ETV Bharat / state

ಎನ್​ಡಿಎ ರಾಷ್ಟ್ರೀಯ ವಿಧ್ವಂಸಕರ ಕೂಟ, ಅದನ್ನು ದೇಶ ಬಿಟ್ಟು ಓಡ್ಸಿ : ಪ್ರೊ.ಮಹೇಶ ಚಂದ್ರ ಗುರು

author img

By

Published : Mar 27, 2019, 7:06 PM IST

ಒಂದು ವೇಳೆ ಈ ಬಾರಿ ಎನ್​ಡಿಎ ಅಧಿಕಾರಕ್ಕೆ ಬಂದರೆ ಅಧ್ಯಕ್ಷೀಯ ಪದ್ಧತಿ, ಸರ್ವಾಧಿಕಾರ ದೇಶದಲ್ಲಿ ನೆಲೆಗೊಳ್ಳಲಿದೆ ಎಂದು ಚಿಂತಕ ಪ್ರೊ.ಮಹೇಶ ಚಂದ್ರ ಗುರು ತಿಳಿಸಿದ್ದಾರೆ.

ಪ್ರೊ.ಮಹೇಶ ಚಂದ್ರ ಗುರು

ಚಾಮರಾಜನಗರ: ಎನ್​ಡಿಎ ಎನ್ನುವುದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟವಲ್ಲ, ಅದೊಂದು ರಾಷ್ಟ್ರೀಯ ವಿಧ್ವಂಸಕರ ಕೂಟ ಎಂದು ಚಿಂತಕ ಪ್ರೊ.ಮಹೇಶ ಚಂದ್ರ ಗುರು ಟೀಕಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಯಾವ ಅಭಿವೃದ್ಧಿಯೂ ಮಾಡದೆ ಮೂಲಭೂತವಾದ ಮೆರೆದಿದ್ದಾರೆ. ಒಂದು ವೇಳೆ ಈ ಬಾರಿ ಎನ್​ಡಿಎ ಅಧಿಕಾರಕ್ಕೆ ಬಂದರೆ ಅಧ್ಯಕ್ಷೀಯ ಪದ್ಧತಿ, ಸರ್ವಾಧಿಕಾರ ದೇಶದಲ್ಲಿ ನೆಲೆಗೊಳ್ಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಬ್ರಿಟೀಷರನ್ನು ಭಾರತ ಬಿಟ್ಟು ಓಡಿಸಿದಂತೆ ಬಿಜೆಪಿಯರನ್ನು ದೇಶ ಬಿಟ್ಟು ಓಡಿಸಬೇಕು. ಕ್ವಿಟ್ ಎನ್​ಡಿಎ- ಸೇವ್ ಇಂಡಿಯಾ ಎಂಬುದು ನನ್ನ ಭಾವನೆಯಾಗಿದೆ ಎಂದರು.

ಬಾಬಾ ಸಾಹೇಬರು ಪ್ರಾರಂಭಿಸಿದ ಚಳವಳಿಯನ್ನು ಕಾನ್ಷಿರಾಂ ಮುನ್ನಡೆಸಿದ್ದರು. ಈಗ ಅದನ್ನು ಬಿಎಸ್​ಪಿ ಹಾದಿ ತಪ್ಪಿಸುತ್ತಿದೆ. ಮಾಯಾವತಿ ಇಡೀ ದೇಶವನ್ನೇ ಹಾಳು ಮಾಡುತ್ತಿದ್ದಾರೆ. ದಲಿತರ ವಿರೋಧಿ ಬಿಎಸ್​ಪಿಯಾದರೇ ರಾಷ್ಟ್ರದ ವಿರೋಧಿ ಬಿಜೆಪಿ ಎಂದು ಹೇಳಿಕೆ ನೀಡಿದರು‌. ಸದನದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆ ಮಾಡುವುದನ್ನ ಬಿಟ್ಟು ಮೊಬೈಲ್​ನಲ್ಲಿ ಚೆಂದದ ಹುಡುಗಿಯರ ಫೋಟೋ ನೋಡುವ ಮಹೇಶ್, ಶಾಸಕ ಸ್ಥಾನಕ್ಕೆ ಅಯೋಗ್ಯ ಎಂದರು.

Intro:ಮಹೇಶ್ ಬಿಎಸ್ ಪಿಯ ಮೋದಿ- ಶಿವಕುಮಾರ್ ಅಮಿತ್ ಷಾ: ಪ್ರೊ.ಗುರು ಟೀಕೆ

ಚಾಮರಾಜನಗರ: ಎನ್ ಡಿಎ ಎನ್ನುವುಸು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟವಲ್ಲ, ಅದೊಂದು ರಾಷ್ಟ್ರೀಯ ವಿಧ್ವಂಸಕರ ಕೂಟ ಎಂದು ಚಿಂತಕ ಪ್ರೊ.ಮಹೇಶಚಂದ್ರ ಗುರು ಟೀಕಿಸಿದರು.

Body:ನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಅವರು ಮಾತನಾಡಿ, ಕಳೆದ ೫ ವರ್ಷಗಳಲ್ಲಿ ಯಾವ ಅಭಿವೃದ್ಧಿಯೂ ಮಾಡದೇ ಮೂಲಭೂತವಾದ ಮೆರೆದಿದ್ದಾರೆ. ಒಂದು ವೇಳೆ , ಈ ಬಾರಿ ಎನ್ ಡಿಎ ಅಧಿಕಾರಕ್ಕೆ  ಬಂದರೇ ಇದೇ ಭಾರತದ ಕೊನೇ ಚುನಾವಣೆಯಾಗಲಿದೆ, ಅಧ್ಯಕ್ಷೀಯ ಪದ್ಧತಿ- ಸರ್ವಾಧಿಕಾರ ದೇಶದಲ್ಲಿ ನೆಲೆಗೊಳ್ಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸಿದಂತೆ ಬಿಜೆಪಿಯರನ್ನು ದೇಶ ಬಿಟ್ಟು ಓಡಿಸಬೇಕು. ಕ್ವಿಟ್  ಎನ್ ಡಿಎ- ಸೇವ್ ಇಂಡಿಯಾ ಎಂಬುದು ನನ್ನ ಭಾವನೆಯಾಗಿದೆ. ಈ ರೀತಿಯ ಸರ್ಕಾರವನ್ನು  ಸಮರ್ಥಿಸಿಕೊಳ್ಳುತ್ತಿರುವ ವಿ.ಶ್ರೀನಿವಾಸಪ್ರಸಾದ ಅವರಿಗೆ ತಮ್ಮ ಜೀವನದ ಅಂತ್ಯದಲ್ಲಿ ಇಜ ಬದುಕು ಬೇಕೆ, ಈ ರಾಜಕೀಯ ಬೇಕೆ ಎಂದು ಛೇಡಿಸಿದರು.

ಬಾಬಾಸಾಹೇಬರು ಪ್ರಾರಂಭಿಸಿದ ಚಳವಳಿಯನ್ನು ಕಾನ್ಷಿರಾಂ ಮುನ್ನಡೆಸಿದ್ದರು.ಈಗ ಅದನ್ನು ಬಿಎಸ್ ಪಿ ಹಾದಿ ತಪ್ಪಿಸುತ್ತಿದೆ,  ಮಾಯಾವತಿ ಇಡೀ ದೇಶವನ್ನೇ ಹಾಳು ಮಾಡುತ್ತಿದ್ದಾರೆ ದಲಿತರ ಶತೃ ಬಿಎಸ್ ಪಿಯಾದರೇ ರಾಷ್ಟ್ರದ ಶತೃ ಬಿಜೆಪಿ ಎಂದು ಹೇಳಿಕೆ ನೀಡಿದರು‌.

ಸದನದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆ ಮಾಡುವುದು ಬಿಟ್ಟು ಮೊಬೈಲಿನಲ್ಲಿ ಚೆಂದದ ಹುಡುಗಿಯರ ಫೋಟೋ ನೋಡುವ ಶಾಸಕ ಮಹೇಶ್ ಶಾಸಕ ಸ್ಥಾನಕ್ಕೆ ಅಯೋಗ್ಯ, ಮಹೇಶ್ ಬಿಎಸ್ ಪಿಯ ನರೇಂದ್ರ ಮೋದಿಯಾದರೇ ಅಭ್ಯರ್ಥಿ ಡಾ.ಶಿವಕುಮಾರ್ ಬಿಎಸ್ ಪಿಯ ಅಮಿತ್ ಷಾ ಇವರಿಬ್ಬರನ್ನೂ ಮತದಾರರು ದೂರವಿಡಬೇಕು ಎಂದು ವಾಗ್ದಾಳಿ ನಡೆಸಿದರು.

Conclusion:ದಲಿತ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಇತಿಹಾಸಕಾರ ನಂಜರಾಜೇ ಅರಸ್ ಇನ್ನಿತರರು ಇದ್ದರು.

For All Latest Updates

TAGGED:

BSPBJP
ETV Bharat Logo

Copyright © 2024 Ushodaya Enterprises Pvt. Ltd., All Rights Reserved.