ಚಾಮರಾಜನಗರ: ಮೀನು ಹಿಡಿಯುವಾಗ ನೀರಿಗೆ ಮೂರ್ಛೆ ತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಹಳೆ ಮಾರ್ಟಳ್ಳಿ ಸಮೀಪದ ಚೆಕ್ ಡ್ಯಾಂನಲ್ಲಿ ನಡೆದಿದೆ.
ವಡ್ಡರದೊಡ್ಡಿ ಗ್ರಾಮದ ವೇಲುಸ್ವಾಮಿ ಮೃತ ವ್ಯಕ್ತಿ. ಕಳೆದ ಕೆಲವು ದಿನಗಳಿಂದ ಇವರು ನಿತ್ಯ ಮೀನು ಹಿಡಿಯಲು ಬರುತ್ತಿದ್ದರಂತೆ. ಇಂದು ಕೂಡ ಮೀನು ಹಿಡಿಯಲು ಬಂದಿದ್ದ ವೇಳೆ ಮೂರ್ಛೆ ತಪ್ಪಿ ನೀರಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದಾರೆ. ಸತತ 3 ಗಂಟೆಗಳ ಕಾರ್ಯಾಚರಣೆ ಕೈಗೊಂಡ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹವನ್ನು ಹೊರತೆಗೆದಿದ್ದಾರೆ. ರಾಮಾಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಸಾಹಸ... ಬೋಟ್ಗಳಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಕಬ್ಬು ಸಾಗಿಸಿದ ರೈತರು!