ಚಾಮರಾಜನಗರ: ಮೈತ್ರಿ ಸರ್ಕಾರ ರಚನೆ-ಪತನ, ಡಿಕೆಶಿ ಬಂಧನ, ವಿಪಕ್ಷ ನಾಯಕನಾಗಲು ಹೊರಟಿರುವುದೆಲ್ಲವೂ ಸಿದ್ದರಾಮಯ್ಯನವರ ಆ್ಯಕ್ಷನ್ ಪ್ಲಾನ್ ಎಂದು ಸಚಿವ ಶ್ರೀರಾಮುಲು ಬಾಂಬ್ ಸಿಡಿಸಿದ್ದಾರೆ.
ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್‌ಡಿಡಿ ಮತ್ತು ಸಿದ್ದರಾಮಯ್ಯ ಯಾವತ್ತೂ ಒಂದಾಗಿಲ್ಲ. ಈ ಕಾರಣಕ್ಕಾಗೇ ಅವರು ಈಗ ಕಿತ್ತಾಡುತ್ತಿದ್ದಾರೆ ಎಂದು ಹರಿಹಾಯ್ದರು. ಆರೋಗ್ಯ ಸಚಿವ ಸ್ಥಾನ ತೃಪ್ತಿ ನೀಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೂ ಯಾವ ಸ್ಥಾನ ಕೊಟ್ಡರೂ ತೃಪ್ತಿ ನೀಡಲ್ಲ. ಕಾಯಕವೇ ಕೈಲಾಸ ಎಂದು ನಂಬಿದ್ದು, ಅದರಂತೆ ಕಾರ್ಯ ನಿರ್ವಹಿಸುತ್ತೇನೆ ಎಂದರು.