ETV Bharat / state

ಚಾಮರಾಜನಗರದಲ್ಲಿ ಬಾಲ್ಯ ವಿವಾಹ: ತಾಳಿ ಕಟ್ಟಿದ ಕಂಡಕ್ಟರ್, ಮಂತ್ರ ಹೇಳಿದ ಅರ್ಚಕರಿಗೂ ಶಿಕ್ಷೆ

ಅಪ್ರಾಪ್ತೆಯನ್ನು ಬಲವಂತದಿಂದ ವಿವಾಹವಾಗಿದ್ದ, ಕೆಎಸ್ಆರ್​ಟಿಸಿ ಕಂಡಕ್ಟರ್ ರವಿಕುಮಾರ್ ಹಾಗೂ ಮದುವೆ ಮಾಡಿಸಿದ ಅರ್ಚಕರಾದ ಕೆ ಎನ್ ಶಾಸ್ತ್ರಿ ಮತ್ತು ರಾಜೇಶ್ವರ್ ಶಾಸ್ತ್ರಿ ಅವರಿಗೆ ಕೋರ್ಟ್​ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

Child marriage in chamarajanagara
ಬಾಲ್ಯ ವಿವಾಹ
author img

By

Published : Sep 28, 2022, 12:18 PM IST

ಚಾಮರಾಜನಗರ: ಅಪ್ರಾಪ್ತೆಯನ್ನು ಪರಿಚಯಿಸಿಕೊಂಡು ಬಲವಂತದಿಂದ ವಿವಾಹವಾಗಿದ್ದ ಬಸ್ ಕಂಡಕ್ಟರ್ ಹಾಗೂ ಮದುವೆ ಮಾಡಿಸಿದ್ದ ಇಬ್ಬರು ಅರ್ಚಕರಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಮಕ್ಕಳ ಸ್ನೇಹಿ ಹಾಗೂ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ, ಆದೇಶ ಹೊರಡಿಸಿದೆ.

ಕೆಎಸ್ಆರ್​ಟಿಸಿ ಕಂಡಕ್ಟರ್ ರವಿಕುಮಾರ್, ಅರ್ಚಕರಾದ ಕೆ ಎನ್ ಶಾಸ್ತ್ರಿ ಮತ್ತು ರಾಜೇಶ್ವರ್ ಶಾಸ್ತ್ರಿ ಶಿಕ್ಷೆಗೊಳಗಾದ ಅಪರಾಧಿಗಳು.‌ ಕಾಲೇಜಿಗೆ ತೆರಳುತ್ತಿದ್ದ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ ಕಂಡಕ್ಟರ್, 2017 ರ ನವೆಂಬರ್ 23 ರಂದು ಕಾರಿನಲ್ಲಿ ಬಲವಂತವಾಗಿ ಹತ್ತಿಸಿಕೊಂಡು ಶ್ರೀರಂಗಪಟ್ಟಣದಲ್ಲಿ ವಿವಾಹ ಮಾಡಿಕೊಂಡಿದ್ದರು. ಈತನಿಗೆ ಇಬ್ಬರು ಅರ್ಚಕರು ಸಹಕಾರ ಕೊಟ್ಟು ವಿವಾಹ ಮಾಡಿಸಿದ್ದರು ಎನ್ನಲಾಗ್ತಿದೆ.

ಇದನ್ನೂ ಓದಿ: 33ರ ಯುವಕನೊಂದಿಗೆ 16ರ ಬಾಲಕಿಗೆ ಕಲ್ಯಾಣ: ವಧು-ವರನ ಪೋಷಕರು ಸೇರಿ ಪುರೋಹಿತನ ವಿರುದ್ಧ ಕೇಸ್​​

ವಿವಾಹವಾದ ಬಳಿಕ ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆ ಮೊದಲನೇ ಆರೋಪಿ ರವಿಕುಮಾರ್​ಗೆ 3 ವರ್ಷ ಶಿಕ್ಷೆ, ಇದರಲ್ಲಿ ಒಂದು ವರ್ಷ ಕಠಿಣ ಶಿಕ್ಷೆ ಮತ್ತು ಅರ್ಚಕರಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಧೀಶರಾದ ಎ ಸಿ ನಿಶಾರಾಣಿ ಈ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ ಯೋಗೇಶ್ ವಾದ ಮಂಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.