ಕೊಳ್ಳೇಗಾಲ: ಮಹದೇಶ್ವರ ಬೆಟ್ಟಕ್ಕೆ ತೆರಳಿ ಹಿಂದಿರುಗುವಾಗ ಬೈಕ್ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಅರುವು ಗ್ರಾಮದ ಐಶ್ವರ್ಯ (18) ಮೃತ ಯುವತಿ. ಬೈಕ್ ಸವಾರ ಆನಂದ್ (22) ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಹದೇಶ್ವರ ಬೆಟ್ಟಕ್ಕೆ ತರಳಿದ್ದ ಇವರು, ಪೂಜೆ ಮುಗಿಸಿ ಮಂಡ್ಯಕ್ಕೆ ಹಿಂದಿರುಗುವಾಗ ಅತೀ ವೇಗದ ಚಾಲನೆಯಿಂದಾಗಿ ತಾಲೂಕಿನ ಚಿಕ್ಕಹಿಂದ್ವಾಡಿ-ಮಧುವನಹಳ್ಳಿ ಮುಖ್ಯ ರಸ್ತೆಯ ತಿರುವಿನಲ್ಲಿ ಆಯ ತಪ್ಪಿ ಬೈಕ್ ಕಾಲುವೆಗೆ ಬಿದ್ದಿದೆ.
ಓದಿ : ಮುಂಬೈ ಸಿಲಿಂಡರ್ ಸ್ಫೋಟ ಪ್ರಕರಣ: 10ಕ್ಕೆ ತಲುಪಿದ ಮೃತರ ಸಂಖ್ಯೆ
ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಡು ತನಿಖೆ ಮುಂದುವರೆಸಿದ್ದಾರೆ.