ಬೀದರ್: ಉತ್ತರ ಭಾರತದ ವರ್ಲಿ ಕಲೆಯನ್ನೆ ಬಳಸಿಕೊಂಡ ಶಿಕ್ಷಣ ಇಲಾಖಾ ಅಧಿಕಾರಿಗಳು ತಮ್ಮ ಕಚೇರಿಯ ಗೋಡೆಗಳ ಮೇಲೆ ನೂತನ ಪ್ರಯೋಗ ಮಾಡಿದ್ದಾರೆ. ಇದು ಹೇಳಿ ಕೇಳಿ ಗಡಿಭಾಗ. ಇಲ್ಲಿನ ಕಚೇರಿಗಳು ಹೇಳ ತೀರದಂಥ ಸ್ಥಿತಿ. ಅಂಥದರ ನಡುವೆ ಶಿಕ್ಷಣ ಇಲಾಖೆ ಕಚೇರಿಯ ಗೋಡೆ ಮೇಲೆ ಮೂಡಿದ ಕಲಾಕೃತಿಗಳು ಇದೀಗ ಎಲ್ಲರ ಗಮನ ಸೇಳೆದಿವೆ.

ಹೌದು. ಜಿಲ್ಲೆಯ ಔರಾದ್ ಪಟ್ಟಣದ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕಚೇರಿ ಈಗ ವರ್ಲಿ ಕಲೆಯಿಂದ ಕಂಗೊಳಿಸುತ್ತಿದೆ. ಬಿರುಕು ಬಿಟ್ಟ ಗೋಡೆ ಮೇಲೆ ಸುಣ್ಣದಿಂದ ಕೊಳ್ಳುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವಿಠ್ಠಲ್ ಪಕಾಲಿ ಎನ್ನುವವರು ಜನಪದ ನೃತ್ಯ, ಯಕ್ಷಗಾನ, ಕರಾವಳಿ ಶೈಲಿ ಚಿತ್ರ, ಜಾತ್ರೆ, ಪ್ರಕೃತಿ ಚಿತ್ರ, ಗ್ರಾಮೀಣ ಬದುಕು, ಸ್ವಚ್ಛ ಭಾರತ್, ಸ್ತ್ರೀ ಶಿಕ್ಷಣ ಮಹತ್ವ, ಹೊಯ್ಸಳ ಶಿಲಾ ಬಾಲಿಕೆ, ಭ್ರೂಣ ಹತ್ಯೆ, ಬೇಟಿ ಪಡಾವೋ ಬೇಟಿ ಬಚಾವೋ ಹಾಗೂ ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಮೂಲಕ ಗಮನ ಸೇಳೆದಿದ್ದಾರೆ.

ಶೈಕ್ಷಣಿಕವಾಗಿ ತೀರಾ ಹಿಂದುಳಿದ ಭಾಗದಲ್ಲಿ ಸಂಪನ್ಮೂಲ ಕೇಂದ್ರದಲ್ಲಿ ಈ ಹೊಸ ಬೆಳವಣಿಗೆಯಿಂದ ಶಿಕ್ಷಕರು ಕೂಡ ಇದನ್ನು ಅನುಕರಣೆ ಮಾಡುತ್ತಿದ್ದಾರೆ. ತಾಲೂಕಿನ ಹಲವು ಶಾಲೆಗಳಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಇಂತಹ ಅದ್ಭುತವಾದ ಕಲಾಕೃತಿಗಳನ್ನ ಬಿಡಿಸುತ್ತಿದ್ದಾರೆ ಸ್ಥಳೀಯ ಚಿತ್ರ ಕಲಾವಿದರು ಮತ್ತು ಶಾಲಾ ವಿಠ್ಠಲ್ ಪಕಾಲಿ ಅವರ ಕಲೆಯನ್ನು ಹಾಡಿ ಹೊಗಳಿದ್ದಾರೆ.