ETV Bharat / state

ಚಾಮರಾಜನಗರದಲ್ಲಿ ಲಾಕ್​ಡೌನ್​ ಸಡಿಲ: ಅಬಕಾರಿ ಇಲಾಖೆಗೆ ಬಂಪರ್...KSRTC ಪಾಪರ್..! - ಮದ್ಯ ಮಾರಾಟ ಜೋರು

ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 41 ಸಾವಿರ ಲೀ. ಮದ್ಯ ಮಾರಾಟವಾಗಿದ್ದು 9 ಸಾವಿರ ಲೀ. ಬಿಯರ್ ಬಿಕರಿಯಾಗಿದೆ.

bar
ಮದ್ಯದಂಗಡಿ
author img

By

Published : May 5, 2020, 12:20 PM IST

ಚಾಮರಾಜನಗರ: ಲಾಕ್​ಡೌನ್ ಎಫೆಕ್ಟ್​ ನಿಂದ ಕಂಗೆಟ್ಟಿದ್ದ ಗಡಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸೋಮವಾರದಿಂದ ಚೇತರಿಕೆ ಕಂಡಿದ್ದು, ಬಹುತೇಕ ಎಲ್ಲಾ ಮಳಿಗೆಗಳ ಮುಂದೆ ಜನರು ಕಿಕ್ಕಿರಿದು ಸೇರಿದ್ದರು. ಮುಖ್ಯವಾಗಿ, ಮದ್ಯದಂಗಡಿಗಳಲ್ಲಂತೂ ಸುಡು ಬಿಸಿಲನ್ನು ಲೆಕ್ಕಿಸದೇ ಗುಂಡುಪ್ರಿಯರು ಎಣ್ಣೆಗಾಗಿ ಹಾತೊರೆದರು.

ಲಾಕ್​ಡೌನ್ ನಿಂದಾಗಿ ಕಳೆದ 45 ದಿನಗಳಲ್ಲಿ ಕೆಎಸ್​ಆರ್​ಟಿಸಿಯ ಚಾಮರಾಜನಗರ ವಿಭಾಗವು ಬರೋಬ್ಬರಿ 60 ಕೋಟಿ ರೂ.‌ ಆದಾಯ ಖೋತಾ ಆಗಿದೆ. ಪ್ರಾಯೋಗಿಕವಾಗಿ ಚಾಮರಾಜನಗರ ಜಿಲ್ಲಾದ್ಯಂತ 15 ಬಸ್ಸುಗಳು ಸೋಮವಾರದಿಂದ ಸಂಚರಿಸುತ್ತಿದ್ದರೂ ಕೇವಲ 30 ಮಂದಿಗೆ ಪ್ರಯಾಣಿಕರಿಗೆ ಸೀಮಿತವಾಗಿರುವುದರಿಂದ ಪ್ರತಿ ಕಿಮೀಗೆ 10 ರೂ. ನಷ್ಟ ಅನುಭವಿಸುತ್ತಿರುವುದಾಗಿ ಈಟಿವಿ ಭಾರತಕ್ಕೆ ಚಾಮರಾಜನಗರ ವಿಭಾಗ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಇನ್ನು, ಲಾಕ್​ಡೌನ್​ಗೂ ಮುನ್ನ ಮಾಸಿಕ ಪಾಸ್ ಪಡೆದಿದ್ದ ಗ್ರಾಹಕರಿಗೆ ಉಳಿಕೆ ದಿನಗಳಲ್ಲಿ ಸಂಚರಿಸುವ ಅವಕಾಶ ಮಾಡಿಕೊಡಲು ಕೇಂದ್ರ ಕಚೇರಿ ನಿರ್ಧರಿಸಿದ್ದು ಶೀಘ್ರವೇ ಸುತ್ತೋಲೆ ಹೊರಡಿಸಲಾಗುವುದು ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಿದ ಮದ್ಯ ಮಾರಾಟ

ಲಾಕ್​ಡೌನ್​ ಅವಧಿಯಲ್ಲಿ ಮದ್ಯ ಸಿಗದೇ ಗುಂಡುಪ್ರಿಯರು ಪರದಾಟ ಅನುಭವಿಸಿ, ಇಂದು‌ ವೈನ್ ಸ್ಟೋರ್ ಹಾಗೂ ಎಂಎಸ್ಐಎಲ್ ಶಾಪ್ ಗಳು ತೆರೆದಿದ್ದರಿಂದ ಸುಡು ಬಿಸಿಲನ್ನು‌ ಲೆಕ್ಕಿಸದೇ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಎಣ್ಣೆ ಕೊಂಡುಕೊಂಡರು.

ಮದ್ಯದಂಗಡಿಗಳಲ್ಲಿ ಬರೋಬ್ಬರಿ 41 ಸಾವಿರ ಲೀ. ಮದ್ಯ ಮಾರಾಟವಾಗಿದ್ದು 9 ಸಾವಿರ ಲೀ. ಬಿಯರ್ ಬಿಕರಿಯಾಗಿದೆ ಎಂದು ಅಬಕಾರಿ ಆಯುಕ್ತ ಮಾದೇಶ್ ಈಟಿವಿ ಭಾರತಕ್ಕೆ ಅಂಕಿ ಅಂಶ ನೀಡಿದ್ದಾರೆ. ಚಾಮರಾಜನಗರಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದ್ದು, ಜಿಲ್ಲೆಯ ಕೊಳ್ಳೇಗಾಲದಲ್ಲಿ ಅತೀ ಹೆಚ್ಚು ಬಿಯರ್ ಬಿಕರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದರೊಟ್ಟಿಗೆ ಹೊಟೇಲ್ ಉದ್ಯಮಗಳು ನೆಲ ಕಚ್ಚಿದ್ದು ಪ್ರವಾಸಿಗರನ್ನೇ ನಂಬಿ‌ ಬದುಕುತ್ತಿದ್ದ ಜನರು‌ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.‌ ಸೋಮವಾರದ ಬೆಳವಣಿಗೆ ಗಮನಿಸಿದರೇ ಕೆಎಸ್​ಆರ್​ಟಿಸಿ ಪಾಪರ್ ಆಗುತ್ತಿದ್ದರೇ ಅಬಕಾರಿ‌ ಇಲಾಖೆ ಬಂಪರ್ ಆದಾಯವನ್ನೇಗಳಿಸಲು ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.