ಚಿಕ್ಕಬಳ್ಳಾಪುರ: ಕ್ಷೇತ್ರದ ಯಾವ ಗ್ರಾಮಗಳಲ್ಲಿ ನೋಡಿದರೂ ಉಪಚುನಾವಣೆಯ ಗದ್ದಲ, ಒಂದೊಂದು ದಿನ ಒಬ್ಬೊಬ್ಬ ಅಭ್ಯರ್ಥಿಯ ಪ್ರಚಾರ. ಸದ್ಯ ಇಂದು ಬಿಜೆಪಿ ಅಭ್ಯರ್ಥಿಗಳ ಮತ ಭೇಟಿ ಆರಂಭಿಸಿದ್ದು, ಕ್ಷೇತ್ರದ ಜನತೆ ಮಾತ್ರ ಯಾರಿಗೆ ಮತವನ್ನು ನೀಡಬೇಕಪ್ಪ ಎಂಬ ಗೊಂದಲದಲ್ಲಿದ್ದಾರೆ.
ನಿತ್ಯವೂ ರಾಜಕೀಯ ತೀರುವುಗಳಿಂದ ರಾಜ್ಯದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗಿದೆ. ಬಿಎಸ್ಪಿ ಪಕ್ಷದ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆಯಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸುಳ್ಳು ಭರವಸೆಗಳಿಗೆ ಕ್ಷೇತ್ರದ ಜನತೆ ಬೇಸತ್ತಿದೆ. ಬಿಎಸ್ಪಿ ಪಕ್ಷಕ್ಕೆ ಒಮ್ಮೆ ಅವಕಾಶ ಕೊಟ್ಟರೇ ಕೆಲಸ ಮಾಡಿ ತೋರಿಸುತ್ತೇವೆಂದು ಜನತೆಗೆ ಆಶ್ವಾಸನೆಯನ್ನು ನೀಡುತ್ತಿದ್ದಾರೆ.
ಹೇಗಾದರು ಅನರ್ಹ ಶಾಸಕನನ್ನು ಸೋಲಿಸಲೇಬೇಕೆಂದು ಬಿರುಸಿನ ಮತಯಾಚನೆ ನಡೆಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿ ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿಯಾದ ಸುಧಾಕರ್ ವಿರುದ್ದ ಗುಡುಗುತ್ತಿದ್ದಾರೆ.