ETV Bharat / state

ಚಿಕ್ಕಬಳ್ಳಾಪುರ: ಪ್ರೀತಿಸಿದ ಹುಡುಗಿಯ ವರಿಸಲು ಒಪ್ಪದ ಪೋಷಕರು, ಯುವಕ ಆತ್ಮಹತ್ಯೆ - ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ

ಪ್ರೀತಿಸಿದ ಹುಡುಗಿಯೊಂದಿಗೆ ಪೋಷಕರು ಮದುವೆ ನಿರಾಕರಿಸಿದರೆಂದು ಮನನೊಂದು ಚಿಕ್ಕಬಳ್ಳಾಪುರದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕ ಆತ್ಮಹತ್ಯೆ
ಯುವಕ ಆತ್ಮಹತ್ಯೆ
author img

By

Published : Jun 19, 2022, 7:24 AM IST

ಚಿಕ್ಕಬಳ್ಳಾಪುರ: ತನ್ನ ಪ್ರೀತಿಯನ್ನು ಪೋಷಕರು ತಿರಸ್ಕರಿಸಿದ ಕಾರಣಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬದಿಯ ಶೆಟ್ಟಿಗೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಬಾಗೇಪಲ್ಲಿ ತಾಲೂಕಿನ ಪಿಚ್ಚಲವಾರಪಲ್ಲಿ ಗ್ರಾಮದ ಮಂಜು ನಾಯಕ್ (24) ಮೃತಪಟ್ಟ ಯುವಕ.

ಅಪ್ರಾಪ್ತ ಹಾಗೂ ಅಂತರ್​ಜಾತಿಯ ಬಾಲಕಿಯನ್ನು ಮಂಜು ಪ್ರೀತಿಸುತ್ತಿದ್ದ. ಹೀಗಾಗಿ, ಎರಡೂ ಕಡೆಯ ಪೋಷಕರು ಮದುವೆ ತಿರಸ್ಕರಿಸಿದ್ದರು. ಇದರಿಂದ ಬೇಸರಗೊಂಡು ಕಳೆದ ಮೂರು ದಿನಗಳ ಹಿಂದೆಯೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಮನೆಯವರು ರಕ್ಷಿಸಿದ್ದರು. ಇದಾದ ನಂತರ ಬೆಂಗಳೂರಿಗೆ ಉದ್ಯೋಗಕ್ಕೆ ಹೋಗುವುದಾಗಿ ಹೇಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.

ಪೇರೇಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಓರ್ವನ ಕೊಲೆ, ಹತ್ತಾರು ವಾಹನಗಳಿಗೆ ಬೆಂಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.