ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ದನದ ಕೊಟ್ಟಿಗೆ ಕುಸಿದು ವೃದ್ಧನೋರ್ವ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ನಡೆದಿದೆ.
ಕ್ಯಾತನಬೀಡು ಗ್ರಾಮದ ಬಸವೇಗೌಡ (65) ಮೃತ ದುರ್ದೈವಿ. ಹಸುಗಳಿಗೆ ಮೇವು ಹಾಕಲು ತೆರಳಿದ್ದ ಸಂದರ್ಭದಲ್ಲಿ ಏಕಾಏಕಿ ಕೊಟ್ಟಿಗೆ ಕುಸಿದಿದ್ದು, ಮಣ್ಣಿನ ಗೋಡೆ ಅಡಿ ಸಿಲುಕಿ ಬಸವೇಗೌಡ ಸಾವನ್ನಪ್ಪಿದ್ದಾರೆ. ವೃದ್ಧನ ಜೊತೆಗೆ ಹಸು ಕೂಡ ಪ್ರಾಣ ಬಿಟ್ಟಿದೆ. ಈ ವೇಳೆ ಅಜ್ಜನ ಜೊತೆಗಿದ್ದ ಮೊಮ್ಮಗ ರಮೇಶ್ ಬಚಾವ್ ಆಗಿದ್ದಾನೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಮಣ್ಣಿನಡಿ ಸಿಲುಕಿದ್ದ ಶವ ಹೊರತೆಗೆದಿದ್ದಾರೆ.
ಇದನ್ನೂ ಓದಿ: ಕಾಶಿಯಿಂದ ದೆಹಲಿಗೆ ತೆರಳಿದ ಶಾಸಕ ಅರವಿಂದ ಬೆಲ್ಲದ್: ಸಿಎಂ ಹುದ್ದೆಗೇರಲು ತೆರೆಮರೆಯಲ್ಲೇ ತಯಾರಿ..?