ಗುಂಡ್ಲುಪೇಟೆ: ತಾಲೂಕಿನ ಕುಂದಕೆರೆ ಗ್ರಾಮದ ಚೇತನ್ ಮೂರ್ತಿ ಹಾಗೂ ಶ್ರುತಿ ಎಂಬುವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25,000 ರೂ.ಗಳ ಚೆಕ್ ಅನ್ನು ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರಿಗೆ ತಲುಪಿಸುವ ಮೂಲಕ ಸರಳ ವಿವಾಹ ಮಾಡಿಕೊಂಡರು.
ಚೆಕ್ ಸ್ವೀಕರಿಸಿ ಮಾತನಾಡಿದ ಶಾಸಕರು, ಇಂತಹ ಸರಳ ವಿವಾಹ ಸಮಾಜಕ್ಕೆ ಅವಶ್ಯಕತೆ ಇದೆ. ಈ ತರಹದ ಸರಳ ಮದುವೆಗಳಿಂದ ಆರ್ಥಿಕ ಸಮಸ್ಯೆಯಿಂದ ಹೊರಬರಬಹುದು ಎಂದರು.
ಲಾಕ್ಡೌನ್ ಹೇರಿದ್ದರ ಹಿನ್ನೆಲೆ ಈ ನವಜೋಡಿ ಸರಳ ವಿವಾಹ ಮಾಡಿಕೊಳ್ಳುವ ಮೂಲಕ ತಾಲೂಕಿನಲ್ಲಿ ಗಮನ ಸೆಳೆಯಿತು.