ಚಾಮರಾಜನಗರ : ಇಂದು ಬೆಳಗ್ಗೆ ನಗರದಲ್ಲಿರುವ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ದೊಡ್ಡ ಗಾತ್ರದ ಹಾವೊಂದು ಪ್ರತ್ಯಕ್ಷವಾಗಿತ್ತು. ಇದರಿಂದಾಗಿ ಸೋಂಕಿತರು ಕೆಲಕಾಲ ಆತಂಕಕ್ಕೀಡಾಗಿದ್ದರು. ಮೂತ್ರ ವಿಸರ್ಜನೆಗೆ ತೆರಳಿದ ಸೋಂಕಿತನಿಗೆ ಹಾವು ಕಾಣಿಸಿತ್ತು. ಆತ ಬೇಸಿನ್ ಮೇಲೆ ಹಾವು ಇದ್ದಿರುವುದನ್ನ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿದ್ದ. ಮತ್ತಷ್ಟು ಮಂದಿಯನ್ನು ಆತ ಕರೆತರುವಷ್ಟರಲ್ಲಿ ನೀರು ಹೋಗುವ ಪೈಪಿನಲ್ಲಿ ಹಾವು ನುಸುಳಿದೆ ಎಂದು ತಿಳಿದು ಬಂದಿದೆ.
ಪೈಪಿನ ಮೇಲ್ಭಾಗ ಇಟ್ಟಿಗೆ ಇಟ್ಟು ಮುಚ್ಚಿದ್ದು, ಹಾವಿನ ಭೀತಿ ಮಾತ್ರ ಸೋಂಕಿತರಲ್ಲಿ ಮನೆ ಮಾಡಿದೆ. ಶೌಚಾಲಯಕ್ಕೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರ ಉರಗ ತಜ್ಞರನ್ನು ಕರೆಸಿ ಹಾವು ಹಿಡಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಹೀಗಾಗಿ, ರೋಗಿಗಳ ಸ್ಥಿತಿ ಅಯೋಮಯವಾಗಿದೆ ಎಂದು ಈಟಿವಿ ಭಾರತ್ನೊಂದಿಗೆ ಕೋವಿಡ್ ಸೋಂಕಿತನೋರ್ವರು ಅಳಲು ತೋಡಿಕೊಂಡಿದ್ದಾರೆ.
ಓದಿ: ತಿಂಗಳುಗಟ್ಟಲೇ ಕದಲದ ಬಿಎಂಟಿಸಿಗಳು.. ಪಕ್ಷಿಗಳಿಗೆ ಸಂತಾನೋತ್ಪತ್ತಿ ತಾಣವಾದ ಸಾರಿಗೆ ಬಸ್