ಚಾಮರಾಜನಗರ: ಭೀಮನ ಅಮಾವಾಸ್ಯೆ ಪ್ರಯುಕ್ತ ಇಲ್ಲಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರೊಬ್ಬರು 10 ಸಾವಿರ ಒಬ್ಬಟ್ಟುಗಳನ್ನು ಭಕ್ತರಿಗೆ ವಿತರಿಸಿದ್ದಾರೆ.
ಮಂಡ್ಯ ಜಿಲ್ಲೆಯ ಭಕ್ತರೊಬ್ಬರು ಸುಮಾರು 10 ಸಾವಿರ ಒಬ್ಬಟ್ಟುಗಳನ್ನು ನೀಡಿದ್ದು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪ್ರಾಧಿಕಾರದ ಅನುಮತಿ ಪಡೆದು ಒಬ್ಬಟ್ಟುಗಳನ್ನು ಪ್ರಸಾದವಾಗಿ ವಿತರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿ ಎರಡು ದಿನ ಭೀಮನ ಅಮಾವಾಸ್ಯೆ ಬಂದಿದ್ದರಿಂದ ಎರಡೂ ದಿನವೂ ಶ್ರೀಸ್ವಾಮಿಗೆ ವಿಶೇಷ ಪೂಜೆಗಳು ಮತ್ತು ವಿಶೇಷ ಪ್ರಸಾದದ ವ್ಯವಸ್ಥೆ ಇರಲಿದೆ ಎಂದು ಅರ್ಚಕರು ತಿಳಿಸಿದ್ದಾರೆ.
ಬುಧವಾರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, ವಿಶೇಷ ಪೂಜೆ ಹಾಗೂ ಸಂಜೆ ಚಿನ್ನದ ತೇರಿನ ಸೇವೆಗಳು ಜರುಗಿದವು.