ETV Bharat / state

ಪುರಸಭೆ ಸದಸ್ಯನಿಂದ 500 ಕುಟುಂಬಗಳಿಗೆ ಉಚಿತ ತರಕಾರಿ ವಿತರಣೆ

ಬಾಗಪಲ್ಲಿ ಪಟ್ಟಣದ ಪುರಸಭೆ ಸದಸ್ಯ ಗಡ್ಡಂ ರಮೇಶ್ 500 ಕುಟುಂಬಗಳಿಗೆ ತರಕಾರಿ ವಿತರಿಸಿದರು.

Distribution of vegetables to 500 families
ತರಕಾರಿ ವಿತರಣೆ
author img

By

Published : Apr 5, 2020, 5:36 PM IST

ಬಾಗೇಪಲ್ಲಿ: ಇಲ್ಲಿನ 1 ಮತ್ತು10 ನೇ ವಾರ್ಡ್​ ನಿವಾಸಿಗಳಿಗೆ ಉಚಿತವಾಗಿ ತರಕಾರಿ ವಿತರಿಸಲಾಯಿತು.

Distribution of vegetables to 500 families
ತರಕಾರಿ ವಿತರಣೆ

ಪಟ್ಟಣದ ಪುರಸಭೆ ಸದಸ್ಯ ಗಡ್ಡಂ ರಮೇಶ್ 500 ಕುಟುಂಬಗಳಿಗೆ ತರಕಾರಿ ವಿತರಿಸಿದರು. ಪ್ರತಿ ಕುಟುಂಬಕ್ಕೆ 5 ಕೆ.ಜಿ ಯಷ್ಟು ತರಕಾರಿಯನ್ನು ವಿತರಿಸಲಾಯಿತು. ಕ್ಷೇತ್ರದ ವಿವಿಧ ಗ್ರಾಮಗಳ ರೈತರು ಬೆಳೆದಿದ್ದ ಕೋಸು, ಬೀನ್ಸ್‌, ಬದನೆ, ಆಲೂಗಡ್ಡೆ, ಟೊಮೆಟೊ ಸೇರಿ ಇತರ ತರಕಾರಿಗಳನ್ನು ವಿತರಿಸಲಾಯಿತು.

ಪಟ್ಟಣದ ನಿವಾಸಿಗಳಿಗೆ ಅಗತ್ಯವಿರುವ ತರಕಾರಿ ಮನೆ ಬಾಗಿಲಿಗೆ ತಲುಪಿಸುತ್ತೇವೆ. ಲಾಕ್​ಡೌನ್​ ಅಂತ್ಯಗೊಳ್ಳುವವರೆಗೂ ಏನೇ ಸೇವೆ ಮಾಡಲು ಸಿದ್ಧನಾಗಿದ್ದೇನೆ. ಜಗತ್ತಿನೆಲ್ಲೆಡೆ ಜನ ಕೋವಿಡ್‌-19 ಕಾಯಿಲೆಯಿಂದ ತತ್ತರಿಸಿದ್ದಾರೆ. ಕೊರೊನಾ ಸೋಂಕು ನಿವಾರಣೆಗೆ ಜಾರಿಯಾಗಿರುವ ಲಾಕ್​​ಡೌನ್​ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಪುರಸಭೆ ಸದಸ್ಯ ಗಡ್ಡಂ ರಮೇಶ್ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.