ETV Bharat / state

ಪಿಎಂ ಮೋದಿ ಜನ್ಮದಿನದಂದು ಹುಟ್ಟಿದ ಮಗುವಿಗೆ 'ನರೇಂದ್ರ' ಎಂದು ನಾಮಕರಣ - ಪಿಎಂ ಮೋದಿ ಜನ್ಮದಿನದಂದು ಹುಟ್ಟಿದ ಮಗುವಿಗೆ ನರೇಂದ್ರ ಎಂದು ನಾಮಕರಣ ಸುದ್ದಿ

ಪ್ರಧಾನಿ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ನಗರದ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು..

ಪಿಎಂ ಮೋದಿ ಜನ್ಮದಿನದಂದು ಹುಟ್ಟಿದ ಮಗುವಿಗೆ 'ನರೇಂದ್ರ' ಎಂದು ನಾಮಕರಣ

author img

By

Published : Sep 17, 2021, 10:41 PM IST

ಬೀದರ್ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವಿಗೆ 'ನರೇಂದ್ರ' ಎಂದು ದಂಪತಿ ನಾಮಕರಣ ಮಾಡಿದ್ದಾರೆ.

ಚಿಟಗುಪ್ಪ ತಾಲೂಕಿನ ನಿರ್ಣಾವಾಡಿಯ ಅಂಬಿಕಾ ವೀರಶೆಟ್ಟಿ ರಂಜೇರಿ ತಮ್ಮ ಮಗನಿಗೆ 'ನರೇಂದ್ರ' ಎಂದು ಹೆಸರಿಟ್ಟಿದ್ದಾರೆ. ಪ್ರಧಾನಿ ಮೋದಿ ಜನ್ಮದಿನದಂದು ಪುತ್ರ ಜನಿಸಿದ್ದಕ್ಕೆ ಸಂತಸವಾಗಿದೆ. ಹೀಗಾಗಿ, ಈ ದಿನದ ಸವಿನೆನಪಿಗಾಗಿ ಮಗನಿಗೆ ನರೇಂದ್ರ ಎಂದು ಹೆಸರಿಟ್ಟಿದ್ದೇವೆ ಎಂದು ಅಂಬಿಕಾ ಹೇಳಿದರು.

ದಂಪತಿ ತಮ್ಮ ಪುತ್ರನಿಗೆ ನರೇಂದ್ರ ಎಂದು ಹೆಸರು ಇಟ್ಟಿರುವುದು ಸಂತಸ ತಂದಿದೆ. ಪ್ರಧಾನಿ ಜನ್ಮದಿನದಂದು ಕರುಳಬಳ್ಳಿಗೆ ನರೇಂದ್ರ ಎಂದು ನಾಮಕರಣ ಮಾಡಿರುವುದು ದೇಶದ ಜನ ನರೇಂದ್ರ ಮೋದಿ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ಸಾಕ್ಷಿ ಎಂದು ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಹಣ್ಣು-ಹಂಪಲು ವಿತರಣೆ : ಪ್ರಧಾನಿ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ನಗರದ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.