ಕೊಳ್ಳೇಗಾಲ : ಅತೀ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ಯುವಕ ನಿಯಂತ್ರಣ ತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಪಟ್ಟಣದ ಚೌಡೇಶ್ವರಿ ಶಾಲೆಯ ರಸ್ತೆಯಲ್ಲಿ ಜರುಗಿದೆ.
ಪಟ್ಟಣದ ದೊಡ್ಡ ನಾಯಕರ ಬೀದಿಯ ನಿವಾಸಿ ಕುಮಾರ್ ಎಂಬುವರ ಮಗ ಅರುಣ್ (22) ಎಂಬಾತ ಮೃತ ದುರ್ದೈವಿ. ಯುವಕ ಪಟ್ಟಣದ ಚೌಡೇಶ್ವರಿ ಶಾಲೆಯ ರಸ್ತೆಯಲ್ಲಿ ಅತೀ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಆಯಾತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.
ಓದಿ-ಕೇರಳ ಶ್ರೀ ಅನಂತ ಪದ್ಮನಾಭನ ನಿಧಿ ರಹಸ್ಯ : ನಾಗಬಂಧನದ 6ನೇ ಕೊಠಡಿ ತೆರೆಯಲು ಕೋಲಾರಿಗನ ಉತ್ಸುಕತೆ!
ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಾಜುದ್ದೀನ್ ಪ್ರಕರಣ ದಾಖಲಿಸಿಕೊಂಡದ್ದಾರೆ. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಮೃತ್ತದೇಹ ಹಸ್ತಾಂತರಿಸಲಾಗಿದೆ.