons
indias-future-tycoons
author img

By

Published : Jan 30, 2020, 9:21 PM IST

ಚಿತ್ರದುರ್ಗ: ಮುಂಬೈನಲ್ಲಿ ನಡೆದ “ಇಂಡಿಯಾಸ್ ಫ್ಯೂಚರ್ ಟೈಕೂನ್ಸ್” ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿದ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಡಿಡಿಪಿಐ ರವಿಶಂಕರ್ ರೆಡ್ಡಿ ಸನ್ಮಾನಿಸಿದರು.

'ಇಂಡಿಯಾಸ್ ಫ್ಯೂಚರ್ ಟೈಕೂನ್ಸ್' ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದ ಕೋಟೆ ನಾಡಿನ ವಿದ್ಯಾರ್ಥಿಗಳು

ನಗರದ ವಿದ್ಯಾ ವಿಕಾಸ ಖಾಸಗಿ ಶಾಲೆಯ ವಿದ್ಯಾರ್ಥಿಗಳಾದ ಅಮೃತ್ ಜಿ.ವಿ, ಮಾನ್ಯಾ ಜೈನ್ ಹಾಗೂ ತೇಜಸ್. ಎಸ್ ಸೇರಿದಂತೆ ಮೂವರು ವಿದ್ಯಾರ್ಥಿಗಳ ತಂಡವು ಕಳೆದ ಡಿಸೆಂಬರ್ 15 ರಂದು ಬೆಂಗಳೂರಲ್ಲಿ ನಡೆದಿದ್ದ ವಲಯ ಮಟ್ಟದ “ಇಂಡಿಯಾಸ್ ಫ್ಯೂಚರ್ ಟೈಕೂನ್ಸ್” ಎಂಬ ವಿಜ್ಞಾನ ಸ್ಫರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ, ನಂತರ ಜ. 26 ರಿಂದ 28ರವರೆಗೆ ಮುಂಬೈನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತದ ವಿವಿಧ ರಾಜ್ಯಗಳ 130 ನಗರಗಳಿಂದ 7100ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

ಈ ಕುರಿತು ಡಿಡಿಪಿಐ ರವಿಶಂಕರ್ ರೆಡ್ಡಿ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ಮಾನವೀಯತೆಯ ಮೌಲ್ಯಗಳು ಕಾಣೆಯಾಗಿದ್ದು, ಬಾಂಧವ್ಯ ಮರೆಯಾಗಿದೆ. ಮಕ್ಕಳು ಏನನ್ನಾದರೂ ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಿದಲ್ಲಿ ಅದೇ ಹೆತ್ತವರಿಗೆ, ಗುರುಗಳಿಗೆ ನೀಡುವ ಗೌರವವಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.