ETV Bharat / state

ಕಾಂಗ್ರೆಸ್‌ನಲ್ಲಿ ನೆಹರೂ ಹಿಡಿದು ಸಿಂಗ್‌ವರೆಗೂ ಎಲ್ಲರೂ ಭ್ರಷ್ಟ ಪ್ರಧಾನಿಗಳು - ಕಟೀಲ್​​ - ಸಿದ್ದರಾಮಯ್ಯ ವಿರುದ್ಧ ನಳೀನ್​ ಕುಮಾರ್​ ಕಟೀಲ್​ ಆರೋಪ

ಅಧಿಕಾರ ಇಲ್ಲದಾಗ ಕಾಂಗ್ರೆಸ್ ಅರಾಜಕತೆ ಸೃಷ್ಟಿಗೆ ಯತ್ನಿಸುತ್ತದೆ. ಆದ್ರೆ, ಈಗ ಪ್ರಧಾನಿ ಆಗಿರುವುದು ಶಿವಾಜಿ ಶಕ್ತಿಯ ಮೋದಿ ಎಂದರು. ಪ್ರಧಾನಿ ಮೋದಿ ಸಮರ್ಪಕ ಉತ್ತರ ನೀಡುತ್ತಾರೆ ಅಂದ್ರು. ಇನ್ನು ರಾಜ್ಯದಲ್ಲಿ ಬಿಎಸ್​ವೈ ಸರ್ಕಾರ ರಾಜ್ಯವನ್ನು ಡ್ರಗ್ಸ್ ಮುಕ್ತಗೊಳಿಸಿದೆ..

bjp state president nalin kumar katil outrage against siddaramaiah
ಚಿತ್ರದುರ್ಗ
author img

By

Published : Jan 27, 2021, 7:14 PM IST

ಚಿತ್ರದುರ್ಗ:ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ವೀರಶೈವ ಲಿಂಗಾಯತ ಸಮಾಜ ಒಡೆಯುವ ನೀಚ ಕೆಲಸ ಮಾಡಿತು‌. ಇದಲ್ಲದೆ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್​ ಕಟೀಲ್​ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು‌.

ಚಿತ್ರದುರ್ಗ

ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಇಂದು ನಡೆದ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಪಕ್ಷದ ವಿರುದ್ಧ ವಾಕ್ ಪ್ರಹಾರ ನಡೆಸಿದ್ರು.

ದೇಶದಲ್ಲಿ ಕಾಂಗ್ರೆಸ್​ ಮುಕ್ತ ಆದರೆ, ಭ್ರಷ್ಟಾಚಾರ ಮುಕ್ತ ಭಾರತವಾಗಲಿದೆ. ಶಾಸ್ತ್ರಿ ಹೊರತು ಪಡಿಸಿ ಕಾಂಗ್ರೆಸ್​ ಪ್ರಧಾನಿಗಳೆಲ್ಲ ಭ್ರಷ್ಟರು ಎಂದು ಆರೋಪಿಸಿದ್ರು. ನೆಹರೂರವರಿಂದ ಮನಮೋಹನ್ ಸಿಂಗ್‌ವರೆಗೆ ಕಾಂಗ್ರೆಸ್ ಪಕ್ಷದ ಪ್ರಧಾನಿಗಳು ಭ್ರಷ್ಟಾಚಾರಿಗಳಿದ್ದರು.

ಅಧಿಕಾರ ಇಲ್ಲದಾಗ ಕಾಂಗ್ರೆಸ್ ಅರಾಜಕತೆ ಸೃಷ್ಟಿಗೆ ಯತ್ನಿಸುತ್ತದೆ. ಆದ್ರೆ, ಈಗ ಪ್ರಧಾನಿ ಆಗಿರುವುದು ಶಿವಾಜಿ ಶಕ್ತಿಯ ಮೋದಿ ಎಂದರು. ಪ್ರಧಾನಿ ಮೋದಿ ಸಮರ್ಪಕ ಉತ್ತರ ನೀಡುತ್ತಾರೆ ಅಂದ್ರು. ಇನ್ನು ರಾಜ್ಯದಲ್ಲಿ ಬಿಎಸ್​ವೈ ಸರ್ಕಾರ ರಾಜ್ಯವನ್ನು ಡ್ರಗ್ಸ್ ಮುಕ್ತಗೊಳಿಸಿದೆ. ಕಾಂಗ್ರೆಸ್ ಡ್ರಗ್ಸ್ ಮಾಫಿಯಾದಲ್ಲಿ ಬದುಕಿತ್ತು ಎಂದು ಆರೋಪಿಸಿದರು.

ಪ್ರಥಮ ಬಾರಿಗೆ ಚಿತ್ರದುರ್ಗ ನಗರದಲ್ಲಿ ಆಯೋಜಿಸಿದ ರಾಜ್ಯ ಯುವ ಮೋರ್ಚಾ ಜಿಜೆಪಿ ಕಾರ್ಯಕಾರಣಿ ಸಭೆಯಲ್ಲಿ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ, ಚಿತ್ರದುರ್ಗ ಶಾಸಕ ಜಿ‌.ಹೆಚ್ ತಿಪ್ಪಾರೆಡ್ಡಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಸಂಸದ ಎ. ನಾರಾಯಣಸ್ವಾಮಿ, ಸಂಸದ ಸಿದ್ದೇಶ್ವರ ಸೇರಿದಂತೆ ಜಿಲ್ಲೆಯ ಜಿಜೆಪಿ ನಾಯಕರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ 156 ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: ನಾವು ಮುಂಬೈ ಕರ್ನಾಟಕದವರು, ಮುಂಬೈ ನಮ್ಮದು: ಮಹಾ ಸಿಎಂಗೆ ಡಿಸಿಎಂ ಸವದಿ ತಿರುಗೇಟು‌

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.