ಚಾಮರಾಜನಗರ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿಯೊಂದು ಪ್ರವಾಸಿಗರ ಮತ್ತು ಭಕ್ತರ ಕಣ್ಣಿಗೆ ಕಾಣಿಸಿಕೊಂಡಿದೆ. ಬಹಳ ದಿನಗಳ ಬಳಿಕ ಹುಲಿ ದರ್ಶನ ನೀಡಿದೆ. ಇದರಿಂದ ಬೆಟ್ಟಕ್ಕೆ ತೆರಳಿದವರು ರೋಮಾಂಚನಗೊಂಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಮೂಲಕ ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಸಂಜೆ 4.30ಕ್ಕೆ ಹಿಂತಿರುಗುವಾಗ ದೊಡ್ಡ ತಿರುವಿನ ಬಳಿ ಹುಲಿ ಕಂಡಿದೆ. ಗುಡ್ಡದ ಮೇಲೆ ಕುಳಿತು ಹುಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದನ್ನು ಭಕ್ತರು, ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಭರ್ಜರಿ ಬೇಟೆ ತಿಂದುಂಡು ದಣಿವಾರಿಸಿಕೊಳ್ಳುವ ಭಂಗಿಯಲ್ಲಿ ಹುಲಿ ಕುಳಿತಿತ್ತು.
ಇದನ್ನೂ ಓದಿ: ಕುದುರೆಗಾಡಿ ಶರ್ಯತ್ತು ನೋಡಲು ಬಂದವರ ಮೇಲೆ ಹರಿದ ಚಕ್ಕಡಿ: ಮೂವರು ಗಂಭೀರ
ಬಸ್ಸಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇದ್ದಿದ್ದರಿಂದ ಬಸ್ ನಿಲ್ಲಿಸಲು ಬಿಡದೇ ಹೊರಡಿಸಿದರು. ಈ ಹಿಂದೆಯೂ ಕೂಡ ಕಟ್ಟೆಯ ಮೇಲೆ, ರಸ್ತೆ ಮಧ್ಯೆ ಕುಳಿತಿದ್ದು, ರಸ್ತೆ ದಾಟುವ ವೇಳೆ ಪ್ರವಾಸಿಗರಿಗೆ ದರ್ಶನ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಬೆಟ್ಟದ ಹುಲಿ ಜನಪ್ರಿಯವಾಗುತ್ತದೆ. ಈ ಹುಲಿಗೆ ಅಂದಾಜು 6-7 ವರ್ಷಗಳಾಗಿದ್ದು, ಬೆಟ್ಟದ ಸುತ್ತಮುತ್ತಲು ತನ್ನ ಸರಹದ್ದನ್ನು ರೂಪಿಸಿಕೊಂಡಿದೆ ಎನ್ನಲಾಗುತ್ತಿದೆ.