ETV Bharat / state

ನಂಜನಗೂಡು ಸಬ್ ರಿಜಿಸ್ಟರ್​ ಮನೆ ಮೇಲೆ ಲೋಕಾಯುಕ್ತ ದಾಳಿ

author img

By

Published : May 31, 2023, 1:21 PM IST

ನಂಜನಗೂಡು ಹಿರಿಯ ಉಪನೋಂದಣಾಧಿಕಾರಿ ಶಿವಶಂಕರ್ ಮೂರ್ತಿ ಎಂಬುವವರ ಹನೂರಿನ ತೋಟದ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ.

Chamarajanagar
ಉಪ ನೋಂದಣಾಧಿಕಾರಿ ಶಿವಶಂಕರ್ ಮೂರ್ತಿ ನಿವಾಸ

ಚಾಮರಾಜನಗರ: ಇಂದು ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಬೇಟೆಗಿಳಿದಿದ್ದಾರೆ. ನಂಜನಗೂಡು ಹಿರಿಯ ಉಪನೋಂದಣಾಧಿಕಾರಿ ಶಿವಶಂಕರ್ ಮೂರ್ತಿ ಎಂಬುವವರ ಹನೂರಿನ ತೋಟದ ಮನೆಯಲ್ಲಿ ತಲಾಶ್ ನಡೆಸುತ್ತಿದ್ದಾರೆ. ತಾಲೂಕಿನ ಅಜ್ಜೀಪುರ ಗ್ರಾಮದ ಹೊರವಲಯದ ತೋಟದ ಜಮೀನೊಂದರಲ್ಲಿನ ಮನೆಯಲ್ಲಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಶಿವಶಂಕರ್ ಮೂರ್ತಿ ಅವರಿಗೆ ಸೇರಿರುವ ತೋಟದ ಮನೆ ಇದಾಗಿದೆ. ಜಮೀನು ಪತ್ರಗಳು ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ಪತ್ರಗಳು ಸಿಕ್ಕಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಬಿಲ್ಡರ್ಸ್ ಮನೆ, ಕಚೇರಿ ಮೇಲೆ ಐಟಿ ದಾಳಿ: ದಾಖಲೆ ಪರಿಶೀಲನೆ

ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಶಿವಮೊಗ್ಗ, ತುಮಕೂರು, ಹಾವೇರಿ ಹಾಗೂ ಕಲಬುರಗಿಯಲ್ಲಿ ತನಿಖಾಧಿಕಾರಿಗಳು ಸರ್ಕಾರಿ ಅಧಿಕಾರಿಗಳ ನಿವಾಸಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಇಬ್ಬರು ಇಂಜಿನಿಯರ್‌ಗಳ ಮನೆ ಸೇರಿದಂತೆ ಒಟ್ಟು 8 ಕಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎಂದು ಎಸ್​ಪಿ ವಾಸುದೇವರಾಮ್ ತಿಳಿಸಿದ್ದಾರೆ.

ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ: ತುಮಕೂರು ಜಿಲ್ಲೆಯ ಆರ್.ಟಿ. ನಗರದಲ್ಲಿರುವ ಕೆ.ಐ.ಎ.ಡಿ.ಬಿ ಅಧಿಕಾರಿ ನರಸಿಂಹಮೂರ್ತಿ ಎಂಬವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಜತೆಗೆ ಹಾವೇರಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್ ಅವರ ಮನೆ ಮತ್ತು ಕಚೇರಿ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ರಾಣೆಬೆನ್ನೂರು ನಗರದ ನಿವಾಸ ಮತ್ತು ಹಾವೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ನಿರ್ಮಿತಿ ಕೇಂದ್ರದ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕೆಆರ್​ಐಡಿಎಲ್ ಅಧಿಕಾರಿ ಮನೆ ಮೇಲೆ ದಾಳಿ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್​ಐಡಿಎಲ್​) ಕಲಬುರಗಿಯ ಇಂಚಾರ್ಜ್ ಹಾಗೂ ಕೊಪ್ಪಳ ಜಿಲ್ಲೆಯ ಕೆಆರ್​ಐಡಿಎಲ್​ ಕಾರ್ಯನಿರ್ವಾಹಕ ಇಂಜಿನಿಯರ್(EE)​ ಝರಣಪ್ಪ ಚಿಂಚೋಳಿಕರ್ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

ಚಿಕಿತ್ಸೆ ಫಲಿಸದೆ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಲ್ಲೆಗೊಳಗಾದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಮಾಮರ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಹನೂರು ತಾಲೂಕಿನ ಮಾಮರದೊಡ್ಡಿ ಗ್ರಾಮದ ಶಂಭು ಮೃತ ದುರ್ದೈವಿ. ಈ ಘಟನೆ ಸಂಬಂಧ ಮೃತನ ಪತ್ನಿ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪಳನಿಮೇಡು ಗ್ರಾಮದ ಮುನಿಯಪ್ಪ ಎಂಬುವರನ್ನು ಬಂಧಿಸಲಾಗಿದೆ. ಸಹೋದರ ಸಂಬಂಧಿಗಳಾದ ಮುನಿಯಪ್ಪ, ಮುತ್ತು ಹಾಗೂ ಮಾರಿಯಪ್ಪ ಮೂವರು ಸೇರಿ ಶಂಭುವಿನ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಶಂಭು ಚಿಕಿತ್ಸೆಗೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 8 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್​.. ಕೆಜಿಗಟ್ಟಲೇ ಚಿನ್ನಾಭರಣ, ಕಣ್ಣಾಯಿಸಿದಲ್ಲೆಲ್ಲಾ ನಿವೇಶನ ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.