ETV Bharat / state

ಕ್ಯಾಂಪಸ್ ಹೆಸರಲ್ಲಿ ರಸ್ತೆಯನ್ನೇ ಬಂದ್ ಮಾಡಿದ ಮೈವಿವಿಯ ಅಂಬೇಡ್ಕರ್ ಪಿಜಿ ಕೇಂದ್ರ!!

author img

By

Published : Nov 10, 2020, 5:25 PM IST

ಯಾವುದೇ ಕಾರಣಕ್ಕೂ ರಸ್ತೆಯನ್ನು ಮುಚ್ಚುವ ಹಾಗಿಲ್ಲ. ರಸ್ತೆ ಅಭಿವೃದ್ಧಿ ಮಾಡುವುದು ಸಂತೋಷ. ಆದರೆ, ರಸ್ತೆ ಅಭಿವೃದ್ಧಿ ನೆಪದಲ್ಲಿ ಒಂದು ಕಿ.ಮೀ ಅಂತರದ ರಸ್ತೆಯ ಎರಡು ಬದಿಗಳಿಗೆ ಗ್ರಿಲ್ ಅಳವಡಿಸಿ ಮುಚ್ಚಿ, ರೈತರನ್ನು ಅಲ್ಲಿ ಸಂಚರಿಸದಂತೆ ಮಾಡುವ ಅವಶ್ಯಕತೆ..

Chamrajnagar
ಕ್ಯಾಂಪಸ್ ಹೆಸರಲ್ಲಿ ರಸ್ತೆಯನ್ನೇ ಬಂದ್ ಮಾಡಿದ ಮೈವಿವಿಯ ಅಂಬೇಡ್ಕರ್ ಪಿಜಿ ಕೇಂದ್ರ

ಚಾಮರಾಜನಗರ : ತಾಲೂಕಿನ ಬೇಡರಪುರ ಬಳಿ ಇರುವ ಡಾ.ಬಿ ಆರ್ ಅಂಬೇಡ್ಕರ್ ಸ್ನಾತಕೋತ್ತರ ಪದವಿ ಕೇಂದ್ರದ ಆಡಳಿತ ಮಂಡಳಿ ಹಲವಾರು ವರ್ಷಗಳಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಇದ್ದ ರಸ್ತೆಗೆ ಅಭಿವೃದ್ದಿ ಹೆಸರಲ್ಲಿ ಎರಡು ಬದಿಗೆ ಗ್ರಿಲ್ ಅಳವಡಿಸಿ ರೈತರು ಸಂಚರಿಸಲು ಅವಕಾಶ ನೀಡದೇ ಕಿರುಕುಳ ನೀಡುತ್ತಿದ್ದಾರೆ ಎಂದು ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡು ರಸ್ತೆಯಿಂದ ಸ್ನಾತಕೋತ್ತರ ಪದವಿ ಕೇಂದ್ರ ಇರುವ ಒಂದು ಕಿ.ಮೀ. ನಡುವೆ ನೀರುಗಾಲುವೆ ಮತ್ತು ಜನರು ಓಡಾಡಲು ಒಂದು ಸರ್ಕಾರಿ ಓಣಿ ಇತ್ತು.

ಅದನ್ನು ಮುಚ್ಚಲು ಸ್ನಾತಕೋತ್ತರ ಪದವಿ ಕೇಂದ್ರದ ಆಡಳಿತ ಮಂಡಳಿಗೆ ಅಧಿಕಾರ ಇಲ್ಲ. ಇವು ಕಂದಾಯ ಇಲಾಖೆಗೆ ಸೇರಿವೆ. ಅಕ್ಕಪಕ್ಕದ ರೈತರೆಲ್ಲ ಕಂದಾಯ ಕಟ್ಟಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ.

ಯಾವುದೇ ಕಾರಣಕ್ಕೂ ರಸ್ತೆಯನ್ನು ಮುಚ್ಚುವ ಹಾಗಿಲ್ಲ. ರಸ್ತೆ ಅಭಿವೃದ್ಧಿ ಮಾಡುವುದು ಸಂತೋಷ. ಆದರೆ, ರಸ್ತೆ ಅಭಿವೃದ್ಧಿ ನೆಪದಲ್ಲಿ ಒಂದು ಕಿ.ಮೀ ಅಂತರದ ರಸ್ತೆಯ ಎರಡು ಬದಿಗಳಿಗೆ ಗ್ರಿಲ್ ಅಳವಡಿಸಿ ಮುಚ್ಚಿ, ರೈತರನ್ನು ಅಲ್ಲಿ ಸಂಚರಿಸದಂತೆ ಮಾಡುವ ಅವಶ್ಯಕತೆ ಏನಿದೆ ಎಂದು ಅವರು ಕಿಡಿಕಾರಿದರು.

ಸ್ನಾತಕೋತ್ತರ ಪದವಿ ಕೇಂದ್ರದ ಆಡಳಿತ ಮಂಡಳಿ 6.25 ಕೋಟಿ ರೂ.ವೆಚ್ಚದಲ್ಲಿ ಕೇವಲ ಒಂದು ಕಿ.ಮೀ.ಅಂತರದ ರಸ್ತೆ ಅಭಿವೃದ್ದಿ ಕೈಗೊಂಡಿದೆ. ಆದರೆ, ಈ ರಸ್ತೆ ಅಭಿವೃದ್ದಿ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಕ್ಯಾಂಪಸ್ ಇಂಜಿನಿಯರ್ ಇನ್ನು ನಾಲ್ಕುದಿನಗಳಲ್ಲಿ ಇಲ್ಲಿಗೆ ಆಗಮಿಸಿ ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.

ಜೊತೆಗೆ ಎಲ್ಲಿ ಕಳಪೆ ಕಾಮಗಾರಿಯಾಗಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಕ್ಯಾಂಪಸ್ ಸುತ್ತಲಿರುವ ಗ್ರಾಮಗಳ ಜನರು ಹಾಗೂ ಕರ್ನಾಟಕ ರಾಜ್ಯ ರೈತಸಂಘದ ವತಿಯಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.