ಚಿಕ್ಕಬಳ್ಳಾಪುರ : ರಾಷ್ಟ್ರೀಯ ನಾಯಕರ ಹೇಳಿಕೆ ದೇಶದಲ್ಲಿ ಅಭದ್ರತೆ, ಅಶಾಂತಿಗೆ ಕಾರಣವಾಗುತ್ತದೆ. ಇದು ರಾಜಕೀಯ ವಿಷಯ ಅಲ್ಲ.
ದೇಶದ ಐಕ್ಯತೆಯ ವಿಷಯ. ದೇಶದಲ್ಲಿ ಶಾಂತಿ ಭಂಗ ತರುವ ವಿಚಾರಗಳು ಆಗಬಾರದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಹಿಜಾಬ್-ಕೇಸರಿ ವಿವಾದದ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಟ್ವೀಟ್‌ಗೆ ಸಂಬಂಧಿಸಿ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ ಅವರು, ಸಹಬಾಳ್ವೆಯಿಂದ ನಡೆದುಕೊಂಡು ಹೋಗಬೇಕು.
ಮೋದಿಯವರ ಆಶಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಯಾವುದೇ ಧರ್ಮದ ಜನರಿಗೆ ನಮ್ಮಿಂದ ಅಸಹಕಾರ ಇರಲ್ಲ, ಎಲ್ಲವನ್ನೂ ಸಮಾನಾಗಿ ನೋಡುವುದೇ ನಮ್ಮ ಆಶಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಆ ತಾಯಿ ಸರಸ್ವತಿ ಎಲ್ಲರಿಗೂ ಒಳ್ಳೆ ಬುದ್ದಿಕೊಡಲಿ.. ಅವಳು ತಾರತಮ್ಯ ಮಾಡೋದಿಲ್ಲ ಎಂದ ರಾಹುಲ್ ಗಾಂಧಿ!
ಇನ್ನೂ ಹಿಜಾಬ್ ಮೂಲಭೂತ ಹಕ್ಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮುಲಭೂತ ಹಕ್ಕುಗಳ ಬಗ್ಗೆ ಓದಿಕೊಳ್ಳಲಿ. ಅವರು ಮಾಜಿ ಸಿಎಂ, ಹಿರಿಯರು, ಸಂವಿಧಾನ ತಿಳಿದವರು, ಮೂಲಭೂತ ಹಕ್ಕುಗಳು ಯಾವುದು ಎಂಬುದು ಓದಿಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.