ETV Bharat / state

ಜೂನ್​ 8ರ ನಂತರವೂ ಭಕ್ತರ ಪಾಲಿಗಿಲ್ಲ ಹೊರನಾಡು ದೇವಿಯ ದರ್ಶನ ಭಾಗ್ಯ - Horanadu temple

ಲಾಕ್​ಡೌನ್​ ಸಡಿಲಗೊಳಿಸಿ ಇದೇ ತಿಂಗಳು 8 ರಿಂದ ದೇವಾಲಯಗಳು ತೆರೆಯಬಹುದು ಎಂದು ಸರ್ಕಾರ ಅನುಮತಿಸಿದ್ದರೂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಬಾಗಿಲು ತೆರೆಯುವ ಯೋಚನೆಯನ್ನು ಮುಂದೂಡಿದೆ.

Horanadu temple will not open even after june 8
ಜೂನ್​ 8ರ ನಂತರವೂ ಭಕ್ತರ ಪಾಲಿಗಿಲ್ಲ ಹೊರನಾಡು ದೇವಳ
author img

By

Published : Jun 5, 2020, 6:50 PM IST

ಚಿಕ್ಕಮಗಳೂರು : ಲಾಕ್​ಡೌನ್​ ಹಿನ್ನೆಲೆ ದೇವಾಲಯಗಳ ಪ್ರವೇಶವನ್ನೂ ರದ್ದುಪಡಿಸಲಾಗಿತ್ತು. ಆದರೆ ಸದ್ಯ ಲಾಕ್​ಡೌನ್​ ಸಡಿಲಗೊಳಿಸಿ ಇದೇ ತಿಂಗಳು 8 ರಿಂದ ದೇವಾಲಯಗಳು ತೆರೆಯಬಹುದು ಎಂದು ಸರ್ಕಾರ ಅನುಮತಿಸಿದ್ದರೂ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಬಾಗಿಲು ತೆರೆಯುವ ಯೋಚನೆಯನ್ನ ಮುಂದೂಡಿದೆ.

Horanadu temple will not open even after june 8
ಜೂನ್​ 8ರ ನಂತರವೂ ಭಕ್ತರ ಪಾಲಿಗಿಲ್ಲ ಹೊರನಾಡು ದೇವಳ

ಹೊರನಾಡು ದೇವಸ್ಥಾನ ಆಡಳಿತ ಮಂಡಳಿ ಭಕ್ತರಿಗೆ ದೇಗುಲ ಪ್ರವೇಶ ಹಾಗೂ ವಾಸ್ತವ್ಯ ನಿರಾಕರಣೆ ಮಾಡಿದೆ. ಕೊರೊನಾ ತಡೆಗಟ್ಟಲು ಹಾಗೂ ಕ್ರಮ ವಹಿಸಲು ಇನ್ನು ಕಾಲಾವಕಾಶ ಬೇಕಾಗಿದ್ದು, 8 ರಿಂದ ಭಕ್ತರಿಗೆ ದೇವಸ್ಥಾನಕ್ಕೆ ಬರಲು ಅವಕಾಶವಿಲ್ಲ. ಫೇಸ್ ಬುಕ್ ಲೈವ್ ನಲ್ಲಿ ಮಾತ್ರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಆನ್ ಲೈನ್ ಮೂಲಕ ಪೂಜೆ ನೋಂದಣಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ದಿನಾಂಕ ನೋಡಿ ಭಕ್ತರು ದೇವಸ್ಥಾನಕ್ಕೆ ಬರಲು, ವಾಸ್ತವ್ಯ ಹೂಡಲು ಅವಕಾಶ ಮಾಡಿಕೊಡಲಾಗುವುದು. ಈ ಕುರಿತ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಡಾ. ಬಿ. ಭೀಮೇಶ್ವರ ಜೋಶಿ ಅವರು ಪ್ರಕಟಣೆ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.