ಚಿಕ್ಕಮಗಳೂರು: ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ದೇವಾಲಯ, ಮಸೀದಿ, ಚರ್ಚ್ಗಳಿಗೆ ತೆರಳುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನ ರೀತಿಯಲ್ಲಿ ಮಕ್ಕಳಿಗೆ ಅವರ ಪೋಷಕರ ಕೈಯಲ್ಲೇ ಶಾಲೆಯ ಆವರಣದಲ್ಲಿ ಅಕ್ಷರಭ್ಯಾಸ ಮಾಡಿಸಿರುವ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಹೌದು, ಮಕ್ಕಳ ಕೈಯಲ್ಲಿ ಅರಶಿನ ಕೊಂಬು, ಹಾಲು ಮತ್ತು ಚಂದನದ ನೀರಿನಿಂದ ಅದ್ದಿಸುವ ಮೂಲಕ ಅಕ್ಕಿಯ ಮೇಲೆ ಅಕ್ಷರಭ್ಯಾಸ ಮಾಡಿಸುವ ಮೂಲಕ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಪುಟ್ಟ ಮಕ್ಕಳಿಗೂ ಅಕ್ಷರಭ್ಯಾಸ ಮಾಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನೂರಾರು ಜನ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದ್ದಾರೆ. ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕೆಲ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದ್ದು, ನನಗೂ ಇದೇ ಮೊದಲ ಅಕ್ಷರಭ್ಯಾಸ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಂತರ ಮಾತನಾಡಿದ ಶಾಸಕಿ, ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಂದೆ ತಾಯಿಯ ಕೈಯಲ್ಲಿ ಅಕ್ಷರಭ್ಯಾಸ ಮಾಡಿ, ನಂತರ ಶಾಲೆ ಕಲಿತು ಈಗ ರಾಜಕಾರಣಿಯಾಗಿದ್ದೇನೆ. ಆದರೇ ಮುತ್ತಿಗೆಪುರ ಶಾಲೆ ಕಳೆದ ವರ್ಷದಿಂದ ಎಲ್ಲರನ್ನೂ ಒಗ್ಗೂಡಿಸಿ ಅಕ್ಷರಭ್ಯಾಸ ಮಾಡಿಸುವ ಮೂಲಕ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುತ್ತಿರುವುದು ಉತ್ತಮ ಕೆಲಸ. ನನ್ನ ಜೀವಮಾನದಲ್ಲೇ ಈ ರೀತಿಯ ಪ್ರಯತ್ನವನ್ನು ನೋಡುತ್ತಿರುವುದು ಇದೇ ಪ್ರಥಮ ಬಾರಿಗೆ. ಇದು ನನಗೆ ತಿಳಿದ ಮಟ್ಟಿಗೆ ದೇಶದ ಇತಿಹಾಸದಲ್ಲೇ ಪ್ರಥಮ ಸರ್ಕಾರಿ ಶಾಲೆಯಲ್ಲಿ ಅಕ್ಷರಭ್ಯಾಸ ಮಾಡಿಸುವ ಮೂಲಕ ದಾಖಲಾತಿ ಮಾಡಿಕೊಳ್ಳುತ್ತಿರುವುದು ಎಂದು ಸಂತಸ ವ್ಯಕ್ತಪಡಿಸಿದರು.
-
ಮುತ್ತಿಗೆರೆಪುರ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದೆ.
— Nayana Jhawar /Nayana Motamma (@NayanaJhawar) June 16, 2023 " class="align-text-top noRightClick twitterSection" data="
ಹಳೆಮೂಡಿಗೆರೆ ಗ್ರಾ.ಪಂಚಾಯತಿ ಸದಸ್ಯರಾದ ಶ್ರೀಮತಿ ಜ್ಯೋತಿ ಜಗದೀಶ್, ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀ ಜುಬೇರ್, ವಿನ್ಸಿ ವಾಸು, ಮುಖ್ಯ ಶಿಕ್ಷಕಿ ಶ್ರೀಮತಿ ಭಾರತಿ ಹಾಗೂ ಶಿಕ್ಷಕ ವೃಂದದವರು ಪೋಷಕರು, ಗ್ರಾಮಸ್ಥರು ಭಾಗಿಯಾಗಿದ್ದರು. pic.twitter.com/WrjlZsDMXa
">ಮುತ್ತಿಗೆರೆಪುರ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದೆ.
— Nayana Jhawar /Nayana Motamma (@NayanaJhawar) June 16, 2023
ಹಳೆಮೂಡಿಗೆರೆ ಗ್ರಾ.ಪಂಚಾಯತಿ ಸದಸ್ಯರಾದ ಶ್ರೀಮತಿ ಜ್ಯೋತಿ ಜಗದೀಶ್, ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀ ಜುಬೇರ್, ವಿನ್ಸಿ ವಾಸು, ಮುಖ್ಯ ಶಿಕ್ಷಕಿ ಶ್ರೀಮತಿ ಭಾರತಿ ಹಾಗೂ ಶಿಕ್ಷಕ ವೃಂದದವರು ಪೋಷಕರು, ಗ್ರಾಮಸ್ಥರು ಭಾಗಿಯಾಗಿದ್ದರು. pic.twitter.com/WrjlZsDMXaಮುತ್ತಿಗೆರೆಪುರ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದೆ.
— Nayana Jhawar /Nayana Motamma (@NayanaJhawar) June 16, 2023
ಹಳೆಮೂಡಿಗೆರೆ ಗ್ರಾ.ಪಂಚಾಯತಿ ಸದಸ್ಯರಾದ ಶ್ರೀಮತಿ ಜ್ಯೋತಿ ಜಗದೀಶ್, ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀ ಜುಬೇರ್, ವಿನ್ಸಿ ವಾಸು, ಮುಖ್ಯ ಶಿಕ್ಷಕಿ ಶ್ರೀಮತಿ ಭಾರತಿ ಹಾಗೂ ಶಿಕ್ಷಕ ವೃಂದದವರು ಪೋಷಕರು, ಗ್ರಾಮಸ್ಥರು ಭಾಗಿಯಾಗಿದ್ದರು. pic.twitter.com/WrjlZsDMXa
ಮುತ್ತಿಗೆಪುರ ಸರ್ಕಾರಿ ಶಾಲೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವುದರ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಹಿಂದು, ಕ್ರೈಸ್ತ, ಮುಸ್ಲಿಂರೆಂಬ ಜಾತಿ ಭೇದ ತೋರದೆ ಎಲ್ಲರೂ ನಮ್ಮ ಮಕ್ಕಳೇ, ನಾಳಿನ ಭವಿಷ್ಯ ಎಂಬ ನಿಟ್ಟಿನಲ್ಲಿ ಮಕ್ಕಳ ಪೋಷಕರನ್ನು ಕರೆಸಿ ಅವರ ಕೈಯಲ್ಲಿ ಅಕ್ಷರಭ್ಯಾಸ ಮಾಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಲ್ಕೆಜಿಯ 40 ವಿದ್ಯಾರ್ಥಿಗಳಿಗೆ ಅಕ್ಷರಭ್ಯಾಸ ಮಾಡಿಸುವ ಮೂಲಕ ಶಾಲೆಗೆ ದಾಖಲಿಸಿಕೊಂಡಿದ್ದು ವಿಶೇಷವಾಗಿತ್ತು.
ಒಟ್ಟಾರೆಯಾಗಿ, ಮುತ್ತಿಗೆಪುರ ಸರ್ಕಾರಿ ಶಾಲೆಯಲ್ಲಿ 1 ರಿಂದ 8 ನೇ ತರಗತಿಯವರೆಗೆ 291 ವಿದ್ಯಾರ್ಥಿಗಳಿದ್ದು, 1 ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಹಿಂದಿ ಬೋಧನೆ ಮಾಡಲಾಗುತ್ತಿದೆ. 2023-24 ನೇ ಸಾಲಿನಲ್ಲಿ ಈ ಸರ್ಕಾರಿ ಶಾಲೆಯ ಎಲ್ಕೆಜಿಗೆ 100 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಇನ್ನು ಹಲವು ವಿದ್ಯಾರ್ಥಿಗಳು ಈ ಶಾಲೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: 1ರಿಂದ 5ನೇ ತರಗತಿ ವರೆಗೆ ಒಬ್ಬರೇ ಶಿಕ್ಷಕ: ಶಾಲೆಗೆ ಬರಲು ವಿದ್ಯಾರ್ಥಿಗಳ ಹಿಂದೇಟು