ETV Bharat / state

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸಿಟಿ ರೌಂಡ್ಸ್ : ಸೋಂಕಿತರ ಯೋಗ ಕ್ಷೇಮ ವಿಚಾರಣೆ - ನಮ್ಮ ಚಿಕ್ಕಬಳ್ಳಾಪುರ

ಜಿಲ್ಲಾಧಿಕಾರಿ ಅರ್ ಲತಾ ಅವರ ತಂಡ ನಗರಗಳ ಕೆಲ ಪ್ರಮುಖ ಬೀದಿಗಳಲ್ಲಿ ಸಂಚರಿ, ಕೋವಿಡ್​ ಪೀಡಿತರ ಮನೆ ಮನೆಗೆ ಹೋಗಿ ಅವರ ಯೋಗ ಕ್ಷೇಮ ವಿಚಾರಿಸಿದರು.

Chikkaballapur DC city Rounds
Chikkaballapur DC city Rounds
author img

By

Published : Apr 28, 2021, 7:38 PM IST

ಚಿಕ್ಕಬಳ್ಳಾಪುರ: ಕೊರೊನಾ ಎರಡನೇ ಅಲೆ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆ, ರಾಜ್ಯ ಸರ್ಕಾರವು 14 ದಿನಗಳ ಜನತಾ ಕರ್ಪ್ಯೂ ಘೋಷಿಸಿದೆ. ಈ ನಿಟ್ಟಿನಲ್ಲಿ ಇಂದು ನಗರಸಭೆಗೆ ಜಿಲ್ಲಾಧಿಕಾರಿ ಆರ್ ಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆ ಅದ್ಯಕ್ಷ ಆನಂದ್ ರೆಡ್ಡಿ (ಬಾಬು) ಮತ್ತು ನೋಡಲ್ ಅಧಿಕಾರಿಗಳ ಜೊತೆ ಸೋಂಕಿತರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಸೋಂಕಿತರೊಬ್ಬರ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ ಅವರು, ಕೊರೊನಾದ ಬಗ್ಗೆ ಆಡಳಿತ ಮಂಡಳಿ ನಿಮಗೆ ಸೌಕರ್ಯ ನೀಡುತ್ತಿದ್ಯಾ ಎಂಬ ಪ್ರಶ್ನೆಗಳು ಕೇಳುವ ಮ‌ೂಲಕ ಕೊರೊನಾ ಸೋಂಕಿತರಿಗೆ ಸ್ಥಳೀಯ ಆಡಳಿತ ಹಾಗೂ ಸಿಬ್ಬಂದಿ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ತಿಳಿದುಕೊಂಡರು. ಮತ್ತೊಂದೆಡೆ ಡಿಸಿ ಅವರ ತಂಡಗಳು ನಗರದ ಕೆಲ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸೋಂಕಿತರಿಗೆ ಹೆದರದಂತೆ ಧೈರ್ಯ ತುಂಬಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ ಅವರು, ಸರ್ಕಾರದ ಆದೇಶದಂತೆ ಕ್ರಮಗಳನ್ನು ಕೈಗೊಂಡಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲಾಡಳಿತ ಅ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 10,000 ಬೆಡ್​ಗಳನ್ನು ಸಿದ್ದತೆ ಮಾಡಿಕೊಂಡಿದೆ. ಇಂದಿನಿಂದ ಸೋಂಕಿನ ಪ್ರಕರಣಗಳು ಕಮ್ಮಿಯಾಗಲಿವೆ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.