ETV Bharat / state

ಶಾಲೆಗೆ ಚಕ್ಕರ್ ಹಾಕ್ತಿದ್ದ ಹೆಡ್​ಮಾಸ್ಟರ್ ಸಸ್ಪೆಂಡ್​... ಈಟಿವಿ ಭಾರತ ಇಂಪ್ಯಾಕ್ಟ್

ಬೀದರ್ ತಾಲೂಕು ರಾಜನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸೇರಿದಂತೆ 7 ಜನ ಶಿಕ್ಷಕರ ಗುಂಪು ಶಾಲೆಗೆ ಚಕ್ಕರ್ ಹಾಕಿ ಬಾಡಿಗೆ ಶಿಕ್ಷಕರಿಂದ ಮಕ್ಕಳಿಗೆ ಪಾಠ ಹೇಳಿಸುತ್ತಿರುವುದನ್ನುಈಟಿವಿ ಭಾರತ ಬಯಲಿಗೆಳೆದ ಬೆನ್ನಲ್ಲೇ ಹೆಡ್​​ಮಾಸ್ಟರ್​ಗೆ ತಕ್ಕೆ ಶಿಕ್ಷೆಯಾಗಿದೆ.​​ ಡಿಡಿಪಿಐ ಅವರು ಎಚ್ಚೆತ್ತುಕೊಂಡು ಶಾಲೆಗೆ ದಿಢೀರ್​ ಭೇಟಿ ನೀಡಿ ಮುಖ್ಯಶಿಕ್ಷಕ​ ಎಂ.ಡಿ. ಇಸಾಕ್​ರನ್ನ ಅಮಾನತುಗೊಳಿಸಿದ್ದಾರೆ.

author img

By

Published : Aug 2, 2019, 12:51 AM IST

ಮಕ್ಕಳಿಗೆ ಬಾಡಿಗೆ ಶಿಕ್ಷಕರಿಂದ ಪಾಠ..ಶಾಲೆಗೆ ಚಕ್ಕರ್ ಹಾಕ್ತಿದ್ದ ಹೆಡ್​ಮಾಸ್ಟರ್ ಸಸ್ಪೆಂಡ್​..ಇದು ಈಟಿವಿ ಭಾರತದ ಇಂಪ್ಯಾಕ್ಟ್!

ಬೀದರ್: ಈಟಿವಿ ಭಾರತ ವರದಿ ಜಿಲ್ಲೆಯಲ್ಲಿ ನಿರ್ಲಕ್ಷ್ಯ ತೋರುವ ಶಿಕ್ಷಕರಿಗೆ ಬಿಸಿ ಮುಟ್ಟಿಸಿದೆ. ರಾಜನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಡಿಡಿಪಿಐ ಹೆಚ್​ ಸಿ ಚಂದ್ರಶೇಖರ್​ ದಿಢೀರ್​​ ಭೇಟಿ ನೀಡಿ ಅಲ್ಲಿನ ಹೆಡ್​​ಮಾಸ್ಟರ್​ ಸೇರಿದಂತೆ ಶಿಕ್ಷಕರಿಗೆ ಬೆವರಿಳಿಸಿದ್ದಾರೆ.

ಮುಖ್ಯ ಶಿಕ್ಷಕ ಸೇರಿದಂತೆ 7 ಜನ ಶಿಕ್ಷಕರ ಗುಂಪು ಶಾಲೆಗೆ ಚಕ್ಕರ್ ಹೊಡೆದು ಬಾಡಿಗೆ ಶಿಕ್ಷಕರಿಂದ ಮಕ್ಕಳಿಗೆ ಪಾಠ ಹೇಳಿಸುತ್ತಿರುವುದನ್ನು ನಮ್ಮ 'ಈಟಿವಿ ಭಾರತ' ವೆಬ್​ಚಾನೆಲ್​ನಲ್ಲಿ ವಿಸ್ತೃತ ವರದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಶಾಲೆಯಲ್ಲಿ ನಡೆಯುತ್ತಿದ್ದ ಅನಧಿಕೃತ ಚಟುವಟಿಕೆಗೆಳಿಗೆ ಬ್ರೇಕ್​ ಬಿದ್ದಿದೆ. ಅಲ್ಲದೆ, ವರದಿಯಿಂದ ಎಚ್ಚೆತ್ತುಕೊಂಡಿರುವ ಡಿಡಿಪಿಐ ಅವರು ಮುಖ್ಯಶಿಕ್ಷಕ​ ಎಂ.ಡಿ. ಇಸಾಕ್​ರನ್ನ ಸಸ್ಪೆಂಡ್​ ಮಾಡಿದ್ದಾರೆ.

ಮಕ್ಕಳಿಗೆ ಬಾಡಿಗೆ ಶಿಕ್ಷಕರಿಂದ ಪಾಠ..ಶಾಲೆಗೆ ಚಕ್ಕರ್ ಹಾಕ್ತಿದ್ದ ಹೆಡ್​ಮಾಸ್ಟರ್ ಸಸ್ಪೆಂಡ್​..ಇದು ಈಟಿವಿ ಭಾರತದ ಇಂಪ್ಯಾಕ್ಟ್

ಇದು ಈಟಿವಿ ಭಾರತ್​ ಇಂಪ್ಯಾಕ್ಟ್...!
ಈ ಕುರಿತು 'ಶಾಲೆಗೆ ಸರ್ಕಾರಿ ಶಿಕ್ಷಕರು ಚಕ್ಕರ್...ಮಕ್ಕಳಿಗೆ ಬಾಡಿಗೆ ಶಿಕ್ಷಕರಿಂದ ಪಾಠ!' ಎಂಬ ತಲೆ ಬರಹದಡಿ ಈಟಿವಿ ಭಾರತ್​ನಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ, ಡಿಡಿಪಿಐ ಹೆಚ್.ಸಿ ಚಂದ್ರಶೇಖರ್ ಅವರು ಶಿಸ್ತಕ್ರಮ ಕೈಗೊಂಡಿದ್ದಾರೆ.

ಶಾಲೆಯ ಕಚೇರಿಯಲ್ಲಿ ಕೂರಲಿಕ್ಕೆ ಕುರ್ಚಿ ಕೂಡ ಇರಲಿಲ್ಲ. ಈ ಬಗ್ಗೆ ಮುಖ್ಯಶಿಕ್ಷರನ್ನ ತರಾಟೆಗೆ ತೆಗೆದುಕೊಂಡ ಡಿಡಿಪಿಐ, ಪಕ್ಕದ ಬೆಂಚ್ ಮೇಲೆ ಕುಳಿತರು. ಇವರು ಭೇಟಿ ನೀಡಿದ ಸಂದರ್ಭದಲ್ಲೂ ಬಾಡಿಗೆ ಶಿಕ್ಷಕಿಯರು ಕೆಲಸ ಮಾಡುವುದು ಕಂಡುಬಂತು. ಇನ್ನು, ಮಕ್ಕಳಿಗೆ ಯಾವ ಪಾಠ ಎಲ್ಲಿಗೆ ಬಂದಿದೆ ಅಂತ ಕೇಳಿದ್ರೆ, ಅವರು ಗೊಂದಲದಲ್ಲಿ ಉತ್ತರಿಸಿದ್ದು, ಈ ವೇಳೆ ಕ್ಲಾಸ್​ನಲ್ಲಿದ್ದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ್ರು.

ಇನ್ನು, ಶಾಲೆಯ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ ಡಿಡಿಪಿಐ ಅವರು, ಮುಖ್ಯಶಿಕ್ಷಕ​ ಎಂ.ಡಿ. ಇಸಾಕ್​ರನ್ನ ಅಮಾನತುಗೊಳಿಸಿ, ಇನ್ನುಳಿದ ಶಿಕ್ಷಕರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟಾರೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಜಿಲ್ಲೆಯಲ್ಲಿ ಇನ್ನುಳಿದ ಶಾಲೆಗಳ ಪರಿಸ್ಥಿತಿ ಹೇಗಿದೆ ಅನ್ನುವುದರ ಬಗ್ಗೆಯೂ ಡಿಡಿಪಿಐ ಅವರು ಗಮನ ಹರಿಸಬೇಕಿದೆ. ನಮ್ಮ ವರದಿಗೆ ಸ್ಪಂದಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿರುವ ಡಿಡಿಪಿಐ ಚಂದ್ರಶೇಖರ್ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಇದೇ ರೀತಿ ಅವರು ನಿರ್ಲಕ್ಷ್ಯ ವಹಿಸುತ್ತಿರುವ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಹಿಂದುಳಿದ ಜಿಲ್ಲೆಯಲ್ಲಿ ಶೈಕ್ಷಣಿಕ ಮಟ್ಟ ಸುಧಾರಿಸಲು ಮುಂದಾಗಲಿ ಎಂದು ಈಟಿವಿ ಭಾರತ ತಂಡ ಆಶಿಸುತ್ತದೆ.

Intro:ಬಾಡಿಗೆ ಶಿಕ್ಷಕರಿಂದ ಪಾಠ, ಶಾಲೆಗೆ ಚಕ್ಕರ್ ಹಾಕ್ತಿದ್ದ ಹೇಡ್ ಮಾಸ್ಟರ್ ಸಸ್ಪೇಂಡ್- ಈಟಿವಿ ಭಾರತ ಇಂಪ್ಯಾಕ್ಟ್...!

ಬೀದರ್:
ಸರ್ಕಾರಿ ಶಾಲೆಯ ಶಿಕ್ಷಕರು ಶಾಲೆಗೆ ಬರದೆ ಬಾಡಿಗೆ ಶಿಕ್ಷಕರನ್ನಿಟ್ಟಕೊಂಡು ತಿಂಗಳಿಗೆ ಸರ್ಕಾರದ ಸಂಬಳ ಲಪಟಾಯಿಸುತ್ತಿದ್ದ ಮುಖ್ಯ ಶಿಕ್ಷಕರನ್ನು ಸ್ಪಸ್ಪೇಂಡ್ ಮಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ದುರಂತ ಶಾಲೆಗೆ ಭೇಟಿ ನೀಡಿ ಶಾಲೆಗೆ ಚಕ್ಕರ್ ಹಾಕ್ತಿದ್ದ ಶಿಕ್ಷಕರ ಮೈ ಚಳಿ ಬಿಡಿಸಿದ್ದಾರೆ. ಇದು ಈಟಿವಿ ಭಾರತ ಇಂಪ್ಯಾಕ್ಟ್.

ಬೀದರ್ ತಾಲೂಕಿನ ರಾಜನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರು ಎಂ.ಡಿ ಇಸಾಕ್ ಶಾಲೆಯಲ್ಲಿ ಸೇವೆಗೆ ಬಾರದೆ ಊರಲ್ಲಿದ್ದ ಗೃಹಿಣಿಯರಿಗೆ ಪಾಠ ಮಾಡಲು ಬಿಟ್ಟು ಕರ್ತವ್ಯಕ್ಕೆ ಗೈರಾಗುತ್ತಿದ್ದರು. ಇವರಂತೆ ಉಳಿದ ಶಿಕ್ಷಕರು ಕೂಡ ಶಾಲೆಗೆ ಬರದೆ ಮಕ್ಕಳ ಪಾಠಗಳೆಲ್ಲವೂ ಬಾಡಿಗೆ ಶಿಕ್ಷಕರೆ ನೋಡಿಕೊಳ್ತಿದ್ದರು.

ಈ ಕುರಿತು 'ಶಾಲೆಗೆ ಸರ್ಕಾರಿ ಶಿಕ್ಷಕರು ಚಕ್ಕರ್... ಮಕ್ಕಳಿಗೆ ಬಾಡಿಗೆ ಶಿಕ್ಷಕರಿಂದ ಪಾಠ!' ತಲೆ ಬರಹದಡಿಯಲ್ಲಿ 'ಈಟಿವಿ ಭಾರತ' ನಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೆ ಡಿಡಿಪಿಐ ಎಚ್.ಸಿ ಚಂದ್ರಶೇಖರ್ ಶಾಲೆ ದಿಢಿರ್ ಭೇಟಿ ನೀಡಿದ ದುರಾವಸ್ಥೆ ಕಂಡು ದಂಗಾಗಿ ಹೊದರು. ಶಾಲೆಯ ಕಚೇರಿಯಲ್ಲಿ ಕೂಡಲಿಕ್ಕೆ ಕುರ್ಚಿ ಇಲ್ಲದಕ್ಕೆ ಮುಖ್ಯಗುರು ಇಸಾಕ್ ರನ್ನು ತರಾಟೆಗೆ ತೆಗೆದುಕೊಂಡ ಡಿಡಿಪಿಐ ಪಕ್ಕದ ಬೆಂಚ್ ಮೇಲೆ ಕೂತರು. ಡಿಡಿಪಿಐ ಭೇಟಿ ನೀಡಿದ ಸಂಧರ್ಬದಲ್ಲೂ ಬಾಡಿಗೆ ಶಿಕ್ಷಕಿಯರು ಅಕ್ರಮವಾಗಿ ಕೆಲಸ ಮಾಡುವುದನ್ನು ಕಂಡರು. ಮಕ್ಕಳಿಗೆ ಯಾವ ಪಾಠ ಎಲ್ಲಿಗೆ ಬಂದಿದೆ ಅಂತ ಕೇಳಿದ್ರೆ ಒಂದು ಗೊತ್ತಾಗದಂತೆ ಆದ್ರು ಈ ವೇಳೆಯಲ್ಲಿ ಕ್ಲಾಸ್ ನಲ್ಲಿದ್ದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ್ರು. ಅಲ್ಲದೆ ಶಾಲೆಯಲ್ಲಿ ಬಾಡಿಗೆ ಶಿಕ್ಷಕಿಯರು ಕೆಲಸ ಮಾಡ್ತಿದ್ದು ಸರ್ಕಾರ ನಿಯೋಜಿಸಿದ ಶಿಕ್ಷಕರು ಶಾಲೆಗೆ ಚಕ್ಕರ ಹೊಡೆಯುತ್ತಿದ್ದರು ನಿರ್ವಹಣೆ ನೋಡಬೇಕಾದ ಸಿಆರ್.ಸಿ, ಬಿಆರ್ ಸಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ.

ಬೈಟ್-೦೧: ಎಚ.ಸಿ ಚಂದ್ರಶೇಖರ್- ಡಿಡಿಪಿಐ ಬೀದರ್Body:ಅನೀಲConclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.