ETV Bharat / state

ಚಾಮರಾಜನಗರಕ್ಕೆ ನಾಳೆ ಸಿಎಂ: ಕಾರ್ಯಕ್ರಮದ ಸ್ಥಳ ಕೆಸರುಮಯ

ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜನಗರ ಜಿಲ್ಲೆಗೆ ಆಗಮಿಸುತ್ತಿದ್ದು, ಕಾರ್ಯಕ್ರಮಕ್ಕೆ ಬೃಹತ್​ ವೇದಿಕೆ ಸಿದ್ದವಾಗಿದೆ. ಮ್ಯಾಂಡೋಸ್​ ಚೆಂಡಮಾರುತವು ಕಾರ್ಯಕ್ರಮಕ್ಕೆ ತೊಡಕಾಗುವ ಸಾಧ್ಯತೆ ಇದೆ.

cm-basavaraja-bommai-visiting-chamarajanagar-tomorrow
ಮ್ಯಾಂಡೋಸ್ ಪರಿಣಾಮ... ಸಿಎಂ ಕಾರ್ಯಕ್ರಮದ ಸ್ಥಳ ಕೆಸರುಮಯ
author img

By

Published : Dec 12, 2022, 5:21 PM IST

ಚಾಮರಾಜನಗರ: ಎರಡನೇ ಬಾರಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸುವ ಆತಂಕವಿದೆ. ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲಾಗಿದ್ದು, ಒಂದು ವೇಳೆ ಮಳೆ ಬಂದರೆ ನೀರು ನಿಂತು ವೇದಿಕೆಯ ಆವರಣ ಕೆಸರುಮಯವಾಗಲಿದೆ.

ಮ್ಯಾಂಡೋಸ್ ಚಂಡಮಾರುತದ ಪರಿಣಾಮ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಇನ್ನೂ 3 ದಿನಗಳ ಕಾಲ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದೀಗ ಕೆಸರಾಗಿರುವ ಸ್ಥಳಕ್ಕೆ ಮಣ್ಣು ಸುರಿದು ಹದ ಮಾಡಲಾಗುತ್ತಿದೆ. ನೀರು ಕ್ರೀಡಾಂಗಣದ‌ ಒಳನುಗ್ಗದಂತೆ ಚರಂಡಿಗಳನ್ನು ನಿರ್ಮಿಸಲಾಗುತ್ತಿದೆ.

ನೂರಾರು ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಸಿಎಂ ಕಾರ್ಯಕ್ರಮಕ್ಕೆ 25 ಸಾವಿರ ಆಸನ ಹೊಂದಿರುವ ಬೃಹತ್ ವೇದಿಕೆ ರೂಪುಗೊಂಡಿದೆ.

ಇದನ್ನೂ ಓದಿ: ಮಲ್ಲೇಶ್ವರ ವಿಧಾನಸಭೆ ಕ್ಷೇತ್ರ: ಬ್ರಾಹ್ಮಣ ಅಭ್ಯರ್ಥಿಗೆ ಕಾಂಗ್ರೆಸ್ ಮಣೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.